ಪ್ರತಿಭಟನೆಗೆ ಅವಕಾಶ ನೀಡಲು ಡಿಆರ್‍ಎಫ್‍ಓಗಳಿಂದ ಸಿಸಿಎಫ್‍ಗೆ ಮನವಿ

ಮೈಸೂರು: ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಉಪವಲಯ ಅರಣ್ಯಾಧಿಕಾರಿ (ಡಿಆರ್‍ಎಫ್), ಗಾರ್ಡ್, ವಾಚರ್, ಆನೆ ಮಾವುತರು, ಕಾವಾಡಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಗಳು ಎದುರಿಸುತ್ತಿರುವ ವೇತನ ತಾರತಮ್ಯ ಹೋಗಲಾಡಿಸುವಂತೆ ರಾಜ್ಯದಾದ್ಯಂತ ಜು.31ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಮೈಸೂರು ವೃತ್ತದ ಡಿಆರ್‍ಎಫ್ ಗಳು ಸೋಮವಾರ ಸಿಸಿಎಫ್ ಟಿ.ಹೀರಾ ಲಾಲ್ ಅವರಿಗೆ ಮನವಿ ಸಲ್ಲಿಸಿದರು.

ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಮೈಸೂರು ವೃತ್ತದ ಸಿಸಿಎಫ್ ಟಿ.ಹೀರಾಲಾಲ್ ಅವರ ಕಚೇ ರಿಗೆ ಉಪವಲಯ ಅರಣ್ಯಾಧಿಕಾರಿಗಳ ಸಂಘದ ಪದಾಧಿಕಾರಿಗಳು ಆಗಮಿಸಿ, ಜು.31ರಂದು ಬೆಂಗಳೂರಿನಲ್ಲಿ ನಡೆಯ ಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವಂತೆ ಕೋರಿದರು.

ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಸಮಾನಾಂತರ ಹುದ್ದೆಗಳಿಗೆ ಅನುಗುಣ ವಾಗಿ ಅರಣ್ಯ ಇಲಾಖೆ ನೌಕರರಿಗೆ ವೇತನ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಪೊಲೀಸ್, ಕಂದಾಯ, ತೋಟಗಾರಿಕೆ, ಪಂಚಾಯತ್ ರಾಜ್ ಇಲಾಖೆಗಳಲ್ಲಿ ವಿದ್ಯಾ ರ್ಹತೆಗೆ ತಕ್ಕಂತಹ ಹುದ್ದೆಗಳಿಗೆ ನೀಡುತ್ತಿ ರುವ ವೇತನವನ್ನು ಅರಣ್ಯ ಇಲಾಖೆಗೆ ಅನ್ವಯಿಸಿಲ್ಲ. ಸಮಾನಾಂತರ ಹುದ್ದೆಗಳಿಗೆ ಅನುಗುಣವಾಗಿ ವೇತನ ನಿಗದಿ ಮಾಡು ವಲ್ಲಿ ತಾರತಮ್ಯವಾಗಿದೆ. ಕಳೆದ 20 ವರ್ಷ ದಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ. ಕೇವಲ ಪತ್ರ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿದೆ ಎಂದು ಡಿಆರ್‍ಎಫ್‍ಗಳು ಆರೋಪಿಸಿದರು. ಈ ಸಮಸ್ಯೆಯನ್ನು ಇತ್ಯರ್ಥಪಡಿಸುವ ಇಚ್ಛಾಶಕ್ತಿ ಇಲಾಖೆಯ ಹಿರಿಯ ಅಧಿಕಾರಿಗಳಲ್ಲಿ ಕಾಣುತ್ತಿಲ್ಲ. ಅನ್ಯಾಯ ಸರಿಪಡಿಸುವಂತೆ ಸಲ್ಲಿಸಿದ ಮನವಿ ಕೇವಲ ಪತ್ರ ವ್ಯವಹಾರಕ್ಕೆ ಮಾತ್ರ ಸೀಮಿತಗೊಂಡಿದೆ. ಇಲಾಖಾ ಮೇಲಾ ಧಿಕಾರಿಗಳು ಸರ್ಕಾರದೊಂದಿಗೆ ವ್ಯವ ಹರಿಸಿ ಸಮಸ್ಯೆ ಇತ್ಯರ್ಥಪಡಿಸುವುದಕ್ಕೆ ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಅನಿ ವಾರ್ಯವಾಗಿ ಪ್ರತಿಭಟನೆಯ ಹಾದಿ ಹಿಡಿ ದಿದ್ದೇವೆ. ಸರ್ಕಾರ ಇನ್ನಾದರೂ ಅನ್ಯಾಯ ಸರಿಪಡಿಸದೇ ಇದ್ದಲ್ಲಿ ರಾಜ್ಯದಾದ್ಯಂತ ಸಾಮೂಹಿಕ ರಜೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ. ಕಾಡಂಚಿನ ಗ್ರಾಮ ಗಳಲ್ಲಿ ಮಾನವ ಹಾಗೂ ಪ್ರಾಣಿ ಸಂಘರ್ಷ ವಾದರೆ ಗ್ರಾಮಸ್ಥರ ಕೆಂಗಣ್ಣಿಗೆ ಗುರಿ ಯಾಗುವ ನಮ್ಮ ವರ್ಗದ ಸಿಬ್ಬಂದಿಗಳ ಹಿತ ಕಾಪಾಡುವುದಕ್ಕೆ ಕ್ರಮ ಕೈಗೊಳ್ಳ ಬೇಕೆಂದು ಅವರು ಮನವಿ ಮಾಡಿದರು.