ಹೆಚ್.ಎಸ್.ಮಹದೇವಪ್ರಸಾದ್, ಪುಟ್ಟಬುದ್ದಿ ಸ್ಮರಣಾರ್ಥ ಸಂತೇಮರಹಳ್ಳಿಯಲ್ಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ

ಚಾಮರಾಜನಗರ:  ಮಾಜಿ ಸಚಿವ ದಿ.ಹೆಚ್.ಎಸ್.ಮಹದೇವಪ್ರಸಾದ್ ಹಾಗೂ ಜಿಪಂ ಮಾಜಿ ಸದಸ್ಯ ಡಾ.ಬಿ.ಪಿ.ಪುಟ್ಟಬುದ್ದಿ ಅವರ ಸ್ಮರಣಾರ್ಥ ಸಂತೇಮರ ಹಳ್ಳಿಯಲ್ಲಿ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಎಸ್‍ಎಸ್‍ಡಿ ಕ್ರೀಡಾ ಮತ್ತು ಸಾಂಸ್ಕøತಿಕ ಯೂತ್ ಅಸೋಷಿಯೇಷನ್ ಸಂಘಟನೆ ಆಯೋಜಿಸಿದೆ.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಸೋ ಷಿಯೇಷನ್ ಅಧ್ಯಕ್ಷ ಡಿ.ಎನ್.ನಟರಾಜು ಈ ವಿಷಯ ತಿಳಿಸಿದರು. ಹೆಚ್.ಎಸ್.ಮಹದೇವ ಪ್ರಸಾದ್ ಹಾಗೂ ಬಿ.ಪಿ.ಪುಟ್ಟಬುದ್ದಿ ಅವರನ್ನು ನೆನಪು ಮಾಡಿಕೊಳ್ಳುವ ಉದ್ದೇಶ ಹಾಗೂ ಯುವಜನತೆಯ ಈ ಇಬ್ಬರನ್ನು ಪರಿಚಯಿಸುವ ಉದ್ದೇಶದಿಂದ ಪಂದ್ಯಾವಳಿ ನಡೆಸಲು ತೀರ್ಮಾನಿಸಲಾಗಿದೆ ಎಂದರು. ಮುಂದಿನ ತಿಂಗಳಾಂತ್ಯದಲ್ಲಿ ಸಂತೇಮರಹಳ್ಳಿಯಲ್ಲಿ ಪಂದ್ಯಾ ವಳಿ ನಡೆಯಲಿದೆ. ಜಿಲ್ಲೆಯ ಕ್ರಿಕೆಟ್ ತಂಡ ಮಾತ್ರ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ. ಪ್ರಥಮ ಟ್ರೋಫಿಗೆ ಎಚ್‍ಎಸ್‍ಎಂ ಟ್ರೋಫಿ, ದ್ವಿತೀಯ ಟ್ರೋಫಿಗೆ ಬಿಪಿಪಿ ಎಂದು ಹೆಸರಿಡಲಾಗಿದೆ. ವಿಶ್ವ ವಿದ್ಯಾಲಯಗಳ ನುರಿತ ತರಬೇತಿದಾರರು ಪಂದ್ಯಾವಳಿಯ ಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಾರೆ ಎಂದು ತಿಳಿಸಿದರು.

ನೋಂದಣಿ ಶುಲ್ಕ ಪ್ರತಿ ತಂಡಕ್ಕೆ 3 ಸಾವಿರ ರೂ. ನಿಗಧಿ ಮಾಡಲಾಗಿದೆ. ಪ್ರಥಮ, ದ್ವಿತೀಯ ಸ್ಥಾನ ಅಲ್ಲದೇ ಕ್ರೀಡಾಪಟುಗಳ ದಾಖಲೆಗಳಿಗೂ ಬಹುಮಾನ ನೀಡಲಾಗು ವುದು. ಪಂದ್ಯಾವಳಿಯನ್ನು ಚಿತ್ರನಟರು ಉದ್ಘಾಟಿಸಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಸಚಿವ ಸಿ.ಪುಟ್ಟರಂಗ ಶೆಟ್ಟಿ, ಸಂಸದ ಆರ್.ಧ್ರುವನಾರಾಯಣ್ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. ಸೆ. 30ರವರೆಗೆ ನೋಂದಾವಣಿಗೆ ಅವಕಾಶ ನೀಡಲಾಗಿದೆ. ಸಂತೇಮರಹಳ್ಳಿಯ ದಿ ಪ್ರಿನ್ಸ್ ಆರ್ಯ ಫ್ಯೂಯಲ್ ಪಾರ್ಕ್‍ನಲ್ಲಿ ನೋಂದಾವಣಿ ಮಾಡಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ಮೊ.9901710077, 9880173320 ಸಂಪರ್ಕಿಸಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಅಸೋಸಿಯೇಷನ್ ಡಿ.ಪಿ.ರಾಜು, ರೇಚಂಬಳ್ಳಿ ಕುಮಾರ್, ರವಿ ರಾಮು, ಶಶಿ ಹಾಜರಿದ್ದರು.