ಜನಸಂಖ್ಯಾ ಸ್ಫೋಟದಿಂದ ಪರಿಸರ ಅಸಮತೋಲನ

ಮೈಸೂರು: ಮಿತಿ ಮೀರುತ್ತಿರುವ ಜನಸಂಖ್ಯಾ ಸ್ಫೋಟದ ಹಿನ್ನೆಲೆಯಲ್ಲಿ ಪರಿಸರದ ಸಮತೋಲನ ಹದಗೆಡು ತ್ತಿದ್ದು, ಅರಣ್ಯ, ವನ್ಯಸಂಪತ್ತಿನ ಸಂರಕ್ಷಣೆಯಲ್ಲಿ ಯುವಜನರ ಪಾತ್ರ ಮುಖ್ಯವಾಗಿದೆ ಎಂದು ಕೇಂದ್ರ ಮೃಗಾಲಯ ಪ್ರಾಧಿ ಕಾರದ ಸದಸ್ಯ ಸಿ.ಎಸ್.ಯಾಲಕ್ಕಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಮೃಗಾಲಯದಲ್ಲಿ ಇಂದಿನಿಂದ ಆರಂಭವಾದ ಮೊದಲ ತಂಡದ ಬೇಸಿಗೆ ಶಿಬಿರದಲ್ಲಿ ಮಾತನಾಡಿದ ಅವರು, ಈ ಹಿಂದೆ 23 ಕೋಟಿ ಜನಸಂಖ್ಯೆ ಹೊಂದಿದ್ದ ನಮ್ಮ ದೇಶದಲ್ಲಿ ಪ್ರಸ್ತುತ 130 ಕೋಟಿ ಜನರಿದ್ದಾರೆ. ಅಂದಿನಿಂದ ಇಂದಿನವರೆಗೂ ಜನಸಂಖ್ಯಾ ಸ್ಫೋಟ ಹೆಚ್ಚಾಗುತ್ತಿದ್ದರೂ ಕೃಷಿ ಭೂಮಿ ಪ್ರಮಾಣ ಹೆಚ್ಚಾಗಿಲ್ಲ. ಅರಣ್ಯ ನಾಶವಾಗುತ್ತಿದೆ. ವನ್ಯ ಸಂಪತ್ತಿಗೆ ಆಪತ್ತು ಎದುರಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ತೀವ್ರತರನಾದ ಸಂಕಷ್ಟ ಎದುರಾಗುತ್ತದೆ. ಈ ಎಲ್ಲಾ ಅಂಶವನ್ನು ಮನಗಂಡು ಕಳೆದ 25 ವರ್ಷಗಳಿಂದ ಪರಿಸರ ಸಂರಕ್ಷಣೆ ವಿಷಯಗಳ ಬಗ್ಗೆ ಮಾತನಾಡಲಾರಂಭಿಸಿದ್ದಾರೆ ಎಂದರು.

ಜನಸಂಖ್ಯೆ ಹೆಚ್ಚಾದರೂ ಈ ಹಿಂದೆ ಇದ್ದಷ್ಟೇ ಕೃಷಿ ಭೂಮಿ ಯಲ್ಲಿ ಬೆಳೆ ಬೆಳೆದು ಎಲ್ಲರಿಗೂ ಹೊಟ್ಟೆ ತುಂಬ ಊಟ ಸಿಕ್ಕುವಂತೆ ಮಾಡಲಾಗುತ್ತಿದೆ. ಹೆಚ್ಚು ಇಳುವರಿ ಬರುವ ಹೈಬ್ರೀಡ್ ತಳಿಯ ಬಿತ್ತನೆ ಬೀಜ ಬಳಸಲಾಗುತ್ತಿದೆ. ಹೆಚ್ಚಿನ ಪ್ರಮಾಣದ ರಾಸಾಯ ನಿಕ ಬಳಸಲಾಗುತ್ತಿದೆ. ಇದರಿಂದ ಜನರ ಆರೋಗ್ಯ ಮಾತ್ರವಲ್ಲದೆ, ಪರಿಸರದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಮಣ್ಣು, ಅಂತರ್ಜಲವೂ ರಾಸಾಯನಿಕ ಪದಾರ್ಥಗಳ ಬಳಕೆಯಿಂದ ಮಲಿನಗೊಂಡಿದೆ. ಇದು ಹೀಗೆ ಮುಂದುವರೆದರೆ ಮುಂದಿನ 40 ವರ್ಷಗಳಲ್ಲಿ ವನ್ಯ ಸಂಪತ್ತಿನ ಮೇಲೆ ಅಗಾಧವಾದ ದುಷ್ಪರಿಣಾಮ ಬೀರಲಿದೆ. ಇದರಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡುಗೆ ನೀಡಲು ಅಸಾಧ್ಯವಾಗಲಿದೆ. ಇದನ್ನು ಮನಗಂಡು ಇಂದಿನ ಯುವ ಜನತೆ, ವಿದ್ಯಾರ್ಥಿ ಸಮೂಹ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಅಗತ್ಯವಿದೆ. ಬೃಹತ್ ಮಹಾನಗರ (ಮೆಟ್ರೋಪಾಲಿಟನ್ ಸಿಟಿ)ಗಳಲ್ಲಿ ಪರಿಸರ ಮಿತಿ ಮೀರಿದ ಪ್ರಮಾಣದಲ್ಲಿ ಕಲುಷಿತಗೊಂಡಿದೆ. ಆಕಾಶ ನೋಡಲು ಸಾಧ್ಯವಿಲ್ಲ. ದೊಡ್ಡ ಪ್ರಮಾಣದಲ್ಲಿ ವಾಯುಮಾಲಿನ್ಯ ಆವರಿಸಿದೆ ಎಂದು ವಿಷಾದಿಸಿದರು.

