ಯಥೇಚ್ಛವಾಗಿ ಮರ ಕಡಿಯುವುದರಿಂದ ಪರಿಸರ ಅಸಮತೋಲನ: ಜಿ.ಟಿ.ದೇವೇಗೌಡ

ಮೈಸೂರು: ವಿಶ್ವ ಪರಿಸರ ದಿನದ ಅಂಗವಾಗಿ ಮೈಸೂರಿನ ವಿವಿಧೆಡೆ ಅರಣ್ಯ ಇಲಾಖೆ ವತಿಯಿಂದ ನಡೆಯಲಿರುವ ವನಮಹೋತ್ಸವ ಕಾರ್ಯಕ್ರಮಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೆಬ್ಬಾಳು ಕೆರೆ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ಪರಿಸರ ಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮೈಸೂರಿನಲ್ಲಿ ಅರಣ್ಯ ಇಲಾಖೆ ಈ ಸಾಲಿನಲ್ಲಿ 8 ಅಡಿ ಎತ್ತರದ 20 ಸಾವಿರ ಗಿಡಗಳನ್ನು ನೆಡಲು ನಿರ್ಧರಿಸಿದೆ. ಹೆಬ್ಬಾಳು ಕೆರೆ ಆವರಣದಲ್ಲಿ ಅರಣ್ಯ ಇಲಾಖೆ ನಿರ್ಮಿ ಸುತ್ತಿರುವ `ನೆಡುತೋಪು’ಗೆ ಗಿಡ ನೆಟ್ಟು ನೀರೆರೆದರು.

ಬಳಿಕ ಮಾತನಾಡಿದ ಸಚಿವರು, ಇಂದು ವ್ಯಾಪಕವಾಗಿ ಮರಗಳನ್ನು ಕಡಿಯಲಾಗು ತ್ತಿದೆ. ಇದರಿಂದ ಪರಿಸರದಲ್ಲಿ ಅಸಮ ತೋಲನ ಉಂಟಾಗುತ್ತಿದೆ. ಮಳೆ ಸರಿ ಯಾಗಿ ಬೀಳದೆ ರೈತರು ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ರಸ್ತೆ, ಅಗಲೀಕರಣ, ಅಭಿವೃದ್ಧಿ ಕಾಮಗಾರಿ, ತಂಬಾಕು ಹದ ಮಾಡಲು, ಇಟ್ಟಿಗೆ ಗೂಡಿಗೆ ಬಳಸಲು ಯಥೇಚ್ಛವಾಗಿ ಮರಗಳನ್ನು ಕಡಿಯ ಲಾಗುತ್ತಿದೆ. ಇದರಿಂದ ಎಲ್ಲೆಡೆ ಮರಗಳ ಸಂಖ್ಯೆ ಕ್ಷೀಣಿಸುತ್ತಿದೆ. ಗಿಡ, ಮರಗಳಿದ್ದರೆ ಜೀವ ಸಂಕುಲ. ಇಲ್ಲದಿದ್ದರೇ ಎಲ್ಲವೂ ನಾಶವಾಗುತ್ತದೆ. ಇದರ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಈ ಹಿಂದೆ ಪ್ರತಿ ಗಾಮಗಳಲ್ಲಿಯೂ ನೆಡುತೋಪು, ಗುಂಡು ತೋಪುಗಳಿರು ತ್ತಿತ್ತು. ಅವು ಸಣ್ಣ ಕಾಡುಗಳಂತೆ ಕಂಡು ಬರುತ್ತಿದ್ದವು. ಜೊತೆಗೆ ಹಿತ್ತಲು, ಜಮೀನಿನಲ್ಲಿ ಗಿಡ-ಮರಗಳನ್ನು ಬೆಳೆಸು ತ್ತಿದ್ದರು. ಆದರೆ ಇಂದಿನ ತಲೆಮಾರು ಯಾವುದನ್ನೂ ಉಳಿಸಿಕೊಂಡಿಲ್ಲ. ಎಲ್ಲವನ್ನು ಕಡಿದು ಹಾಕಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಜನರು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿದ್ದಾರೆ. ಇದರಿಂದ ಕಾಡು ನಾಶ ವಾಗುತ್ತಿದೆ. ಕ್ರಮೇಣ ಕಾಡು ಪ್ರಾಣಿಗಳು ಜನವಸತಿ ಪ್ರದೇಶದತ್ತ ಮುಖಮಾಡು ತ್ತಿವೆ. ಇದರಿಂದ ಮಾನವ ಮತ್ತು ವನ್ಯಜೀವಿ ಸಂಘರ್ಷ ಎದುರಾಗಿದೆ ಎಂದು ವಿಷಾದಿಸಿದರು.

