ಕೌಟಿಲ್ಯ ವಿದ್ಯಾಲಯದ ಡಾ.ಎಲ್.ಸವಿತಾ ಅವರಿಗೆ ‘ಅವಂತಿಕಾ ಡಾ.ಎಪಿಜೆ ಅಬ್ದುಲ್ ಕಲಾಂ’ ಪ್ರಶಸ್ತಿ

ಮೈಸೂರು: ಮೈಸೂರು ಕೌಟಿಲ್ಯ ವಿದ್ಯಾ ಲಯದ ಪ್ರಾಂಶುಪಾಲ ರಾದ ಡಾ.ಎಲ್.ಸವಿತಾ ಅವರಿಗೆ ‘ಅವಂತಿಕಾ ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿ ಲಭಿಸಿದೆ.

ಶಿಕ್ಷಣ ಕ್ಷೇತ್ರದಲ್ಲಿ ಇವರು ಮಾಡಿರುವ ಸಾಧನೆಗಳನ್ನು ಗುರುತಿಸಿ ನವದೆಹಲಿಯ ‘ಅವಂತಿಕಾ’ ಸಮಕಾಲೀನ ಕಲಾವಿದರು ಮತ್ತು ಬುದ್ಧಿ ಜೀವಿಗಳ ಸಂಘಟನೆ 2019 ನೇ ಸಾಲಿನ ಪ್ರಶಸ್ತಿಗೆ ಡಾ. ಎಲ್.ಸವಿತಾ ಅವರನ್ನು ಆಯ್ಕೆ ಮಾಡಿದೆ. ಮೈಸೂ ರಿನ ಬಹದ್ದೂರ್ ಇನ್ಸ್‍ಟಿ ಟ್ಯೂಟ್ ಆಫ್ ಮ್ಯಾನೇಜ್ ಮೆಂಟ್‍ನ ಪ್ರ್ರಾಧ್ಯಾಪಕ ಡಾ.ಪ್ರಸಾದ್ ಸಂಸ್ಥೆಯ ಪರವಾಗಿ ಪ್ರಶಸ್ತಿ ಪ್ರದಾನ ಮಾಡಿದರು.