ಜಾಗತೀಕರಣದ ಸಮಸ್ಯೆಗಳಿಗೆ ಪರಿಸರ ಸಂರಕ್ಷಣೆ ಮದ್ದು

ಮೈಸೂರು: ಜಾಗತೀಕರಣದಿಂ ದಾಗಿ ತಲೆದೂರಿರುವ ಹಲವು ಸಮಸ್ಯೆಗಳ ಪರಿಹಾರಕ್ಕೆ ಪರಿಸರ ಸಂರಕ್ಷಣೆಯೊಂದೇ ದಾರಿ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಶ್ರೀರಾಂಪುರದಲ್ಲಿರುವ ಮಹಾವೀರ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ನಡೆದ ವಿಶ್ವ ಪರಿಸರ ದಿನಾ ಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರಿಸರ ಮಾನವ ಜೀವಿಸಲು ಬೇಕಾದ ವಾತಾ ವರಣವನ್ನು ಕೊಡುಗೆಯಾಗಿ ನೀಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಸೇರಿದಂತೆ ವಿವಿಧ ಕಾರಣಗಳಿಂದ ಪರಿಸರದ ಮೇಲೆ ದೌರ್ಜನ್ಯ ನಡೆಯುತ್ತಿದೆ. ಮಿತಿ ಮೀರಿದ ಪ್ರಮಾಣದಲ್ಲಿ ಗಿಡ, ಮರಗಳ ಹನನ ನಡೆಯುತ್ತಿದೆ. ಇದರಿಂದ ಪರಿಸರದ ಮೇಲೆ ಒತ್ತಡ ಹೆಚ್ಚಾಗಿ, ಅದರ ದುಷ್ಪರಿಣಾಮ ಜನರ ಆರೋಗ್ಯದ ಮೇಲೆ ಉಂಟಾಗು ತ್ತಿದೆ. ಈ ನಡುವೆ ಜಾಗತೀಕರಣದಿಂದಾಗಿಯೂ ಹಲವು ಸಮಸ್ಯೆಗಳು ಸೃಷ್ಟಿಯಾಗಿವೆ. ಇದನ್ನು ತಡೆಗಟ್ಟಬೇಕಾದ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದರು.

ಗಾಳಿ, ನೀರು, ಬೆಳಕು ಸೇರಿದಂತೆ ನಾವು ಎಲ್ಲವನ್ನೂ ಪರಿಸರದಿಂದ ಪಡೆದುಕೊಳ್ಳುತ್ತೇವೆ. ಆದರೆ ಅದಕ್ಕೆ ಪ್ರತಿ ಯಾಗಿ ನಾವು ಪರಿಸರಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾವು ಸ್ವಾರ್ಥ ಬದುಕಿಗಾಗಿ ಕಾಡನ್ನು ಆಕ್ರಮಿಸಿ, ಮರಗಿಡಗಳನ್ನು ಕಡಿದು ಪ್ರಾಣಿಸಂಕುಲಕ್ಕೆ ಕೇಡನ್ನು ಬಗೆಯುತ್ತಿದ್ದೇವೆ. ಜಾಗತಿಕ ತಾಪಮಾನ ಪರಿಣಾಮ ಹೆಚ್ಚಾಗಿ ಪರಿಸರ ಮಾಲಿನ್ಯ ಗೊಂಡು ಹಲವು ರೋಗಗಳಿಗೆ ತುತ್ತಾಗುತ್ತಿದ್ದೇವೆ. ಜಾಗ ತೀಕರಣದ ನಾಗಾಲೋಟದಲ್ಲಿ ವೈಜ್ಞಾನಿಕವಾಗಿ ನಾವು ಮುಂದುವರೆಯುತ್ತಿದ್ದರೂ ಮುಗಿದು ಹೋಗುವ ಸಂಪ ನ್ಮೂಲಗಳ ಮಿತ ಬಳಕೆಗೆ ಸಾಧ್ಯವಾಗುತ್ತಿಲ್ಲ. ಪರಿಸರ ಸಂರಕ್ಷಣೆಯಿಂದ ಮಾತ್ರ ಬಹುತೇಕ ಸಮಸ್ಯೆಗಳಿಗೆ ತಿಲಾಂ ಜಲಿ ನೀಡಬಹುದು. ವಿದ್ಯಾರ್ಥಿಗಳು ಪೆÇೀಷಕರು ಆಡಂ ಬರದ ಹುಟ್ಟು ಹಬ್ಬಗಳನ್ನು ಧಿಕ್ಕರಿಸಿ ಅದರ ನೆನಪಿಗಾಗಿ ಗಿಡಗಳನ್ನು ನೆಡುವ ಮೂಲಕ ಸಾರ್ಥಕಗೊಳಿಸಿಕೊಳ್ಳ ಬಹುದು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮ ದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಶಾಂತ ಮೂರ್ತಿ, ಕಾರ್ಯ ದರ್ಶಿ ಇಚ್ಛಾ ಜೈನ್, ಸಿಎಸ್‍ಆರ್ ಟಿಐ ನಿರ್ದೇಶಕ ಆರ್.ಎಸ್.ರವೀಂದ್ರ ಸಿಂಗ್, ಮುಖ್ಯೋಪಾಧ್ಯಾಯ ರಾದ ಭಾಗ್ಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.