ಸರ್ಕಾರ ಮತ್ತು ಅರಣ್ಯ ಇಲಾಖೆ ಸಸಿ ಗಳನ್ನು ನೆಟ್ಟು, ಪೆÇೀಷಣೆ ಮಾಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಇದಕ್ಕೆ ಸಂಘ ಸಂಸ್ಥೆಗಳೂ ಕೈಜೋಡಿಸಬೇಕು. ಇಂದು ಎಲ್ಲರಿಗೂ ಪರಿಸರ ಜಾಗೃತಿ ಇದೆ. ಈ ನಿಟ್ಟಿನಲ್ಲಿ ಸಸಿಗಳನ್ನು ನೆಡುವುದರ ಜೊತೆಗೆ ಅವುಗಳ ಪೆÇೀಷಣೆಯನ್ನೂ ಸಹ ಮಾಡಬೇಕು. ಅರಣ್ಯ ಇಲಾಖೆ 12 ಲಕ್ಷದ 37 ಸಾವಿರ ಸಸಿಗಳನ್ನು ಬೆಳೆಸಿದೆ. ಉದ್ಯಾನವನ, ರಸ್ತೆ ಬದಿಯಲ್ಲೂ ಗಿಡ ನೆಡಲು ಉz್ದÉೀಶಿಸಲಾಗಿದೆ. 8 ಲಕ್ಷ ಸಸಿಗಳನ್ನು ಸಾರ್ವಜನಿಕ ಆಸ್ಪತ್ರೆ, ಶಾಲಾ ಆವರಣ, ಸಾಮಾಜಿಕ ಅರಣ್ಯ ಪ್ರದೇಶ ಸೇರಿದಂತೆ ರೈತರಿಗೆ ವಿತರಣೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾತನಾಡಿ, ಗಿಡಮರಗಳನ್ನು ಹೆಚ್ಚು ಬೆಳೆಸುವ ಉz್ದÉೀಶದಿಂದ ಜಿಲ್ಲಾಡಳಿತ ಮೂರು ಬಾರಿ ಪೂರ್ವಭಾವಿ ಸಭÉಯನ್ನು ನಡೆಸಿದೆ. ಜೊತೆಗೆ ಅರಣ್ಯ ಇಲಾಖೆ ಸಸಿಗಳನ್ನು ಬೆಳೆಸಿದ್ದು, ಅದನ್ನು ರೈತರಿಗೆ ಉಚಿವಾಗಿ ವಿತರಣೆ ಮಾಡಲಿದೆ. ರೈತರು ಸಂಬಂಧÀಪಟ್ಟ ದಾಖಲೆಗಳನ್ನು ನೀಡಿ ಪಡೆಯಬಹುದಾಗಿದೆ. ಸಂಘ ಸಂಸ್ಥೆಗಳ ಜೊತೆಗೂಡಿ ಹೆಚ್ಚು ಹೆಚ್ಚು ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ಎಲ್ಲೆಡೆ ಸಸಿಗಳನ್ನು ನೆಡುವ ಮತ್ತು ಪೆÇೀಷಿಸುವ ಕೆಲಸ ನಡೆಯಲಿದೆ ಎಂದರು.

ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್ ಕುಮಾರ್ ಮಾತನಾಡಿ, ಅರಣ್ಯ ಇಲಾಖೆ ವತಿಯಿಂದ ಮೈಸೂರಿನ ವಿವಿಧ ರಸ್ತೆ ಬದಿ, ಉದ್ಯಾನವನ, ಸರ್ಕಾರಿ ಕಚೇರಿ, ಶಾಲಾ-ಕಾಲೇಜು ಆವರಣದಲ್ಲಿ ಗಿಡ ನೆಡಲು ಉದ್ದೇಶಿಸಲಾಗಿದೆ. ಅಲ್ಲದೆ ಕೃಷಿ ಪ್ರೋತ್ಸಾಹ ಯೋಜನೆಯಡಿ ಜಿಲ್ಲೆಯ ರೈತರಿಗೆ ವಿವಿಧ ತಳಿಯ 9 ಲಕ್ಷ ಗಿಡ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಹೆಬ್ಬಾಳು ಕೆರೆ ಹಾಗೂ ಚೆಲುವಾಂಬ ಪಾರ್ಕ್ ಬಳಿ ಇರುವ ರೋಜ್ ಗಾರ್ಡನ್‍ನಲ್ಲಿ ಕಿರು ಅರಣ್ಯ ನಿರ್ಮಿಸಲಾ ಗುತ್ತಿದೆ. ಹೆಬ್ಬಾಳು ಕೆರೆ ಆವರಣದಲ್ಲಿ ವಿವಿಧ ತಳಿಯ ಒಂದು ಸಾವಿರ ಗಿಡ, ರೋಜ್ ಗಾರ್ಡನ್‍ನಲ್ಲಿ 60 ಗಿಡ ನೆಡಲಾಗಿದೆ. ನೆಟ್ಟಿರುವ ಗಿಡಗಳ ರಕ್ಷಣೆಗೆ ಖಾಸಗಿ ಸಂಸ್ಥೆಗಳು ಗ್ರೀನ್‍ಗಾರ್ಡ್ ಸೇರಿದಂತೆ ನಿರ್ವಹಣೆಗೆ ನೆರವು ನೀಡಬಹುದಾಗಿದೆ. ಹೆಬ್ಬಾಳು ಕೆರೆಯಲ್ಲಿ ನೆಟ್ಟಿರುವ ಗಿಡಗಳ ನಿರ್ವಹಣೆಗೆ ಇನ್ ಫೋಸಿಸ್ ಸಂಸ್ಥೆ ನೆರವು ನೀಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಡಿಸಿಎಫ್ ಶ್ರೀಧರ್, ಎಸಿಎಫ್‍ಗಳಾದ ಕೃಪಾನಿಧಿ, ಪರಮೇ ಶ್ವರ್, ಆರ್‍ಎಫ್‍ಓಗಳಾದ ಗೋವಿಂದ ರಾಜು, ದೇವರಾಜು, ಗಿರೀಶ್, ಲೋಕೇಶ್ ಮೂರ್ತಿ, ಡಿಆರ್‍ಎಫ್‍ಗಳಾದ ಮಂಜು, ವಿಜಯ್‍ಕುಮಾರ್, ಮೈಸೂರು ಗ್ರಾಹಕ ಪರಿಷತ್‍ನ ಭಾಮಿಶೆಣೈ, ಪರಿಸರ ಹೋರಾಟಗಾರ್ತಿ ಭಾನುಮೋಹನ್ ಸೇರಿದಂತೆ ಮತ್ತಿತರರು ಇದ್ದರು.