ನ್ಯಾಯಾಲಯ ಆವರಣದಲ್ಲಿ ಡಾ.ಅಂಬೇಡ್ಕರ್ ಜನ್ಮ ದಿನಾಚರಣೆ

ಮೈಸೂರು: ಯಾವುದೇ ಒಂದು ದೇಶದ ಪ್ರಗತಿಯು ಅಲ್ಲಿನ ಮಹಿಳೆಯರು ಎಷ್ಟು ಉನ್ನತಿ ಹೊಂದಿದ್ದಾರೆ. ಪ್ರಾಶಸ್ತ್ಯ ಪಡೆದಿದ್ದಾರೆಂಬ ಅಂಶಗಳ ಮೇಲೆ ನಿರ್ಧಾರವಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸುರೇಶ್ ಕೆ.ಒಂಟಿ ಗೋಡಿ ಅಭಿಪ್ರಾಯಪಟ್ಟರು.

ಮೈಸೂರು ನ್ಯಾಯಾಲಯದ ಆವರಣ ದಲ್ಲಿ ಮೈಸೂರು ವಕೀಲರ ಸಂಘ ಶನಿ ವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಡಾ.ಬಿ.ಆರ್.ಅಂಬೇ ಡ್ಕರ್ ಅವರು ಮುಖ್ಯವಾಗಿ ಅಸ್ಪøಶ್ಯತೆ ನಿವಾ ರಣೆ ಮತ್ತು ಸಮಾನತೆ ಈ 2 ಪ್ರಮುಖ ವಿಚಾರಗಳನ್ನಿಟ್ಟುಕೊಂಡು ರಾಜಕೀಯ, ಆರ್ಥಿಕ ಮತ್ತು ಸಮಾಜಿಕವಾಗಿ ಎಲ್ಲಾ ರಂಗಗಳಲ್ಲೂ ಸಮಾನತೆ ಬರಬೇಕೆಂದು ಹೋರಾಟ ನಡೆಸಿದರು. ಅಷ್ಟೇಯಲ್ಲದೆ, ಸಂವಿಧಾನ ರಚಿಸುವುದಕ್ಕೂ ಮುನ್ನ 60 ದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಸಂವಿ ಧಾನಗಳಲ್ಲಿನ ಅಂಶಗಳನ್ನು ಆಳವಾಗಿ ಅಧ್ಯಯನ ಮಾಡಿ ಭಾರತಕ್ಕೆ ಶ್ರೇಷ್ಠ ಸಂವಿ ಧಾನ ನೀಡಿದರು ಎಂದು ಸ್ಮರಿಸಿದರು.

ಉಚ್ಚ ನ್ಯಾಯಾಲಯದ ನ್ಯಾಯ ಮೂರ್ತಿ ಅರವಿಂದ್ ಕುಮಾರ್ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಅವರು ಶಾಲಾ ಅವಧಿಯಲ್ಲಿ ಮೇಲ್ವರ್ಗದ ವಿದ್ಯಾರ್ಥಿ ಗಳಿಂದ ಯಾತನೆ ಅನುಭವಿಸುತ್ತಿದ್ದರು. ಈ ವೇಳೆ ಶಿಕ್ಷಕರೊಬ್ಬರು ಅಂಬೇಡ್ಕರ್ ರವರ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಿ ದರು. ಇದು ಅವರ ಏಳಿಗೆಗೆ ಸಹ ಕಾರಿಯಾಯಿತು. ಹಾಗಾಗಿ ವಿದ್ಯಾರ್ಥಿ ಗಳು ಶಿಕ್ಷಕರನ್ನು ಮೊದಲು ಗೌರವಿಸ ಬೇಕು ಎಂದು ಸಲಹೆ ನೀಡಿದರು.

ಅಂಬೇಡ್ಕರ್‍ವಾದಿ ನಾಗಸಿದ್ಧಾರ್ಥ ಹೊಲೆಯಾರ್ ಮಾತನಾಡಿ, ಭಾರತದ ಇತಿಹಾಸದಲ್ಲೇ ನ್ಯಾಯಾಧೀಶರೇ ಸೇರಿ ಸುದ್ದಿಗೋಷ್ಠಿ ನಡೆಸಿದ ನಿದರ್ಶನಗಳಿ ರಲಿಲ್ಲ. ಇಂತಹ ಪ್ರವೃತ್ತಿ ಬೆಳೆಯಬಾರದು. ಸಂವಿಧಾನ ರಕ್ಷಣೆ ಮಾಡುವ ಜವಾಬ್ದಾರಿ ನ್ಯಾಯಾಧೀಶರು ಮತ್ತು ವಕೀಲರ ಮೇಲಿದೆ. ಜತೆಗೆ ವಕೀಲರ ಸಂಘದಂತೆ ನ್ಯಾಯಾಧೀಶರ ಸಂಘವೂ ರಚನೆಯಾಗಿ ಸಾಮಾಜಿಕ ನ್ಯಾಯ ಸಿಗುವಂತಾಗಬೇಕು ಎಂದ ಅವರು, ಇಂದು ನ್ಯಾಯಾಂಗ ಮೇಲೆ ಮಾತ್ರವಲ್ಲ ಕಾನೂನುಗಳ ಮೇಲೂ ದೌರ್ಜನ್ಯ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಭಾರತದಲ್ಲಿ ರಚನೆಯಾದ ಸಂವಿಧಾನಕ್ಕೂ ಹಿಂದೆಯಿದ್ದ ಅಲಿಖಿತ ಸಂವಿಧಾನಕ್ಕೂ ವ್ಯತ್ಯಾಸವಿದೆ. 2011ರ ಜನಗಣತಿ ಪ್ರಕಾರ 53 ಸಾವಿರ ಉಪಜಾತಿ ಗಳಿದ್ದು, ಇದು ನ್ಯಾಯಾಂಗಕ್ಕೂ ಅಂಟಿದೆ. ದೇಶದಲ್ಲಿ 714 ಮಂದಿ ನ್ಯಾಯಮೂರ್ತಿ ಗಳಿದ್ದು, ಅದರಲ್ಲಿ 28 ಮಂದಿ ಮಾತ್ರ ಎಸ್ಸಿ/ಎಸ್ಟಿಗೆ ಸೇರಿದವರಿದ್ದಾರೆ ಎಂದರು.

ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದಕುಮಾರ್, ಸಂಘದ ಕಾರ್ಯ ದರ್ಶಿ ಬಿ.ಶಿವಣ್ಣ, ಕರ್ನಾಟಕ ವಕೀಲರ ಪರಿಷತ್ತಿನ ಸದಸ್ಯ ಬಿ.ಆರ್.ಚಂದ್ರಮೌಳಿ, ಸಂಘದ ಉಪಾಧ್ಯಕ್ಷ ಎಸ್.ಜಿ. ಶಿವಣ್ಣೇ ಗೌಡ ಉಪಸ್ಥಿತರಿದ್ದರು.