ಮಾವುತರ ಬಿಸಾಡಿ ಪರಾರಿಯಾದ ಸಾಕಾನೆಗಳು: 15 ಕಿಮೀ ದೂರದಲ್ಲಿ ಪತ್ತೆ

ಎಚ್.ಡಿ.ಕೋಟೆ: ಹುಲಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಆನೆಗಳು ದಿಗಿಲುಗೊಂಡು ಮಾವುತರನ್ನು ಕೆಳಕ್ಕೆ ಬೀಳಿಸಿ ಕಾಡಿನತ್ತ ಓಡಿದ ಪ್ರಸಂಗ ಗುರುವಾರ ನಡೆಯಿತು.

ತಾಲೂಕಿನ ಅಂತರಸಂತೆ ಅರಣ್ಯ ವ್ಯಾಪ್ತಿಯ ಪೆಂಜಳ್ಳಿ ಗ್ರಾಮದ ಹೊರ ವಲಯದಲ್ಲಿ ಕಾರ್ಯಾ ಚರಣೆ ನಡೆಸುತ್ತಿದ್ದ ಸಮಯದಲ್ಲಿ ಜನರ ಕಿರುಚಾಟ ಮತ್ತು ಪಟಾಕಿಯ ಸಿಡಿತದಿಂದ ರೊಚ್ಚಿ ಗೆದ್ದ ದ್ರೋಣ ಮತ್ತೆ ಅಶೋಕ ಆನೆಗಳು ಅವುಗಳ ಮಾವುತರಾದ ಗುಂಡ ಮತ್ತು ನಂಜುಂಡ ಇಬ್ಬರನ್ನೂ ಕೆಳಕ್ಕೆ ಬೀಳಿಸಿ ಕಾಡಿನತ್ತ ಓಡಿದವು.

ಇದರಿಂದ ಅರಣ್ಯ ಇಲಾಖೆಯ ಅಧಿ ಕಾರಿಗಳು ಮತ್ತು ಸಿಬ್ಬಂದಿ ಕಂಗಾಲಾದರು. ನಂತರ ಕೆಳಕ್ಕೆ ಬಿದ್ದು ಗಾಯಗೊಂಡಿದ್ದ ಇಬ್ಬರು ಮಾವುತರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಆನೆಗಳ ಸೆರೆ ಹಿಡಿಯಲು ಅಧಿಕಾರಿಗಳು ಮುಂದಾದರು. ನಂತರ ಹಿರೇಹಳ್ಳಿ ಸಮೀಪದ ಕಾಡಿನಲ್ಲಿ ಆನೆಗಳನ್ನು ಮಾವುತರ ಸಹಾಯದಿಂದ ಹಿಡಿಯಲಾಯಿತು.

ಘಟನೆ: ಪಟಾಕಿ ಸಿಡಿಸಿ ಹುಲಿ ಕಾಡಿಗಟ್ಟಲು ಪ್ರಯತ್ನಿಸುತ್ತಿರುವ ಸಿಬ್ಬಂದಿ, ಕೆಲ ದಿನಗಳಿಂದ ಜಾನುವಾರು ಬಲಿ ಪಡೆ ಯುತ್ತಿರುವ ವ್ಯಾಘ್ರನನ್ನು ಸೆರೆಹಿಡಿಯಲು ಇಂದು ಬೆಳಿಗ್ಗೆಯಿಂದ ಹುಲಿ ಶೋಧನೆಗೆ ಕಾರ್ಯಾಚರಣೆ ಆರಂಭಿಸಿದ್ದರು.

ಹುಲಿಯ ಹೆಜ್ಜೆ ಗುರುತು ಅಲ್ಲಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಹುಲಿ ಪತ್ತೆ ಕಾರ್ಯ ಆರಂಭ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಾರ್ವ ಜನಿಕರ ಕಿರಿಕಿರಿ ಮತ್ತು ಪಟಾಕಿ ಸಿಡಿತ ದಿಂದ ಭಯಗೊಂಡ ಆನೆಗಳು ಮಾವು ತರನ್ನು ಕೆಳಕ್ಕೆ ಬೀಳಿಸಿ ಕಾಡಿನತ್ತ ಓಡಿ ಹೋದವು, ನಂತರ 15 ಕಿ.ಮೀ ದೂರಕ್ಕೆ ತೆರಳಿ ಮಾವುತರು ಆನೆಗಳನ್ನು ತಮ್ಮ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.