ಮಳವಳ್ಳಿ ಬಳಿ ವಿದ್ಯುತ್ ಸ್ಪರ್ಶದಿಂದ ಆನೆ ಸಾವು

ಮಂಡ್ಯ, ಡಿ.10(ನಾಗಯ್ಯ)- ಕಾಡು ಪ್ರಾಣಿಗಳ ಉಪಟಳದಿಂದ ಬೆಳೆ ರಕ್ಷಣೆ ಗೆಂದು ಹಾಕಲಾಗಿದ್ದ ವಿದ್ಯುತ್ ತಂತಿ ತುಳಿದು ಗಂಡಾನೆಯೊಂದು ಸಾವನ್ನಪ್ಪಿ ರುವ ಘಟನೆ ಧನಗೂರು ಅರಣ್ಯ ವಲಯ ದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.

ಮಳವಳ್ಳಿ ತಾಲೂಕು ಡಿ.ಹಲಸಹಳ್ಳಿ ಗ್ರಾಪಂ ವ್ಯಾಪ್ತಿಯ ಧನಗೂರು ಅರಣ್ಯ ವಲಯದ ಬಳಿ ಶಿವಮ್ಮ ಕೋಂ ರಾಜಣ್ಣ ಅವರ ಜಮೀನಿನಲ್ಲಿ ಭತ್ತದ ಬೆಳೆ ಮೇಯಲು ಹೋದ ಕಾಡಾನೆ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಸಾವನ್ನಪ್ಪಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕಾವೇರಿ ವನ್ಯಜೀವಿ ಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜು ಮತ್ತು ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಮತ್ತು ಇತರೆ ಅರಣ್ಯ ಇಲಾಖಾ ಸಿಬ್ಬಂದಿಗಳು, ಸೆಸ್ಕಾಂನ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೆಸ್ಕಾಂನ ಕಿರಿಯ ಇಂಜಿನಿಯರ್ ಮಧು ಸೂದನ್ ಸ್ಥಳ ಪರಿಶೀಲನೆ ನಡೆಸಿ, ಜಮೀನಿ ನಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಕುರಿತಂತೆ ರೈತನ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕಾವೇರಿ ವನ್ಯಜೀವಿ ಧಾಮದ ಸಹಾಯ ಸಂರಕ್ಷಣಾ ಅಧಿಕಾರಿ ರಾಜು, ಹಲಗೂರು ವಲಯದ ಧನಗೂರು ಸ್ಟೇಟ್ ಫಾರೆಸ್ಟ್ ಹತ್ತಿರದ ಶಿವಮ್ಮ ಎಂಬುವರ ಜಮೀನಿ ನಲ್ಲಿ ಆರೇಳು ವರ್ಷದ ಗಂಡಾನೆ ಸಾವನ್ನ ಪ್ಪಿದೆ. ಕಳೆದ ಎರಡು ದಿನಗಳ ಹಿಂದೆ ವಿದ್ಯುತ್ ಪ್ರವಹಿಸಿ ಸಾವನ್ನಪಿರುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿಸಿದರು.

ಸೆಸ್ಕಾಂ ಮತ್ತು ಅರಣ್ಯ ಇಲಾಖೆ ನೀಡಿ ರುವ ದೂರಿನ ಅನ್ವಯ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದೆ. ಹಲಗೂರು ಪೆÇಲೀಸ್ ಠಾಣೆ ಎಸ್‍ಐ ಪುರುಷೋತ್ತಮ್, ಸ್ಥಳಕ್ಕೆ ಭೇಟಿ ನೀಡಿದರು. ಪಶು ಆರೋಗ್ಯಾಧಿ ಕಾರಿ ಡಾ.ಹುಚ್ಚೇಗೌಡ ಆನೆ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿದರು.

ರೈತರ ಆರೋಪ: ಸ್ಥಳೀಯ ರೈತ ಕೃಷ್ಣ ಮಾತನಾಡಿ ಹಲವಾರು ವರ್ಷಗಳಿಂದಲೂ ಕಾಡಂಚಿನ ಜಮೀನುಗಳ ಬಳಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ದೂರು ನೀಡಿದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ವ್ಯವಸಾಯವೇ ನಮ್ಮ ಜೀವನಕ್ಕೆ ಆಧಾರ. ಕಾಡು ಪ್ರಾಣಿಗಳ ನಿರಂತರ ಹಾವಳಿ ಯಿಂದಾಗಿ ವ್ಯವಸಾಯ ಮಾಡದೆ ಊರು ಬಿಡುವಂತಹ ಗಂಭೀರ ಪರಿಸ್ಥಿತಿ ಎದು ರಾಗಿದೆ. ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಇಲ್ಲದೆ ರೈತರ ಕಷ್ಟ ಹೇಳ ತೀರದಾ ಗಿದೆ. ಇದರ ಜೊತೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಗಾಯದ ಮೇಲೆ ಬರೆ ಎಳೆ ದಂತಾಗಿದೆ, ಆನೆ ದಾಳಿಯಿಂದ ರೈತ ಮೃತ ಪಟ್ಟರೆ ಒಂದಷ್ಟು ಪರಿಹಾರ ನೀಡಿ ಕೈ ತೊಳೆದುಕೊಳ್ಳುವ ಇಲಾಖೆ ಶಾಶ್ವತ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಹಾಗಾಗಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದರು.