ಡಾ. ಎ.ವಿ.ನರಸಿಂಹಮೂರ್ತಿಯವರ ‘ಇತಿಹಾಸದ ನಕ್ಷತ್ರಗಳು’ ಕೃತಿ ಬಿಡುಗಡೆ

ಮೈಸೂರು: ಇಂದಿನ ಸಮಾಜದಲ್ಲಿ ಇತಿಹಾಸದ ಬಗ್ಗೆ ಬಹುತೇಕ ನಿರಾಸಕ್ತಿ ಮೂಡುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ವಿದ್ವಾಂಸರೂ ತೀರಾ ವಿರಳವಿದ್ದಾರೆ ಎಂದು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಹೇಳಿದರು.

ಮೈಸೂರು ವಿಜಯನಗರದ ಭಾರ ತೀಯ ವಿದ್ಯಾಭವನದ (ಬಿವಿಬಿ) ಸಭಾಂಗಣದಲ್ಲಿ ಬಿವಿಬಿ, ಭವನ್ಸ್ ಪ್ರಿಯಂವದ ಬಿರ್ಲಾ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಸಂಯುಕ್ತಾಶ್ರಯದಲ್ಲಿ ಶನಿ ವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬಿವಿಬಿ ಮೈಸೂರು ಕೇಂದ್ರದ ಅಧ್ಯಕ್ಷ ಡಾ. ಎ.ವಿ.ನರಸಿಂಹಮೂರ್ತಿ ಅವರ `ಇತಿಹಾಸದ ನಕ್ಷತ್ರಗಳು’ ಕೃತಿ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.

ಪ್ರಸ್ತುತ ಇತಿಹಾಸ ಓದುವುದರಿಂದೇನು? ಲಾಭ ಎಂಬ ಅಭಿಪ್ರಾಯವೇ ಹೆಚ್ಚಾಗಿದ್ದು, ಮಾಧ್ಯಮಗಳಲ್ಲಿ ಇತಿಹಾಸದ ಬಗ್ಗೆ ಚರ್ಚಾ ಕಾರ್ಯಕ್ರಮ ನಡೆಸಲೂ ವಿದ್ವಾಂಸರು ಸಿಗದ ಪರಿಸ್ಥಿತಿ ಇದೆ. ಹೀಗಾಗಿ ಅಲ್ಪಸ್ವಲ್ಪ ತಿಳಿದವರನ್ನೇ ಆಹ್ವಾನಿಸುವ ಅನಿವಾರ್ಯತೆ ಎದುರಾಗುವ ಸಂಭವವೇ ಹೆಚ್ಚಿದೆ ಎಂದರು.

