ಡಾ.ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಪಂದ್ಯಾವಳಿಗೆ ಮೈಸೂರಲ್ಲಿ ಚಾಲನೆ

ಮೈಸೂರು,ಜು.10(ಪಿಎಂ)- ಕರ್ನಾ ಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‍ಸಿಎ) ವತಿಯಿಂದ ಹಮ್ಮಿಕೊಂಡಿ ರುವ ಡಾ.ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಪಂದ್ಯಾವಳಿ ಚಾಲನೆ ಪಡೆದುಕೊಂಡಿದ್ದು, ಮೈಸೂರಿನಲೂ ಪಂದ್ಯಗಳು ನಡೆಯಲಿವೆ.
ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರಿಕೆಟ್ ಮೈದಾನ ಹಾಗೂ ಜೆಸಿ ಕಾಲೇಜು ಕ್ರಿಕೆಟ್ ಮೈದಾನ ದಲ್ಲಿ ಪಂದ್ಯಗಳು ಇಂದಿನಿಂದ ಆರಂಭ ಗೊಂಡಿವೆ. ಬಿಸಿಸಿಐ ಸಂಯೋಜಿತ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂ ಡಿದ್ದು, ಒಂದೊಂದು ವಲಯದಲ್ಲಿ ನಾಲ್ಕು ತಂಡಗಳು ಒಳಗೊಂಡಂತೆ ನಾಲ್ಕು ವಲಯಗಳಾಗಿ ವಿಂಗಡಿಸಿ ಪಂದ್ಯಾವಳಿ ನಡೆಸಲಾಗುತ್ತಿದೆ.

ಕೆಎಸ್‍ಸಿಎ ಮೈಸೂರು ವಲಯದ ಆಶ್ರಯದಲ್ಲಿ ವಲಯ 4ರ ತಂಡಗಳ ಪಂದ್ಯಗಳು ನಡೆಯುತ್ತಿದ್ದು, ಈ ತಂಡಗಳ ಪಂದ್ಯಗಳು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಮೈದಾನ, ಜೆಸಿ ಕಾಲೇಜು ಕ್ರಿಕೆಟ್ ಮೈದಾನ ಹಾಗೂ ಮಂಡ್ಯ ಪಿಇಎಸ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ನಡೆಯ ಲಿವೆ. ಕೆಎಸ್‍ಸಿಎ ಪ್ರೆಸಿಡೆಂಟ್ಸ್ ಇಲೆವೆನ್, ಜಾರ್ಖಂಡ ಕ್ರಿಕೆಟ್ ಅಸೋಸಿಯೇಷನ್, ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ತಂಡಗಳು ವಲಯ 4ರಲ್ಲಿ ಪಾಲ್ಗೊಳ್ಳುತ್ತಿವೆ.

ಇಂದಿನಿಂದ ಜು.13ರವರೆಗೆ ಜೆಸಿ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ಕೆಎಸ್‍ಸಿಎ ಪ್ರೆಸಿ ಡೆಂಟ್ಸ್ ಇಲೆವೆನ್ ಹಾಗೂ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್, ಮಂಡ್ಯ ಪಿಇಎಸ್ ಕಾಲೇಜು ಮೈದಾನದಲ್ಲಿ ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ನಡುವೆ ಪಂದ್ಯಗಳು ನಡೆಯಲಿವೆ.

ಜು.16ರಿಂದ 19ರವರೆಗೆ ಜೆಸಿ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ಕೆಎಸ್ ಸಿಎ ಪ್ರೆಸಿಡೆಂಟ್ಸ್ ಇಲೆವೆನ್ ಮತ್ತು ಆಂಧ್ರ ಕ್ರಿಕೆಟ್ ಅಸೋಸಿಯೇಷನ್, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ಮತ್ತು ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ನಡುವೆ ಪಂದ್ಯಗಳು ನಡೆಯಲಿವೆ. ಜು.22ರಿಂದ 25ರವರೆಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಜಾರ್ಖಂಡ ಕ್ರಿಕೆಟ್ ಅಸೋಸಿ ಯೇಷನ್ ಮತ್ತು ಕೆಎಸ್‍ಸಿಎ ಪ್ರೆಸಿಡೆಂಟ್ಸ್ ಇಲೆವೆನ್, ಜೆಸಿ ಕಾಲೇಜು ಮೈದಾನದಲ್ಲಿ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಮತ್ತು ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ನಡುವೆ ಪಂದ್ಯಗಳು ನಡೆಯಲಿವೆ. ಜು.28ರಿಂದ 31ರವರೆಗೆ ಸೆಮೀ ಫೈನಲ್ ಹಾಗೂ ಆ.3ರಿಂದ 6ರವರೆಗೆ ಫೈನಲ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ.