ಬದನಗುಪ್ಪೆಯಲ್ಲಿ ಶಕ್ತಿ ಪ್ರಾಜೆಕ್ಟ್‍ಗೆ ಚಾಲನೆ

ಬದನಗುಪ್ಪೆ: ಚಾಮರಾಜನಗರ ತಾಲೂಕಿನ ಬದನಗುಪ್ಪೆ ಗ್ರಾಮದಲ್ಲಿ ಶಕ್ತಿ ಪ್ರಾಜೆಕ್ಟ್‍ಗೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗ ಶೆಟ್ಟಿ ಅವರು ಕರ ಪತ್ರವನ್ನು ಬಿಡುಗಡೆ ಮಾಡುವ ಮೂಲಕ ಇತ್ತೀಚೆಗೆ ಚಾಲನೆ ನೀಡಿದರು.

ಚಾಮರಾಜನಗರದ ಯಡಪುರದ ಬಳಿ ಭೌದ್ದ ವಿಶ್ವ ವಿದ್ಯಾಲಯ ಶಂಕು ಸ್ಥಾಪನಾ ಸಮಾರಂಭಕ್ಕೆ ಆಗಮಿಸುತ್ತಿದ್ದ ಸಿದ್ದರಾಮಯ್ಯ, ಮಾರ್ಗ ಮಧ್ಯೆ ಬರುವ ಬದನಗುಪ್ಪೆ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರಿಂದ ಸ್ವಾಗತ ಹಾಗು ಸನ್ಮಾನ ವನ್ನು ಸ್ವೀಕರಿಸಿದರು. ಬಳಿಕ, ಗ್ರಾಮದ ಕಾಂಗ್ರೆಸ್ ಮುಖಂಡ ಬಿ.ಪಿ. ನಾಗರಾಜ ಮೂರ್ತಿ ಅವರಿಗೆ ಶಕ್ತಿ ಪ್ರಾಜೆಕ್ಟ್ ಕರ ಪತ್ರವನ್ನು ನೀಡುವ ಮೂಲಕ ಶಕ್ತಿ ನೋಂದಣಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡ ಬಿ.ಪಿ. ನಾಗರಾಜಮೂರ್ತಿ ಮಾತನಾಡಿ, ರಾಷ್ಟ್ರಾ ದ್ಯಂತ ಕಾಂಗ್ರೆಸ್ ಪಕ್ಷವನ್ನು ಬಲಗೊಳಿ ಸುವ ನಿಟ್ಟಿನಲ್ಲಿ ಯುವ ನೇತಾರ ರಾಹುಲ್ ಗಾಂಧಿ ಅವರು ಚಾಲನೆ ನೀಡಿರುವ ಶಕ್ತಿ ಪ್ರಾಜೆಕ್ಟ್‍ಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗು ಮುಖಂಡರು ಹೆಚ್ಚಿನ ರೀತಿಯಲ್ಲಿ ನೋಂದಾಣಿ ಮಾಡಬೇಕು. ಮತದಾರ ದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ತಮ್ಮ ಸ್ವಂತ ಮೊಬೈಲ್ ಸಂಖ್ಯೆಯಿಂದ ಮಾತ್ರ ಸಂದೇಶ ರವಾನಿಸಬೇಕು. ಒಂದು ಮೊಬೈಲ್ ಸಂಖ್ಯೆಯಿಂದ ಒಂದೇ ಸಂದೇಶ ವನ್ನು ಮಾತ್ರ ಕಳುಹಿಸಬಹುವುದಾಗಿದೆ. ತಾವು ಕಳುಹಿಸುವ ಸಂದೇಶದಲ್ಲಿ ನಿಮ್ಮ ಮತದಾನ ಚೀಟಿಯ ಸಂಖ್ಯೆಯನ್ನು ಹೊರತು ಪಡಿಸಿ ಬೇರೆ ಇನ್ಯಾವುದೇ ಇತರ ಸಂದೇಶ ವನ್ನು ಕಳುಹಿಸಬಾರದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.