ಇತಿಹಾಸ ತಿಳಿಯದಿದ್ದರೆ ನಾಳೆಗಳನ್ನು ಕಟ್ಟಿಕೊಳ್ಳಲಾಗದು. ಭಾರತದ ಇತಿಹಾಸದ ಬಗ್ಗೆ ಭಾರತದಲ್ಲೇ ಇದ್ದು ನೋಡಿದರೆ ಅದರ ಮಹತ್ವ ಅರಿವಾಗದು. ಬದಲಾಗಿ ರಾಷ್ಟ್ರದಿಂದ ಹೊರ ಹೋದಾಗ ಅದರ ಪ್ರಾಮುಖ್ಯತೆ ನಮಗೆ ಅರಿವಾಗುತ್ತದೆ. ವೃತ್ತಿ ಕಾರಣಕ್ಕಾಗಿ ಅನೇಕ ದೇಶಗಳಿಗೆ ಭೇಟಿ ನೀಡಿದ್ದೇನೆ. ಚಿಕ್ಕ ಚಿಕ್ಕ ರಾಷ್ಟ್ರಗಳಲ್ಲೂ ಇತಿ ಹಾಸದ ಬಗ್ಗೆ ಕಾಳಜಿ ವಹಿಸುವುದನ್ನು ಕಂಡಿದ್ದೇನೆ. ಕ್ಯಾಲಿಫೋರ್ನಿಯ ವಿವಿ ಯಲ್ಲಿ 83 ವರ್ಷ ವಯಸ್ಸಿನ ಮಹಿಳೆ ತನ್ನ 7ನೇ ಪಿಹೆಚ್.ಡಿ ಪದವಿಗಾಗಿ ವ್ಯಾಸಂಗ ಮಾಡುತ್ತಿದ್ದನ್ನು ಕಂಡು ಅಚ್ಚರಿಗೊಂಡಿದ್ದೆ. ಆದರೆ ನಮ್ಮಲ್ಲಿ ಆ ರೀತಿ ಸನ್ನಿವೇಶ ಇಲ್ಲದಿರುವುದು ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಇತಿಹಾಸ ಅರ್ಥೈಸಿಕೊಳ್ಳುವುದು ಕಷ್ಟಸಾಧ್ಯ ವೇನಲ್ಲ. ಇತಿಹಾಸವೆಂದರೆ ಕೇವಲ ರಾಜ ಮಹಾರಾಜರು, ಯೋಧ-ಯುದ್ಧವೇ ಮಾತ್ರ ವಲ್ಲ. ಸಾಮಾನ್ಯ ಜನಜೀವನವೂ ಇತಿಹಾಸದ ಭಾಗವೇ ಆಗಿದೆ. ನಮ್ಮ ಮಾಧ್ಯಮ ಕ್ಷೇತ್ರದಲ್ಲೂ ಬಹಳಷ್ಟು ಮಂದಿ ಇತಿಹಾಸ ಎಂದರೆ ನಿರಾಸಕ್ತಿ ತೋರುತ್ತಾರೆ. ಇತಿ ಹಾಸದಿಂದ ಯಾವುದೇ ಲಾಭವಿಲ್ಲ ಎಂಬ ಕೆಟ್ಟ ಅಭಿಪ್ರಾಯವೇ ಇದಕ್ಕೆ ಕಾರಣ. ನಮ್ಮ ಸುದ್ದಿ ಮಾಧ್ಯಮದಲ್ಲಿ ಪ್ರಸಾರ ಮಾಡು ವುದೂ ಇತಿಹಾಸದ ಒಂದು ಭಾಗವೇ ಆಗಿದೆ. ನಮ್ಮ ಸಂಪಾದಕರಾಗಿದ್ದ ವೈಎನ್‍ಕೆ (ವೈ.ಎನ್.ಕೃಷ್ಣಮೂರ್ತಿ) ಹೇಳುತ್ತಿದ್ದ ಮಾತೆಂದರೆ, `ಸುದ್ದಿಯಲ್ಲಿ ಹೇಳುವುದೂ ಇತಿಹಾಸ ತುಣುಕನ್ನೇ’ ಎನ್ನುತ್ತಿದ್ದರು. ಆದರೆ ಮಾಧ್ಯಮದಲ್ಲಿದ್ದೂ ಅದರ ಸಾಮಾನ್ಯ ಅರಿವು ಇಲ್ಲವಾದರೆ ಕಷ್ಟದ ಸನ್ನಿವೇಶ ಎದು ರಾಗುತ್ತದೆ. ಇಂತಹ ಸಂದರ್ಭದಲ್ಲಿ ಇತಿ ಹಾಸಕ್ಕೆ ಸಂಬಂಧಿಸಿದಂತೆ ಪುಸ್ತಕ ಪ್ರಕಟಿ ಸುವುದು ಹುಡುಗಾಟವಲ್ಲ ಎಂದು ನುಡಿದರು.

ಇತಿಹಾಸವೆಂದರೆ ಮೂಗು ಮುರಿ ಯುವವರ ಕುರಿತು ವ್ಯಂಗ್ಯವಾಡಿದ ಅವರು, ಇತಿಹಾಸದ ಅರಿವಿಲ್ಲದಿದ್ದರೂ ಎಲ್ಲಾ ಗೊತ್ತು ಎಂದು ಭ್ರಮೆಯಲ್ಲಿರುವವರಿಗೆ ಈ ಪುಸ್ತಕ ಕಣ್ಣು ತೆರೆಸುತ್ತದೆ. ಆಳುವ ಸರ್ಕಾರಗಳು ಇಂತಹ ಉತ್ತಮ ಪುಸ್ತಕಗಳನ್ನು ಶೈಕ್ಷಣಿಕ ವ್ಯವಸ್ಥೆಯಲ್ಲಿ ದೊರೆಯುವಂತೆ ಮಾಡು ತ್ತಾರೆ ಎಂದುಕೊಂಡರೆ ಅದು ನಮ್ಮ ಭ್ರಮೆ ಯಾಗುತ್ತದೆ. ಏಕೆಂದರೆ ಅವರಿಗೆ ಅಂತಹ ಒಳ್ಳೆಯದರ ಬಗ್ಗೆ ಆಸಕ್ತಿ ಇರುವುದಿಲ್ಲ. ಅವರಿಗೆ ಅವರಿಗಾಗುವ ಲಾಭದತ್ತಲೇ ಒಲವು ಹೊರತು ಸಮಾಜದ ಬಗ್ಗೆ ಕಳಕಳಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇತಿಹಾಸ ಬಿಂಬಿಸುವ ಸ್ಮಾರಕಗಳು ಯಾರಿಗೇನು ಕೆಡಕು ಮಾಡುವುದಿಲ್ಲ. ಅವುಗಳನ್ನು ವಿಕೃತಿಗೊಳಿಸುವ ಕೃತ್ಯ ಸಲ್ಲದು. ಚಾಮುಂಡಿ ಬೆಟ್ಟಕ್ಕೆ ಮೊದಲು ಮಹಾ ಬಲೇಶ್ವರ ಬೆಟ್ಟ ಎಂದು ಕರೆಯುತ್ತಿದ್ದರು. ಅದೆಷ್ಟೊ ಯುವ ಜನರು ಸ್ನೇಹಿತರೊಂದಿಗೆ ಲೆಕ್ಕವಿಲ್ಲದಷ್ಟು ಬಾರಿ ಬೆಟ್ಟಕ್ಕೆ ಭೇಟಿ ನೀಡಿರುತ್ತಾರೆ. ಆದರೆ ಈ ಬಗ್ಗೆ ಅರಿತವರು ತೀರಾ ವಿರಳ. ಸ್ಮಾರ್ಟ್ ಫೋನ್‍ಗಳು, ಇಂಟರ್ ನೆಟ್‍ನಲ್ಲಿ ಮುಳುಗಿರುವ ಯುವ ಸಮು ದಾಯಕ್ಕೆ ಅದೇ ತಂತ್ರಜ್ಞಾನದ ಮೂಲಕ ವಾದರೂ ಇತಿಹಾಸ ಅರಿಯುವ ಕಾಳಜಿ ಇಲ್ಲ. ನಾನು ಯಾವುದೇ ಸಾಮಾಜಿಕ ಜಾಲ ತಾಣ ಬಳಸದಿದ್ದರೂ ಬಳಸುವವರಿಗಿಂತಲೂ ಹೆಚ್ಚು ತಿಳಿದಿದ್ದೇನೆ. ನಾವು ಜ್ಞಾನಕ್ಕೆ ದಾಸ ರಾಗಬೇಕೆ ಹೊರತು ತಂತ್ರಜ್ಞಾನದ ಉಪ ಕರಣಗಳಿಗಲ್ಲ ಎಂದು ಪ್ರತಿಪಾದಿಸಿದರು.

ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್.ತಾರಾ ನಾಥ್ ಕೃತಿ ಕುರಿತು ಮಾತನಾಡಿದರು. ಬಿವಿಬಿ ಬೆಂಗಳೂರು ಕೇಂದ್ರದ ಅಧ್ಯಕ್ಷ ಎನ್. ರಾಮಾನುಜ ಅಧ್ಯಕ್ಷತೆ ವಹಿಸಿದ್ದರು. `ಮೈಸೂರು ಮಿತ್ರ’ ಮತ್ತು ‘ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥ ಮಾಲೆ ಪ್ರಕಾಶನದ ಪ್ರಕಾಶಕ ಟಿ.ಎಸ್.ಛಾಯಾಪತಿ, ಕೃತಿ ಕರ್ತೃ ಡಾ.ಎ.ವಿ.ನರಸಿಂಹಮೂರ್ತಿ, ಪಾಲಿಕೆ ಮಾಜಿ ಸದಸ್ಯ ಎಸ್.ಬಾಲಸುಬ್ರಹ್ಮಣ್ಯ (ಸ್ನೇಕ್ ಶ್ಯಾಂ) ಬಿವಿಬಿ ಮೈಸೂರು ಕೇಂದ್ರದ ಕೋಶಾ ಧ್ಯಕ್ಷ ಡಾ.ಎ.ಟಿ.ಭಾಷ್ಯಂ ಸೇರಿದಂತೆ ಅನೇಕ ಗಣ್ಯರು, ವಿದ್ಯಾರ್ಥಿಗಳು ಹಾಜರಿದ್ದರು.