ಕಮಾನು ಅಣೆಕಟ್ಟೆಗಳಿಂದ ಹಳ್ಳಿಗಳ ಬದುಕು ಹಸನು

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‍ರಾಜ್ ಸಿಂಗ್ ಮಾಹಿತಿ
ಹಾಸನ: ವ್ಯವಸ್ಥಿತ ಜಲ ಸಂರಕ್ಷಣೆ ಮೂಲಕ ಬರಡು ನೆಲವು ಹಸಿರು ಹೊದಿಕೆಯಾಗಬಲ್ಲದು. ಸರಿ ಯಾದ ತಾಂತ್ರಿಕತೆ ಮತ್ತು ನೈಜ ಆಸಕ್ತಿ ಇದ್ದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಇದನ್ನು ಸಾಧಿಸಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಮೈಸೂರು ಮಿನರಲ್ಸ್‍ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕೆ.ಶಿಪ್‍ನ ಮುಖ್ಯ ಯೋಜನಾಧಿಕಾರಿ ನವೀನ್ ರಾಜ್ ಸಿಂಗ್ ಹೇಳಿದರು.

ನಗರದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಹಾಸನ ವೈದ್ಯ ಕೀಯ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಹು ಕಮಾನಿನ ತಡೆಗೋಡೆಗಳ ನಿರ್ಮಾಣದ ಬಗ್ಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ನೀರಿನ ಮಹತ್ವ ಮತ್ತು ಅದರ ಸಂರಕ್ಷಣೆಗೆ ಅನುಸರಿಸಬಹುದಾದ ವಿಧಾನಗಳ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಇಂಜಿನಿಯರ್‍ಗಳಿಗೆ ಅರಿವು ಮೂಡಿಸಿದರು.

ನಮ್ಮಲ್ಲಿ ಸಾಕಷ್ಟು ಜಲ ಸಂಪನ್ಮೂಲ ವಿದೆ ಮಳೆಯಿಂದಲೂ ಹೆಚ್ಚಿನ ಪ್ರಮಾ ಣದ ನೀರು ಲಭ್ಯವಾಗುತ್ತಿದೆ. ಆದರೆ ಅದರ ಸಮರ್ಪಕ ಸದ್ಬಳಕೆ ಸಂರಕ್ಷಣೆ ಆಗುತ್ತಿಲ್ಲ. ಇದು ಹೀಗೆ ಮುಂದುವರೆದರೆ ಇನ್ನಷ್ಟು ತೀವ್ರ ಸ್ವರೂಪದ ಬರ, ಜಲಕ್ಷಾಮ ಎದುರಾಗಲಿದೆ. ಆದರೆ ಬಹು ಕಮಾನು ಕಿಂಡಿ ಅಣೆಕಟ್ಟೆಗಳ ವ್ಯಾಪಕ ನಿರ್ಮಾಣ ದಿಂದ ಭೂಮಿಯಲ್ಲಿ ನೀರು ಇಂಗಿ ಅಂತರ್ಜಲ ಪರಿಣಾಮಕಾರಿಯಾಗಿ ವೃದ್ಧಿಯಾಗಲಿದೆ ಎಂದರು.

ಯಾವುದೇ ಚೆಕ್ ಡ್ಯಾಂಗಳನ್ನು ನಿರ್ಮಿ ಸುವಲ್ಲಿ ಸಾಕಷ್ಟು ರೀತಿಯ ಪ್ರಯತ್ನ ಹಾಗೂ ಮುನ್ನೆಚ್ಚರಿಕಾ ಕ್ರಮಗಳು ತುಂಬಾ ಮುಖ್ಯ. ಬಹುಕಮಾನಿನ ಅಥವಾ ಏಕ ಕಮಾನಿನ ತಡೆಗೋಡೆಗಳನ್ನು ನಿರ್ಮಿ ಸುವಾಗ ಭೂಮಿಯ ರಚನೆ ಗಮನಿಸಿ ನಂತರ ಕಾಮಗಾರಿ ಕೈಗೊಳ್ಳಬೇಕು. ರಭಸ ವಾಗಿ ಬರುವ ನೀರನ್ನು ತಡೆದು ನಿಲ್ಲಿ ಸಲು ಹಾಗೂ ನಾಲೆಗಳ ಮೂಲಕ ಹೊರ ಹರಿವಿಗೆ ಸೂಕ್ತ ರೀತಿಯ ವಿನ್ಯಾಸ ರೂಪಿ ಸುವುದು ಅಗತ್ಯ ಎಂದು ತಿಳಿಸಿದರು.

