ಜಠರ ಕರುಳಿನ ರಕ್ತಸ್ರಾವಕ್ಕೆ ಚಿಕಿತ್ಸೆ; ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ಸಾಧನೆ

ಮೈಸೂರು: ಜಠರ ಕರುಳಿನ ರಕ್ತಸ್ರಾವ ಚಿಕಿತ್ಸೆಯನ್ನು ಮೈಸೂರಿನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಜಠರ ಕರುಳಿನ ರಕ್ತಸ್ರಾವದ ಬಗ್ಗೆ ರೋಗಿಗಳು ಧೈರ್ಯಗೆಡದಿರುವಂತೆ ಆಸ್ಪತ್ರೆಯ ಮುಖ್ಯ ಗ್ಯಾಸ್ಟ್ರೋ ಎಂಟೆರೋಲಜಿಸ್ಟ್ ಡಾ.ಎ.ಕೆ.ಸತೀಶ್‍ರಾವ್ ಇಂದಿಲ್ಲಿ ತಿಳಿಸಿದರು.

ಪಿತ್ತ ಜನಕಾಂಗದ ಸಮಸ್ಯೆಯಿಂದ ರಕ್ತ ಸಂಚಾರಕ್ಕೆ ತೊಂದರೆಯಾಗಿ ಉಬ್ಬಿಕೊಂಡ ರಕ್ತನಾಳಗಳು ಹೊಟ್ಟೆಯಲ್ಲಿಯೇ ಒಡೆದು ಹೋಗುವುದರಿಂದ ರಕ್ತ ವಾಂತಿಯಾಗಲಿದ್ದು, ಈ ಬಗ್ಗೆ ರೋಗಿಗಳು ಧೈರ್ಯಗೆಡದೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದು ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.

ಹೃದಯ ಕವಾಟಗಳಿಗೆ ಅಳವಡಿಸುವ ಸ್ಟಂಟ್ ರೀತಿಯಲ್ಲಿಯೇ ಸಣ್ಣ ಕರುಳಿಗೆ ಸುಮಾರು 16 ಇಂಚು ಉದ್ದದ ಉಪಕರಣವನ್ನು ಅಳÀವಡಿಸಿ ರಕ್ತಸ್ರಾವವನ್ನು ಯಶಸ್ವಿಯಾಗಿ ತಡೆಗಟ್ಟಬಹುದಾಗಿದೆ. ಇದರಿಂದ ರೋಗಿಗೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ. ಇಂತಹ ಚಿಕಿತ್ಸೆಯನ್ನು ಕಳೆದ ಒಂದು ವರ್ಷದ ಅವಧಿಯಲ್ಲಿ 40ರಿಂದ 60 ವರ್ಷ ವಯಸ್ಸಿನ 10 ರೋಗಿಗಳಿಗೆ ಯಶಸ್ವಿಯಾಗಿ ನೆರವೇರಿಸಿದ್ದು, ಅವರೆಲ್ಲರೂ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಈ ಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಸುಭಾಷಿಣ , ವಕೀಲ ಸಿದ್ದೇಗೌಡ, ನಾರಾಯಣರಾವ್ ಅವರು ಮಾತನಾಡಿ ಆಸ್ಪತ್ರೆಯ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ವಿ.ಕಾಮತ್ ಉಪಸ್ಥಿತರಿದ್ದರು.