ಮೈಸೂರು: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಮೈಸೂರಿನ ಕೆ.ಆರ್.ಸರ್ಕಲ್‍ನಲ್ಲಿ ಉರುಳಿದ ಘಟನೆ ಇಂದು ಮುಂಜಾನೆ ಸಂಭವಿಸಿದೆ.
ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್ ಕಡೆಯಿಂದ ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿದ ಲಾರಿ(ಕೆಎಲ್40-ಕ್ಯೂ5584) ಕೆ.ಆರ್.ಸರ್ಕಲ್‍ನಲ್ಲಿ ಮುಂಜಾನೆ ಉರುಳಿ ಬಿದ್ದಿದೆ ಎಂದು ದೇವರಾಜ ಸಂಚಾರ ಪೊಲೀಸರು ತಿಳಿಸಿದರು.
ಟಯರ್‍ಗಳನ್ನು ತುಂಬಿದ್ದ ಲಾರಿ, ಡಿ.ದೇವರಾಜ ಅರಸು ರಸ್ತೆಗೆ ತಿರುಗುವಾಗ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ದೇವರಾಜ ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಸೂರಜ್ ಹಾಗೂ ಸಿಬ್ಬಂದಿಗಳು, ಚೆಲ್ಲಾಪಿಲ್ಲಿಯಾಗಿದ್ದ ಟಯರ್‍ಗಳನ್ನು ಬೇರೆ ವಾಹನಗಳ ಮೂಲಕ ತೆರವುಗೊಳಿಸಿದ ನಂತರ ಸಂಚಾರಕ್ಕೆ ತೆರವುಗೊಳಿಸಿದರು.