ಮನನೊಂದು ಮನೆ ತೊರೆಯುತ್ತಿರುವ ವೃದ್ಧರು: ಪೊಲೀಸರ ಕಳವಳ

ಅರಸೀಕೆರೆ, ಜೂ.26- ವಯೋವೃದ್ಧರು ಮನೆಯಲ್ಲಿನ ಸಣ್ಣ ಪುಟ್ಟ ವೈಮನಸ್ಸು ಗಳಿಗೆ ಮನನೊಂದು ಮನೆ ಬಿಟ್ಟು ಹೊರ ಬರುತ್ತಿರುವ ಪ್ರಕÀರಣ ಹೆಚ್ಚುತ್ತಿವೆ ಎಂದು ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರಂಗಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಮಕ್ಕಳಾದವರು ಇಂತಹ ಬೆಳವಣಿಗೆ ಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ವಯಸ್ಸಾದ ಪೋಷಕರನ್ನು ಮಾನವೀಯತೆಯಿಂದ ಸಲುಹಬೇಕು. ಮಾನಸಿಕ ಸ್ಥೈರ್ಯ ತುಂಬ ಬೇಕಿದೆ ಎಂದು ಕಿವಿಮಾತು ಹೇಳಿದರು.

ನಗರದ ತೆರಿಗೆ ಇಲಾಖೆ ಕಚೇರಿ ಬಳಿ ವಾರಸುದಾರರಿಲ್ಲದೇ ಕಳೆದ 3 ದಿನಗಳಿಂದ ಕಷ್ಟಪಡುತ್ತಿದ್ದ ತುಮಕೂರು ಮೂಲದ ರಾಮಣ್ಣ ಎಂಬ ವೃದ್ಧರನ್ನು ತಾಲೂಕು ಹಿರಿಯ ನಾಗರಿಕರ ವೇದಿಕೆ ಮತ್ತು ಮಾನವ ಹಕ್ಕು ಗಳ ಭಾರತೀಯ ಮಹಾಮೈತ್ರಿ ಸದಸ್ಯರು ತುಮಕೂರಿನ ಶಾರದಾಂಬ ಅನಾಥಾ ಶ್ರಮಕ್ಕೆ ಕಳುಹಿಸಿಕೊಡುವ ಸಂದರ್ಭ ರಂಗಸ್ವಾಮಿ ಮಾತನಾಡಿದರು.

ಹಿಂದೆ ಭಾರತ ಕೌಟುಂಬಿಕ ಕಲಹಗಳಿಂದ ಮುಕ್ತವಾಗಿತ್ತು. ವಸುದೈವ ಕುಟುಂಬಕಂ ಎಂದು ವಿಶ್ವಕ್ಕೇ ಸಂದೇಶ ನೀಡಿತ್ತು. ಇಂದು ಹಿರಿಯರನ್ನು ಕಡೆಗಣಿಸಿ ಬೀದಿಗೆ ಬಿಡಲಾ ಗುತ್ತಿದೆ. ಎಷ್ಟೋ ವೃದ್ಧರು ಇಂದು ವಯೋ ಸಹಜ ಮರೆಗುಳಿತನ, ಶಕ್ತಿಕುಂದುವಿಕೆ ಮತ್ತಿತರ ದೈಹಿಕ ನ್ಯೂನತೆಗಳಿಂದ ಬಳಲು ತ್ತಿದ್ದರೂ, ಕುಟುಂಬದವರು ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸದೇ ನಿರ್ಲಕ್ಷ್ಯಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವೃದ್ಧರಿಗೆ ಸ್ವಯಂಸೇವಾ ಸಂಸ್ಥೆಗಳು ಅನಾಥಶ್ರಮ ಮತ್ತು ಆರೈಕೆ ಕೇಂದ್ರಗಳನ್ನು ಸ್ಥಾಪಿಸಿ ಮಾನವೀಯತೆ ಮೆರೆಯುತ್ತಿರು ವುದನ್ನು ನೋಡಿದರೆ ಮನುಷ್ಯತ್ವ ಇನ್ನೂ ಉಳಿದಿದೆ ಎನಿಸುತ್ತಿದೆ. ಇಂದು ಇಲ್ಲಿ ಕಂಡು ಬಂದ ಘಟನೆ ಬೇರೆ ಕಡೆಯೂ ನಡೆಯುತ್ತದೆ. ಆದರೆ, ಜನರ ಕಣ್ಣಿಗೆ ಬೀಳದಿರಬಹುದು ಎಂದರು.

