ತಾಪಂ ಆವರಣದಲ್ಲಿ ಪರಿಸರ ದಿನಾಚರಣೆ

ಪಾಂಡವಪುರ: ಪಟ್ಟಣದ ತಾಪಂ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಾಪಂ ಅಧ್ಯಕ್ಷೆ ಪೂರ್ಣಿಮಾ, ಮನುಷ್ಯರು ತಮ್ಮ ಸ್ವಾರ್ಥಕ್ಕೆ ಅರಣ್ಯ ನಾಶ ಮಾಡುತ್ತಿದ್ದಾರೆ. ಇದರಿಂದ ಸರಿಯಾದ ಸಮಯಕ್ಕೆ ಮಳೆ ಯಾಗದೇ ಹಲವು ಪ್ರಾಕೃತಿಕ ವಿಕೋಪ ಗಳು ಸಂಭವಿಸುತ್ತಿವೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಇಡೀ ಸಮಾಜವೇ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪರಿಸರ ಸಂರಕ್ಷಣೆ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ. ಆದ್ದರಿಂದ ಪ್ರತಿ ಯೊಬ್ಬರೂ ಪರಿಸರ ಸಂರಕ್ಷಿಸಬೇಕು ಎಂದರು.

ಈ ಸಂದರ್ಭ ತಾಪಂ ಮಾಜಿ ಅಧ್ಯಕ್ಷೆ ರಾಧಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಪುಟ್ಟೇ ಗೌಡ, ಸದಸ್ಯರಾದ ಸಿ.ಎಸ್.ಗೋಪಾಲಗೌಡ, ವಿ.ಎಸ್.ನಿಂಗೇಗೌಡ, ಗೋವಿಂದಯ್ಯ, ಶಿವಣ್ಣ, ಸುಮಾ, ಗೀತಾ, ಗಾಯಿತ್ರಿ, ನವೀನ, ತಾಪಂ ಇಓ ದರ್ಶನ್, ಲೆಕ್ಕಾಧಿಕಾರಿ ಮಹೇಶ್, ಬಿಇಓ ಮಲ್ಲೇಶ್ವರಿ, ಅಕ್ಷರ ದಾಸೋಹ ಅಧಿಕಾರಿ ನಾಸೀರ್, ಇಂಜಿನಿಯರ್ ರೇವಣ್ಣ ಸೇರಿದಂತೆ ಹಲವರಿದ್ದರು.