ಅನಗತ್ಯ ಕಾಂಕ್ರೀಟ್ ವಿನ್ಯಾಸಗಳನ್ನು ಕಡಿಮೆಗೊಳಿಸಿ ಕನಿಷ್ಠ ವೆಚ್ಚದಲ್ಲಿ ಗರಿಷ್ಠ ನೀರು ನಿಲ್ಲಿಸಬಹುದಾದ ಸದೃಢÀ ತಡೆ ಗೋಡೆಯು ನಿರ್ಮಾಣವಾಗಬೇಕು. ಮಧ್ಯ ಕಮಾನುಗಳಿಗಿಂತ ಎರಡು ಬದಿ ಯಾಂತ್ಯ ಕಮಾನುಗಳು ಎತ್ತರವಾಗಿ ನಿರ್ಮಾಣವಾಗಬೇಕು ಎಂದು ಹೇಳುವ ಜೊತೆಗೆ ಮತ್ತಿತರ ತಾಂತ್ರಿಕ ಮಾಹಿತಿ ಯನ್ನು ಎಲ್ಲರಿಗೂ ಅರ್ಥವಾಗುವಂತೆ ನವೀನ್ ರಾಜ್ ಸಿಂಗ್ ವಿವರಿಸಿದರು.

ತಡೆಗೋಡೆಗಳ ನಿರ್ಮಾಣಕ್ಕೆ ಸೂಕ್ತ ಜಾಗದ ಆಯ್ಕೆ ಪ್ರಮುಖವಾಗಿರುತ್ತದೆ. ಅಣೆಕಟ್ಟೆ ಮುಂಭಾಗವೂ ಸ್ವಲ್ಪ ತಡೆ ಗೋಡೆ ನಿರ್ಮಾಣ ಮಾಡಿ ಸ್ವಲ್ಪ ನೀರು ನಿಲ್ಲುವಂತೆ ಮಾಡಿ ಅದರ ಮೇಲೆ ಮೇಲೆಯೇ ನೀರು ಹೊರ ಹರಿಯುವಂತೆ ಮಾಡುವುದರಿಂದ ಕಾಂಕ್ರಿಟ್‍ನ ಬಾಳಿಕೆ ಸುದೀರ್ಘವಾಗುತ್ತದೆ. ಇಲ್ಲದೆ ತಡೆ ಗೋಡೆಗಳಲ್ಲಿ ಸೋರುವಿಕೆ ಬಿರುಕು ಬಿಡ ದಂತೆ ಮುಂಜಾಗ್ರತೆ ವಹಿಸಿ ಕಾಮಗಾರಿ ಮಾಡಬೇಕು ಎಂದು ಹೇಳಿದರು.

ಸ್ಥಳೀಯವಾಗಿ ದೊರೆಯುವ ಉಪಕರಣ ಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದ ಲ್ಲಿಯೇ ಉತ್ತಮವಾದ ಚೆಕ್‍ಡ್ಯಾಂ ನಿರ್ಮಿ ಸಬಹುದು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯ್‍ಪ್ರಕಾಶ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರ ನಿರ್ದೇಶನದಂತೆಯೇ ಜಿಲ್ಲೆಯಾದ್ಯಂತ ಹೆಚ್ಚಿನ ಚೆಕ್‍ಡ್ಯಾಂಗಳು ನಿರ್ಮಾಣ ಮಾಡಲಾಗುವುದು. ಈಗಾ ಗಲೇ ಜಿಲ್ಲಾ ಪಂಚಾಯಿತಿಯಿಂದ ಜಲ ಮರುಪೂರ್ಣ, ಜಲಸಂರಕ್ಷಣೆ, ಹಸಿರೀ ಕರಣಗಳಂತಹ ಪರಿಸರ ಸಂರಕ್ಷಣೆ ಕಾರ್ಯ ಗಳು ರೂಪಿಸಲಾಗಿದ್ದು, ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡ ಲಾಗುವುದು ಎಂದು ಹೇಳಿದರು.

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಸದ್ಬಳಕೆ ಮಾಡಿ ಕೊಂಡು ಈ ಚೆಕ್‍ಡ್ಯಾಂಗಳು ಹಾಗೂ ಕೊಳವೆಬಾವಿ ಜಲ ಮರು ಪೂರ್ಣ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿ ಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾ ಧಿಕಾರಿ ಪರಪ್ಪಸ್ವಾಮಿ, ಯೋಜನಾ ನಿರ್ದೇಶಕ ಅರುಣ್‍ಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು, ಇಂಜಿನಿಯರ್ ಗಳು ಹಾಜರಿದ್ದರು.

ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಸಣ್ಣ ತಡೆಗೋಡೆಗಳು ಕಮಾನು ಅಣೆಕಟ್ಟೆಗಳು ನಿರ್ಮಾಣವಾದರೆ ಸಾಕಷ್ಟು ನೀರಿನ ಸಮಸ್ಯೆಯನ್ನು ತಪ್ಪಿಸಬಹುದು. ಜೊತೆಗೆ ರೈತರು ಪರ್ಯಾಯವಾಗಿ ಬೆಳೆಗಳನ್ನು ಬೆಳೆದು ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ -ನವೀನ್‍ರಾಜ್ ಸಿಂಗ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