ತುಮಕೂರಿನ ಶಾರದಾಂಬ ಅನಾಥಾ ಶ್ರಮದ ಅಧ್ಯಕ್ಷೆ ಯಶೋದ ಅವರು ಮಾತ ನಾಡಿ, ನಮ್ಮ ಸಂಸ್ಥೆ ಹಲವಾರು ವರ್ಷ ಗಳಿಂದ ವೃದ್ಧರು, ಒಂಟಿತನ ಅನುಭವಿಸು ತ್ತಿರುವ ಹಿರಿಯ ನಾಗರಿಕರಿಗೆ ಉತ್ತಮ ವಾತಾವರಣ ಕಲ್ಪಿಸಲು ಶ್ರಮಿಸುತ್ತಿದೆ. ನಮ್ಮ ಟ್ರಸ್ಟ್ ಮೂಲಕ ಅನಾಥಾಶ್ರಮ ಸ್ಥಾಪಿಸಲಾಗಿದೆ ಎಂದರು. 2014ರಲ್ಲಿ ವೃದ್ಧಾಶ್ರಮವೊಂ ದರಲ್ಲಿ ಹಿರಿಯ ನಾಗರಿಕರೊಬ್ಬರನ್ನು ಸೇರಿ ಸಲು ಹೋದಾಗ ನೀವೇ ಏಕೆ ವೃದ್ಧಾಶ್ರಮ ಆರಂಭಿಸಬಾರದು ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ಅವರ ಆ ಸವಾಲಿನಂತಹ ಮಾತಿಗೆ ಪ್ರತಿಯಾಗಿ 2014ರಲ್ಲಿ ವೃದ್ಧಾ ಶ್ರಮ ಆರಂಭಿಸಿದೆವು. ಅದಕ್ಕೆ ಅನೇಕ ದಾನಿ ಗಳು, ಸಮಾನ ಮನಸ್ಕರು ಕೈಜೋಡಿಸಿ ದ್ದಾರೆ. ಇದರ ಮಧ್ಯೆಯೂ ನಿಂದನೆ, ಅಪ ಮಾನ ಎದುರಿಸುತ್ತಲೇ ಇದ್ದೇವೆ ಎಂದು ಆಶ್ರಮ ನಡೆಸುವ ಕಷ್ಟ ಹೇಳಿಕೊಂಡರು.

ನಮ್ಮ ವೃದ್ಧಾಶ್ರಮಕ್ಕೆ ಸರ್ಕಾರಿ ಮತ್ತು ಖಾಸಗಿ ವೈದ್ಯರು ಬಂದು ಹಿರಿಯ ನಾಗರಿ ಕರ ಆರೋಗ್ಯ ತಪಾಸಣೆ ಮಾಡುತ್ತಾರೆ. ಅನೇಕರು ತಮ್ಮ ವೇತನವನ್ನೇ ದೇಣಿಗೆ ಯಾಗಿ ನೀಡಿ ಸಹಾಯಹಸ್ತ ಚಾಚಿದ್ದಾರೆ. ವೃದ್ಧರ ಬಗೆಗಿನ ವಿದ್ಯಾಮಾನಗಳನ್ನು ಹೆಚ್ಚಾಗಿ ಗಮನಿಸುತ್ತಿದ್ದು ಅವರ ಸಹಾಯಕ್ಕೆ ನಾವು ಸದಾ ಸಿದ್ಧರಿದ್ದೇವೆ. ಅರಸೀಕೆರೆ ಯಲ್ಲಿ ಕೆಲವು ಸ್ವಯಂಸೇವಾ ಸಂಸ್ಥೆಗಳ ಸದಸ್ಯರು ಮಾಹಿತಿ ನೀಡುವ ಮೂಲಕ ಮನೆಬಿಟ್ಟು ಬಂದ ವೃದ್ಧರಿಗೆ ನೆರವಾಗಿ ದ್ದಾರೆ. ಇಂತಹ ಸಂಸ್ಥೆಗಳಿಗೆ ಸದಾ ಪ್ರೇರಣೆ ದೊರೆಯುವಂತಾಗಲಿ ಎಂದು ಆಶಿಸಿದರು.

ಈ ಸಂದರ್ಭ ಹಿರಿಯ ನಾಗರಿಕ ವೇದಿಕೆ ಸದಸ್ಯರಾದ ಕಾಂತರಾಜು, ವೀರ ಭದ್ರಯ್ಯ, ಅನಂತರಾಜು, ಮಹಾ ಮೈತ್ರಿಯ ಶ್ರೀಶೈಲ, ಗಿರೀಶ್, ಧನ್ವಂತರಿ ಸತ್ಯನಾರಾಯಣ ಮತ್ತಿತರರಿದ್ದರು.