ಏಪ್ರಿಲ್ ಫೂಲ್ ಬೇಡ, ಏಪ್ರಿಲ್ ಕೂಲ್ ಮಾಡಿ

ಮೈಸೂರು: ಏಪ್ರಿಲ್ ಫೂಲ್ ಮಾಡುವ ಬದಲಿಗೆ ಹೆಚ್ಚು ಬಿಸಿಲಿನ ಧಗೆಯಿರುವ ಏಪ್ರಿಲ್ ತಿಂಗಳಲ್ಲಿ ಏಪ್ರಿಲ್ ಕೂಲ್ ಮಾಡಿ. ಅದಕ್ಕಾಗಿ ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಪೋಷಿಸಿದರೆ ಅವುಗಳು ಬೆಳೆದು ವಾತಾವರಣ ತಂಪಾಗುತ್ತದೆ ಎಂದು ಬ್ರಾಹ್ಮಣ ಮಹಾಸಭಾ ಮೈಸೂರು ಜಿಲ್ಲಾಧ್ಯಕ್ಷ ಡಿ.ಟಿ.ಪ್ರಕಾಶ್ ತಿಳಿಸಿದರು.

ತ್ರಿವಿಧ ದಾಸೋಹಿ ಡಾ.ಶಿವಕುಮಾರಸ್ವಾಮಿ ಯವರ 112ನೇ ಜಯಂತಿ ಅಂಗವಾಗಿ ಮೈಸೂರಿನ ಪ್ರಜ್ಞಾವಂತ ನಾಗರಿಕ ವೇದಿಕೆ ಚಾಮುಂಡಿಪುರಂನ ತಗಡೂರು ರಾಮಚಂದ್ರರಾವ್ ವೃತ್ತದಲ್ಲಿ ಆಯೋ ಜಿಸಿದ್ದ `ಪರಿಸರ ಗಂಗೆ’ ಕಾರ್ಯಕ್ರಮದಲ್ಲಿ ಲಿಂಗೈಕ್ಯ ಶ್ರೀಗಳ ಹೆಸರಿನಲ್ಲಿ ಬಾದಾಮಿ ಸಸಿಯನ್ನು ನೆಟ್ಟು ನೀರೆರೆದರು. ಇಂಥವರ ಜನ್ಮದಿನ ಸಂದರ್ಭದಲ್ಲಿ ವೇದಿಕೆ ಕಾರ್ಯಕರ್ತರ ಸಮಾಜಮುಖಿ ಕಾರ್ಯ ವನ್ನು ಶ್ಲಾಘಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ ಮಾತನಾಡಿ, ನಗರೀಕರಣ ಹೆಚ್ಚುತ್ತಿದೆ. ಕಾಡು ಕಡಿಮೆಯಾಗುತ್ತಿದೆ. ಹೀಗಾಗಿ ಇಂದು ವಾತಾ ವರಣದಲ್ಲಿ ಅಸಮತೋಲನ, ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ನೈಸರ್ಗಿಕವಾಗಿ ಗಿಡ ಮರ ಬೆಳೆಸಿ ಸಮತೋಲನ ಕಾಯ್ದುಕೊಳ್ಳಬೇಕಾಗಿದೆ ಎಂದರು.

ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜ ಪೇಯಿ ಅವರು, ಲಿಂಗೈಕ್ಯ ಸಿದ್ದಗಂಗಾ ಶ್ರೀಗಳ ನೆನಪಿ ನಲ್ಲಿ ನೆಟ್ಟಿರುವ ಗಿಡವು ದೊಡ್ಡ ವೃಕ್ಷವಾಗಿ ಶ್ರೀಗಳಂತೆ ನೂರ್ಕಾಲ ಜನರಿಗೆ ನೆರಳು ನೀಡುವಂತಾಗಲಿ ಎಂದು ಹಾರೈಸಿದರು. ನಗರಪಾಲಿಕೆ ಸದಸ್ಯ ಮ.ವಿ. ರಾಮಪ್ರಸಾದ್ ಮಾತನಾಡಿ, ವೇದಿಕೆ ಹಮ್ಮಿಕೊಂಡಿ ರುವ ಕಾರ್ಯಕ್ರಮ ಇತರರಿಗೆ ಪ್ರೇರಣೆ ನೀಡು ವಂತಿದೆ. ಇದೇ ರೀತಿ ಎಲ್ಲೆಡೆ ಸಸಿಗಳನ್ನು ನೆಡುವ ಮೂಲಕ ಪರಿಸರ ಕಾಪಾಡುವ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ವೇದಿಕೆ ಅಧ್ಯಕ್ಷ ಕಡಕೊಳ ಜಗದೀಶ್, ಅಪೂರ್ವ ಸುರೇಶ್, ಲಯನ್ಸ್ ಯೋಗಾನರಸಿಂಹ, ವೇದಿಕೆ ಉಪಾಧ್ಯಕ್ಷ ವಿಕ್ರಂ ಅಯ್ಯಂಗಾರ್, ಕಾರ್ಯದರ್ಶಿ ಜಯಸಿಂಹ ಶ್ರೀಧರ್, ಮುಖಂಡರಾದ ವಿನಯ್ ಕಣಗಾಲ್, ಹರೀಶ್ ನಾಯ್ಡು, ಸುಚೀಂದ್ರ, ಚಕ್ರ ಪಾಣಿ, ರಂಗನಾಥ್ ಇನ್ನಿತರರು ಉಪಸ್ಥಿತರಿದ್ದರು.
.