ಹಾಸನದ 5 ಸ್ಥಳೀಯ ಸಂಸ್ಥೆಗಳ ಚುನಾವಣೆ: ಇಂದು ಮತ ಎಣಿಕೆ

ಹಾಸನ: ಜಿಲ್ಲೆಯ 5 ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಕಾರ್ಯ ಇಂದು ಆಯಾಯ ತಾಲೂಕು ಕೇಂದ್ರಗಳಲ್ಲಿ ನಡೆ ಯಲಿದ್ದು, ಮಧ್ಯಾಹ್ನದ ವೇಳೆಗೆ 486 ಅಭ್ಯರ್ಥಿ ಗಳ ಹಣೆಬರಹ ಹೊರ ಬೀಳಲಿದೆ.

ಮತ ಎಣಿಕೆಗೆ ಜಿಲ್ಲಾಡಳಿತ ಈಗಾಗಲೇ ಸಿದ್ಧತೆ ಪೂರ್ಣಗೊಳಿಸಿದ್ದು, ಪೊಲೀಸ್ ಬಿಗಿ ಬಂದೋ ಬಸ್ತ್‍ನಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಿದೆ. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ.

ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆ ಗಳ ಚುನಾವಣೆ ಮತ ಎಣಿಕೆ 36 ಟೆಬಲ್ ಗಳಲ್ಲಿ ನಡೆಯಲಿದ್ದು, ಹಾಸನ ನಗರಸಭೆ ಮತ ಎಣಿಕೆ ಮಹಿಳಾ ಪದವಿ ಕಾಲೇಜಿನಲ್ಲಿ ನಡೆಯಲಿದ್ದು, ಇದಕ್ಕಾಗಿ 5 ಕೊಠಡಿ ಗಳನ್ನು ವ್ಯವಸ್ಥೆಗೊಳಿಸಲಾಗಿದ್ದು, 35 ವಾರ್ಡ್ ಗಳ ಮತ ಎಣಿಕೆಗೆ 10 ಟೇಬಲ್‍ಗಳನ್ನು ನಿಗದಿಪಡಿಸಲಾಗಿದೆ. ಅರಸೀಕೆರೆ ನಗರ ಸಭೆ ಮತ ಎಣಿಕೆಯು ಅಲ್ಲಿನ ವಿವೇಕಾನಂದ ಶಿಕ್ಷಣ ಕಾಲೇಜಿನಲ್ಲಿ ನಡೆಯಲಿದ್ದು, 31 ವಾರ್ಡ್‍ಗಳ ಮತ ಎಣಿಕೆಗೆ 8 ಟೇಬಲ್ ಹಾಕಲಾಗಿದೆ. ಚನ್ನರಾಯಪಟ್ಟಣ ಪುರ ಸಭೆಯ ಚುನಾವಣೆ ಮತ ಎಣಿಕೆಯು ನವೋದಯ ಪದವಿ ಪೂರ್ವ ಕಾಲೇಜಿ ನಲ್ಲಿ ಹೊಳೆನರಸೀಪುರ ಪುರಸಭೆಯ ಚುನಾ ವಣೆಯ ಮತ ಎಣಿಕೆಯು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸಕಲೇಶಪುರ ಪುರಸಭೆಯ ಮತ ಎಣಿಕೆಯು ಮಿನಿ ವಿಧಾನ ಸೌಧದಲ್ಲಿ ನಡೆಯ ಲಿದ್ದು, ತಲಾ 23 ವಾರ್ಡ್‍ಗಳಲ್ಲಿ ತಲಾ 6 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ 5 ಸ್ಥಳೀಯ ಸಂಸ್ಥೆಗಳ 135 ವಾರ್ಡ್‍ಗಳಿಂದ 486 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇಂದು ಮಧ್ಯಾಹ್ನದ ವೇಳೆ ಎಲ್ಲರ ಭವಿಷ್ಯ ನಿರ್ಧಾರವಾಗಲಿದೆ.