ಮೈಸೂರು: ಯುವ ಬರಹಗಾರ ಬಿ.ಎಂ.ಪ್ರವೀಣ್ ರಚಿತ `ನೆಲದ ಹುಣ್ಣು’ ಕವನ ಸಂಕಲನವನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿ ಎಸ್.ಮಹಾಲಿಂಗೇಶ್ವರ್ ಭಾನುವಾರ ಬಿಡುಗಡೆಗೊಳಿಸಿದರು.
ಮೈಸೂರು ಕಲಾಮಂದಿರ ಮನೆಯಂಗಳದಲ್ಲಿ ಜಿಲ್ಲಾ ಕಸಾಪ, ಮೈಸೂರು ಸಮಾನ ಮನಸ್ಕರ ಬಳಗದ ಸಹಯೋಗದೊಂದಿಗೆ ಸಂವಹನ ಪ್ರಕಾಶನ ಹೊರ ತಂದಿರುವ ಪುಸ್ತಕವನ್ನು ಬಿಡುಗಡೆಗೊಳಿಸಿ, ಮಾತನಾ ಡಿದ ಅವರು, ಕೇಂದ್ರ ಸಾಹಿತ್ಯ ಅಕಾಡೆಮಿ ಹಲವು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಯುವ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡಿದೆ. ರಾಷ್ಟ್ರಕವಿ ಕುವೆಂಪು ಶಿವರಾಮಕಾರಂತ, ವಿ.ಕೃ.ಗೋಕಾಕ್, ಯು.ಆರ್. ಅನಂತಮೂರ್ತಿ, ಚಂದ್ರಶೇಖರ ಕಂಬಾರರು ಸಾಹಿತ್ಯ ಅಕಾಡೆಮಿಯಲ್ಲಿ ತೊಡಗಿಸಿ ಕೊಂಡು ಅದರ ಕೀರ್ತಿ ಯನ್ನು ಎತ್ತರಕ್ಕೆ ಬೆಳೆಸಿದ್ದಾರೆ. ಇಂತಹ ದಿಗ್ಗಜರ ನಡುವೆ ಯುವಸಾಹಿತಿಗಳು ಬೆಳೆಯಲಿ ಎಂಬ ಒತ್ತಾಸೆ ಮೇರೆಗೆ ಅಕಾಡೆಮಿ ಕೆಲಸ ಮಾಡುತ್ತಿದೆ ಎಂದರು.
ಯಾರು ಕವಿ ಹೃದಯ ಮತ್ತು ಸಮಾಜದ ಬಗ್ಗೆ ಕಾಳಜಿ ಇಟ್ಟುಕೊಂಡು ಬರವಣಿಗೆ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುತ್ತಾರೋ ಅಂತಹವವರನ್ನು ಅಕಾಡೆಮಿ ಗುರುತಿ ಸುವ ಕೆಲಸ ಮಾಡುತ್ತಿದೆ. ನನಗೆ ಕಾರ್ಯಭಾರದ ಒತ್ತಡ ವಿದ್ದರೂ ಲೇಖಕ ಬಿ.ಎಂ.ಪ್ರವೀಣ್ ಅವರಲ್ಲಿನ ಕವಿ ಮನಸ್ಸು ಕಂಡು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಯುವ ಬರಹಗಾರರಿಗೆ ಮೈಸೂರಿನ ವಾತಾವರಣ ಪೂರಕ ವಾಗಿದೆ. ಇಲ್ಲಿ ಸಾಹಿತಿಗಳ ಬೆಳೆವಣಿಗೆಗೆ ಹಾಗೂ ಬರಹ ಗಾರರ ಆಲೋಚನೆ ವಿಸ್ತಾರಗೊಳ್ಳುವುದಕ್ಕೂ ಪೂರಕ ವಾತಾವರಣವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟ್ರಕವಿ ಕುವೆಂಪು ಅವರು ಶಿವಮೊಗ್ಗದಲ್ಲಿ ಹುಟ್ಟಿದರೂ ವಿಶ್ವಮಾನವ ಕಲ್ಪನೆ ಬಂದಿದ್ದು, ಮೈಸೂರಿನ ವಾತಾವರಣದಿಂದ. ಮುಂದೆ ಅವರು ಮಂತ್ರಮಾಂಗಲ್ಯ ಪರಿಕಲ್ಪನೆಯನ್ನು ಇಡೀ ರಾಷ್ಟ್ರಕ್ಕೆ ಪರಿಚಯಿಸಿದರು ಎಂದರು.
ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯುವ ಬರಹಗಾರ ಬಿ.ಎಂ.ಪ್ರವೀಣ್ ಉಪಸ್ಥಿತರಿದ್ದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಅಣ್ಣಯ್ಯ ಸ್ವಾಮಿ, ಅಮ್ಮಯ್ಯ ಶೇಖರ್, ಡಾ.ಸಿ.ರವೀಂದ್ರನಾಥ್, ಗೋವಿಂದ ಸ್ವಾಮಿ ಗುಂಡಾಪುರ, ಮೀನಾ ಸದಾಶಿವ, ಆಲೂರು ದೊಡ್ಡನಿಂಗಪ್ಪ, ಗೋವಿಂದರಾಜು ಲಕ್ಷ್ಮೀಪುರ, ಚಿಕ್ಕಮಗಳೂರು ಗಣೇಶ್, ಎಸ್.ಕೆ.ಮಂಜುನಾಥ, ಈಶಕುಮಾರ್, ವೈ.ಎಸ್.ಅಭಿಷೇಕ್, ದೀಕ್ಷಾ ಮೈಸೂರು ಇವರು ಸ್ವರಚಿತ ಕವನ ವಾಚಿಸಿದರು.