ಬೇಸಿಗೆ ಬಂದರೆ ವಿವಿಧ ಬಗೆಯ ಶಿಬಿರಗಳು ಆರಂಭವಾಗು ತ್ತವೆ. ನಮ್ಮ ಬಾಲ್ಯದಲ್ಲಿ ಎಸ್‍ಎಸ್‍ಎಸ್ ಹಾಗೂ ಎನ್‍ಸಿಸಿ ಶಿಬಿರ ಮಾತ್ರ ನಡೆಯುತ್ತಿದ್ದವು. ಅವು ಶಿಸ್ತು ಕಲಿಸುತ್ತಿದ್ದವು. ಪ್ರಸ್ತುತ ಸಂದರ್ಭದಲ್ಲಿ ವಿವಿಧ ಬೇಸಿಗೆ ಶಿಬಿರ ನಡೆಯುತ್ತಿವೆ. ರೈಫಲ್ ತರಬೇತಿ, ಈಜು, ಪರಿಸರ ಶಿಬಿರಗಳು ನಡೆಯುತ್ತವೆ. ಎಲ್ಲವು ತನ್ನದ ಆದ ಮಹತ್ವ ಹೊಂದಿರುತ್ತವೆ. ಆದರೆ ಮೃಗಾಲಯದಲ್ಲಿ ನಡೆಯುವ ಶಿಬಿರ ವಿಭಿನ್ನ. ಪರಿಸರ ಸಂರಕ್ಷಣೆ, ಕಾಡು, ವನ್ಯ ಜೀವಿಸಂರಕ್ಷಣೆ, ಮಣ್ಣು, ಜಲ ಸಂರಕ್ಷಣೆ, ಪ್ರಾಣಿಗಳ ವರ್ತನೆ, ಜೀವನ ಶೈಲಿ ಸೇರಿದಂತೆ ಹಲವಾರು ವಿಷಯಗಳನ್ನು ಕಲಿಸುವು ದರ ಜತೆಗೆ ತರಬೇತಿ ನೀಡಲಾಗುತ್ತದೆ” ಎಂದು ಹೇಳಿದರು.

ಪ್ರಾದೇಶಿಕ ಪ್ರಾಕೃತಿಕ ವಸ್ತು ಸಂಗ್ರಹಾಲಯದ ವಿಜ್ಞಾನಿ ಡಾ.ಜಿ.ಎನ್.ಇಂದ್ರೇಶ್ ಮಾತನಾಡಿ, ಮೃಗಾಲಯದಲ್ಲಿ ನಡೆ ಯುವ ಬೇಸಿಗೆ ಶಿಬಿರ ಮಹತ್ವ ಪಡೆದಿದೆ. ಈ ಶಿಬಿರದಲ್ಲಿ ಮಕ್ಕಳು ಪ್ರಾಣಿ, ಪಕ್ಷಿ, ಕ್ರಿಮಿ-ಕೀಟಗಳ ಜೀವನ ಶೈಲಿ, ಪರಿಸರ ಸಂರಕ್ಷಣೆ, ವನ್ಯಜೀವಿಗಳ ರಕ್ಷಣೆ, ಗಿಡ-ಮರ ಗುರುತಿಸುವಿಕೆ ಸೇರಿದಂತೆ ಪರಿಸರಕ್ಕೆ ಸಂಬಂಧಿಸಿದ ವಿಷಯಗಳನ್ನು ಕಲಿಯಬಹುದು. ಇದರಿಂದ ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡು, ಇನ್ನಷ್ಟ ಜನರನ್ನು ಪರಿಸರ ಸಂರಕ್ಷಣೆಗೆ ಮನಃಪರಿವರ್ತನೆ ಮಾಡುವ ಶಕ್ತಿ ಬೆಳೆಯುತ್ತದೆ ಎಂದರು.

