ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ವಾಹನ ಡಿಕ್ಕಿ: ಅರಮನೆ ಮುಂದಿನ ವಿಶೇಷ ಕಲ್ಲಿನ ಬ್ಯಾರಿಕೇಡ್ ಧ್ವಂಸ

ಮೈಸೂರು: ಟಯರ್ ಸಿಡಿದು ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಅರಮನೆ ಜಯ ಮಾರ್ತಾಂಡ ಗೇಟ್ ಬಳಿ ಅಳವಡಿಸಿರುವ ಕಲ್ಲಿನ ವಿಶೇಷ ಬ್ಯಾರಿಕೇಡ್ ಧ್ವಂಸವಾಗಿ ರುವ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ.

ಮೈಸೂರಿನ ಕ್ಯಾತಮಾರನಹಳ್ಳಿಯ ಎಲೆ ಕ್ಟ್ರಿಕಲ್ ಗುತ್ತಿಗೆದಾರ ರವಿಕುಮಾರ್ ಎಂಬು ವರಿಗೆ ಸೇರಿದ ಬೊಲೆರೋ(ಕೆಎ09, ಸಿ4060) ವಾಹನವು ನಂಜನಗೂಡಿನಿಂದ ಬರುತ್ತಿ ದ್ದಾಗ ಶನಿವಾರ ಮುಂಜಾನೆ ಸುಮಾರು 5 ಗಂಟೆ ವೇಳೆಗೆ ಅದರ ಮುಂಭಾಗದ ಎಡ ಗಡೆ ಚಕ್ರದ ಟಯರ್ ಸಿಡಿದ ಪರಿ ಣಾಮ ಚಾಲಕನ ನಿಯಂತ್ರಣ ತಪ್ಪಿದ ವಾಹನ ವಸ್ತು ಪ್ರದರ್ಶನ ಮೈದಾನದೆದುರು ಅರಮನೆ ಜಯ ಮಾರ್ತಾಂಡ ಗೇಟ್ ಮುಂದಿನ ಫುಟ್‍ಪಾತ್‍ನ ಕಲ್ಲಿನ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.
ಇದರಿಂದ ಸುಮಾರು 18 ಅಡಿಗಳಷ್ಟು ಕಲ್ಲಿನ ತಡೆಗೋಡೆ ಉರುಳಿ ಬಿದ್ದಿದ್ದು, ವಿಶೇಷ ದೀಪದ ಕಂಬವೂ ನೆಲಸಮವಾಗಿದೆ.

ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ಮೈಸೂರು ಮಹಾ ನಗರಪಾಲಿಕೆ ಅಧಿಕಾರಿಗಳು ವಿಶೇಷ ಕಲ್ಲಿನ ಬ್ಯಾರಿಕೇಡ್ ತುಂಡರಿಸಿದ್ದು, ಇದರಿಂದ 7.5 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಿ ದೇವ ರಾಜ ಸಂಚಾರ ಠಾಣೆಗೆ ದೂರು ನೀಡಿದ್ದಾರೆ.
ಪಾಲಿಕೆ ವಲಯ ಕಚೇರಿ ವಲಯಾಧಿ ಕಾರಿಗಳು ನೀಡಿದ ದೂರಿನನ್ವಯ ಐಪಿಸಿ ಸೆಕ್ಷನ್ 427(ಸಾರ್ವಜನಿಕ ಆಸ್ತಿ ಹಾನಿ) ರಡಿ ಪ್ರಕರಣ ದಾಖಲಿಸಿಕೊಂಡಿದ್ದು, ಕಲ್ಲಿನ ಬ್ಯಾರಿಕೇಡ್ ಮುರಿದಿರುವ ಫೋಟೋ ಹಾಗೂ ಮಹಜರಿನೊಂದಿಗೆ ನಾವು ನ್ಯಾಯಾಲಯಕ್ಕೆ ಪ್ರಥಮ ವರದಿ ಸಲ್ಲಿಸಿ ದ್ದೇವೆ ಎಂದು ದೇವರಾಜ ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಶ್ರೀನಿವಾಸ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ನಗರಪಾಲಿಕೆ ಅಧಿಕಾರಿಗಳು 7.5 ಲಕ್ಷ ರೂ. ನಷ್ಟ ಉಂಟಾಗಿದ್ದು, ವಾಹನ ಮಾಲೀಕರಿಂದ ವಸೂಲಿ ಮಾಡಿಕೊಡಿ ಎಂದು ಕೇಳಿದರೂ, ಪ್ರಕರಣ ದಾಖಲಾಗಿ ರುವುದರಿಂದ ನ್ಯಾಯಾಲಯದ ಮೂಲ ಕವೇ ನಿರ್ಧಾರ ವಾಗಬೇಕು ಎಂದೂ ಶ್ರೀನಿವಾಸ್ ತಿಳಿಸಿದರು.