ರಂಗಾಯಣ ಚಿಣ್ಣರ ಮೇಳಕ್ಕೆ ಸಂತಸದ ತೆರೆ

ಮೈಸೂರು: ಬೆಂಕಿ ಅವಘಡ ನಿಯಂತ್ರಿಸುವ ಮತ್ತು ಮುಂಜಾ ಗೃತಾ ಕ್ರಮಗಳ ಕುರಿತು ಜಾಗೃತಿ, ಓಕುಳಿಯ ರಂಗು, ಡ್ರಮ್ಸ್‍ನ ನಿನಾದಕ್ಕೆ ಚಿಣ್ಣರು ಹೆಜ್ಜೆಹಾಕಿ ಕುಳಿದು ಕುಪ್ಪಳಿಸುವ ಮೂಲಕ ಚಿಣ್ಣರ ಮೇಳಕ್ಕೆ ವರ್ಣರಂಜಿತ ತೆರೆಬಿತ್ತು.

ರಂಗಾಯಣದ ಆವರಣದಲ್ಲಿ ಏ.13 ರಿಂದ ಮೇ 8ವರಗೆ ಆಯೋಜಿಸಿದ್ದ ಚಿಣ್ಣರ ಮೇಳದಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡ ಗಿದ್ದ ಚಿಣ್ಣರು ಬುಧವಾರ, ಗುಜರಿ ಸಂತೆ, ಓಕುಳಿ ಎರಚಾಟ, ಡ್ರಮ್ ಸೌಂಡಿಗೆ ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದರು.
ರಂಗಾಯಣದ ಅಂಗಳದಲ್ಲಿ ಮಕ್ಕಳೇ ತಯಾರಿಸಿದ ಫ್ರೂಟ್ ಸಲಾಡ್, ಚಿರು ಮುರಿ, ಪಾನಿಪುರಿ ಮತ್ತಿತರೆ ತಿನಿಸುಗಳನ್ನು ಮಕ್ಕಳೇ ಮಾರಾಟ ಮಾಡಿದರು. ಈ ಎಲ್ಲಾ ತಿನಿಸುಗಳನ್ನು ಮಕ್ಕಳು ಮತ್ತು ಪೋಷ ಕರು ಖರೀದಿಸಿ, ಸೇವಿಸಿ ಖುಷಿಪಟ್ಟರು.

ಓಕುಳಿ ರಂಗು: ನಂತರ ಮಕ್ಕಳು ಡ್ರಮ್ ಸೌಂಡಿಗೆ ಕುಣಿದು ಕುಪ್ಪಳಿಸಿದರು. ನಗರ ಪಾಲಿಕೆಯಿಂದ 2 ಟ್ಯಾಂಕರ್ ನೀರನ್ನು ತರಿಸಿ ಡ್ರಮ್‍ಗಳಿಗೆ ತುಂಬಲಾಗಿದ್ದ ಬಣ್ಣದ ನೀರಿನಲ್ಲಿ ಚಿಣ್ಣರು ಸಹಪಾಠಿಗಳೊಂದಿಗೆ ಓಕುಳಿಯಾಟ ಆಡಿದರು. ಮತ್ತೆ ಕೆಲವರು ರಂಗು ರಂಗಿನ ಬಣ್ಣವಿದ್ದ ಕವರ್‍ಗಳನ್ನು ಜೇಬುಗಳಲ್ಲಿ ಇಟ್ಟುಕೊಂಡು ಎರಡೂ ಕೈಗಳಲ್ಲಿ ಬಣ್ಣ ಹಿಡಿದುಕೊಂಡು ಸಹ ಪಾಠಿಗಳು ಹಾಗೂ ಪರಿಚಯ ಇಲ್ಲದವ ರನ್ನು ಬಿಡದೆ ನಗುಮುಖದಿಂದಲೇ ಬಣ್ಣ ಹಚ್ಚಿದರು. ಈ ವೇಳೆ ಚಿಣ್ಣರೊಂದಿಗೆ ಪೆÇೀಷಕರೂ ಕೂಡ ಓಕುಳಿಯಲ್ಲಿ ಪಾಲ್ಗೊಂಡು ವಿಭಿನ್ನ ಶೈಲಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

