ವಿಶ್ವ ಪರಿಸರ ದಿನಾಚರಣೆ 8 ಮಂದಿ ಪರಿಸರ ಪ್ರೇಮಿ ಪ್ರಶಸ್ತಿ ಪ್ರಧಾನ

ಮೈಸೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿವರ್ತನಂ ಟ್ರಸ್ಟ್ ವತಿಯಿಂದ 8 ಮಂದಿಗೆ `ಪರಿಸರ ಪ್ರೇಮಿ ಪ್ರಶಸ್ತಿ’ಯನ್ನು ಸೋಮವಾರ ಪ್ರದಾನ ಮಾಡಲಾಯಿತು.

ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಹೆಚ್.ಎನ್.ಶ್ರೀಧರಮೂರ್ತಿ, ಸುರೇಶ್, ಕೆ.ಆರ್.ರಾಜೀವ್, ಎಂ.ಬಸವರಾಜು, ಹೆಚ್.ವಿ.ಭಾಸ್ಕರ್, ಎ.ಸಂತೋಷ್, ಪ್ರದೀಪ್‍ಗೌಡ, ರಾಜಶೇಖರ್ ಅವರಿಗೆ ಪರಿಸರ ಪ್ರೇಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅತಿಥಿಯಾಗಿ ಪಾಲ್ಗೊಂಡಿದ್ದ ನಗರಪಾಲಿಕೆ ಸದಸ್ಯ ಮಾ.ವಿ.ರಾಮ್‍ಪ್ರಸಾದ್ ಮಾತನಾಡಿ, ಪ್ರಸ್ತುತ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಮಹತ್ವ ಅರಿತುಕೊಳ್ಳಬೇಕಿದೆ. ಸಾರ್ವಜನಿಕರು ತಮ್ಮ ಮನೆ ಆವರಣದಲ್ಲಿ ಗಿಡ-ಮರಗಳನ್ನು ಬೆಳೆಸಿ ಪೋಷಿಸಿದರೆ ಸಮಾಜದಲ್ಲಿ ಆರೋಗ್ಯಕರ ವಾತಾವರಣ ನೆಲೆಸಲಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಉದ್ಯಾನವನದಲ್ಲಿ ಎರಡು ಬೇವಿನ ಗಿಡಗಳನ್ನು ನೆಡಲಾಯಿತು. ಸಂಧ್ಯಾ ಸುರಕ್ಷ ಟ್ರಸ್ಟ್ ಅಧ್ಯಕ್ಷ ನಟರಾಜ ಜೋಯಿಸ್, ಟ್ರಸ್ಟ್ ಅಧ್ಯಕ್ಷ ವಿನಯ್ ಕಣಗಾಲ್, ಮುಖಂಡರಾದ ವಿಕ್ರಂ ಅಯ್ಯಂಗಾರ್, ಮುಳ್ಳೂರು ಗುರುಪ್ರಸಾದ್, ಅಜಯ್‍ಶಾಸ್ತ್ರಿ, ಡೈರಿ ವೆಂಕಟೇಶ್, ರವಿತೇಜ, ರಂಗನಾಥ್, ಪರಶಿವಮೂರ್ತಿ ಮತ್ತಿತರರು ಹಾಜರಿದ್ದರು.