ಕಡಜ ಗೂಡನ್ನು ಕಟ್ಟಿ, ಅದರೊಳಗೆ ಹೆಣ್ಣು ಕಡಜ ಮೊಟ್ಟೆ ಯನ್ನಿಟ್ಟು ಮರಿ ಮಾಡುವ ವಿಧಾನ ರೋಚಕವಾಗಿರುತ್ತದೆ. ತಾಯಿ ಕಡಜ ಗೂಡೊಳಗೆ ಇದ್ದರೂ ಗಂಡು ಕಡಜ ಆ ಗೂಡನ್ನು ಪ್ಯಾಕ್ ಮಾಡುತ್ತದೆ. ಒಂದೇ ಒಂದು ರಂಧ್ರವೂ ಅದರಲ್ಲಿರುವು ದಿಲ್ಲ. ಆದರೂ ಅವು ಬದುಕಿರುತ್ತವೆ. ಗಂಡು ಕಡಜ ಗೂಡನ್ನು ಪ್ಯಾಕ್ ಮಾಡುವ ಮುನ್ನ ತಾಯಿ ಕಡಜಕ್ಕೆ ಅನಸ್ತೇಶಿಯಾ ಅಂಶವಿರುವ ದ್ರಾವಣವನ್ನು ಚುಚ್ಚುಮದ್ದಿನ ರೂಪದಲ್ಲಿ ನೀಡುತ್ತದೆ. ಇದನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದಾಗ ಮಾತ್ರ ವೈವಿಧ್ಯತೆ ಗಮನಿ ಸಬಹುದು. ಬಾವಲಿ ರಾತ್ರಿ ಹಾರಾಡುತ್ತದೆ. ಅದರಲ್ಲಿನ ವೈಶಿಷ್ಟ್ಯತೆ ಗಮನಿಸಿ ಸಬ್ ಮೆರಿನ್ ನಿರ್ಮಿಸಲಾಗಿದೆ ಎಂದು ವಿವರಿಸಿದರು.

ನಗರ ಪ್ರದೇಶದ ಜನರು ಅರಣ್ಯಕ್ಕೆ ಭೇಟಿ ನೀಡಿದಾಗ ಸೆಲ್ಪಿ ತೆಗೆದುಕೊಳ್ಳುತ್ತಾರೆ, ಪ್ರಾಣಿಗಳ ಫೋಟೋ ಕ್ಲಿಕಿಸುತ್ತಾರೆ. ಸೆಲ್ಫಿ ಕ್ಲಿಕಿಸುವ ವೇಳ ಪ್ರಾಣಿ ಅಟ್ಟಾಡಿಸಿಕೊಂಡು ಬಂದರೆ ಓಡಿ ಹೋಗುತ್ತವೆ ಎಂಬ ತಪ್ಪ ಕಲ್ಪನೆ ಜನರಲ್ಲಿರುತ್ತದೆ. ಪ್ರಾಣಿಗಳ ವರ್ತನೆ ತಿಳಿಯದೆ ಸಾಯುತ್ತಾರೆ. ಘಟನೆ ಸಂಭವಿ ಸಿದ ನಂತರ ಪ್ರಾಣಿಗಳನ್ನು ದೂರುತ್ತಾರೆ. ಅವುಗಳ ಘನತೆ ಗೌರವ ಕಾಪಾಡಬೇಕು. ಕಾಡು ಜನ ಮತ್ತು ಆದಿವಾಸಿಗಳ ಮೇಲೆ ಪ್ರಾಣಿ ಗಳು ಏಕೆ ದಾಳಿ ಮಾಡುವುದಿಲ್ಲ. ಅವರಲ್ಲಿರುವ ಪ್ರಜ್ಞೆಯಿಂದ ಅವರು ಹಲವು ವರ್ಷಗಳಿಂದಲೂ ಅರಣ್ಯದಲ್ಲಿ ವಾಸಿಸುತ್ತಿದ್ದಾರೆ ಎಂದರು.

ಇಂದು ಆರಂಭವಾದ ಮೊದಲ ತಂಡದ ಬೇಸಿಗೆ ಶಿಬಿರ ಏ.30ರವರೆಗೆ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 9.30ರಿಂದ ಸಂಜೆ 4.30 ರವರೆಗೆ ಸಂಪನ್ಮೂಲ ವ್ಯಕ್ತಿಗಳಿಂದ ಪರಿಸರ ಸಂರಕ್ಷಣೆ, ವನ್ಯ ಜೀವಿಗಳ ಜೀವನ ಕ್ರಮ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮೇ5ರಿಂದ 14ರವರೆಗೆ ಎರಡನೇ ತಂಡ ಬೇಸಿಗೆ ಶಿಬಿರ ಜರುಗಲಿದೆ. ಎರಡೂ ತಂಡದಲ್ಲಿಯೂ ತಲಾ 65 ವಿದ್ಯಾರ್ಥಿಗಳಿದ್ದಾರೆ. ಕಾರ್ಯಕ್ರಮದಲ್ಲಿ ಮೈಸೂರು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇ ಶಕ ಅಜಿತ್ ಎಂ.ಕುಲಕರ್ಣಿ ಸೇರಿದಂತೆ ಮತ್ತಿತರಿದ್ದರು.