ಬೆಂಕಿ ಅವಘಡ ಕುರಿತು ಜಾಗೃತಿ: ಸರ ಸ್ವತಿಪುರಂ ಅಗ್ನಿಶಾಮಕ ದಳ ಅಧಿಕಾರಿ ಸೋಮಶೇಖರ್ ಅವರು ಸಾರ್ವಜನಿಕ ಆಸ್ತಿಪಾಸ್ತಿಗೆ ಬೆಂಕಿ ತಗುಲಿದರೆ ಸಾಧ್ಯ ವಾದಷ್ಟು ನಂದಿಸಲು ಪ್ರಯತ್ನಿಸಬೇಕು. ಒಂದು ವೇಳೆ ಬೆಂಕಿ ತಹಬದಿಗೆ ಬರದಿ ದ್ದಲ್ಲಿ ಕೂಡಲೇ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಬೇಕು. ಗ್ಯಾಸ್‍ಗೆ ಕಡಿಮೆ ದರದ ಪೈಪ್ ಅಳವಡಿಸುವ ಬದ ಲಾಗಿ ಐಎಸ್‍ಐ ಮಾರ್ಕಿನ ಪೈಪ್ ಅನ್ನೇ ಉಪಯೋಗಿಸುವಂತೆ ಮನವಿ ಮಾಡಿದರು.

ನಂತರ ತೆಂಗಿನ ಗರಿಯಿಂದ ನಿರ್ಮಿ ಸಿದ್ದ ಶೆಡ್‍ಗೆ ಬೆಂಕಿ ಹಚ್ಚಿ, ನಂದಿಸುವ ಮೂಲಕ ಬೆಂಕಿ ಅವಘಡ ನಿಯಂತ್ರಿಸುವ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ತಿಳಿಸಿಕೊಟ್ಟರು.

ಆನಂತರ ಶಾರ್ಟ್ ಎಮರ್ಜೆನ್ಸಿ ಬ್ರಾಂಚ್, ಮಲ್ಟಿಪರ್ಪಸ್ ಬ್ರಾಂಚ್, ಲೋ ಪ್ರೆಸರ್ ಅಪ್ಲಿಕೇಟೆಡ್ ಬ್ರಾಂಚ್, ಜಂಬೂ ಸ್ಪ್ರೇ ಮತ್ತು ರೀವಾಲ್ವಿಂಗ್ ಹೆಡ್ವಿಟರ್ ಬ್ರಾಂಚ್ ಎಂಬ ಐದು ಬಗೆಯಾಗಿ ನೀರನ್ನು ಮುಗಿಲೆತ್ತರಕ್ಕೆ ಚಿಮ್ಮಿಸುವ ಮೂಲಕ ಮಕ್ಕಳನ್ನು ರಂಜಿಸಿದರು. ಈ ಕೃತಕ ಮಳೆಯಲ್ಲಿ ಚಿಣ್ಣರು ಮಿಂದೆದ್ದರು.

ಚಿಣ್ಣರ ಹೋಳಿ ಚಿತ್ರೀಕರಣ: ಚಿಣ್ಣರು ಸಹಪಾಠಿಗಳೊಂದಿಗೆ ರಂಗಿನ ಓಕುಳಿ ಯಲ್ಲಿ ಮಿಂದೇಳುತ್ತಿದ್ದರೆ, ಪೋಷಕರು ಅದನ್ನು ಮೊಬೈಲ್‍ಗಳಲ್ಲಿ ಚಿತ್ರೀಕರಿಸುವಲ್ಲಿ ನಿರತರಾಗಿದ್ದರು. ರಂಗಾಯಣ ನಿರ್ದೇಶಕಿ ಬಾಗೀರಥಿಬಾಯಿ ಕದಂ ಇದ್ದರು.