ಜೂ.16ರಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನಾ ವಾರ್ಷಿಕ ಮಹೋತ್ಸವ

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದ ಪಾದದಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ಹಾಗೂ ಶ್ರೀ ಗುರು ವಾಯೂರಪ್ಪನ್ ದೇವಾಲಯದ ಶಬರಿ ಮಲ ಶ್ರೀ ಅಯ್ಯಪ್ಪ ಪೂಜಾ ಸಮಿತಿ ವತಿ ಯಿಂದ ಜೂ.16ರಿಂದ 19ರವರೆಗೆ ಶ್ರೀ ಗುರುವಾಯೂರಪ್ಪನ್‍ರವರ 13ನೇ ಪ್ರತಿ ಷ್ಠಾಪನಾ ವಾರ್ಷಿಕ ಮಹೋತ್ಸವ ನಡೆಯ ಲಿದೆ. ಜೂ.17ರಂದು ಸೋಮವಾರ ಶ್ರೀ ಅಯ್ಯಪ್ಪಸ್ವಾಮಿ 36ನೇ ಪ್ರತಿಷ್ಠಾಪನಾ ವಾರ್ಷಿಕ ಮಹೋತ್ಸವ ಏರ್ಪಡಿಸಲಾಗಿದೆ.

ಜೂ.16ರಿಂದ 19ರವರೆಗೆ ವಿಶೇಷ ಪೂಜೆಗಳು ಗುರುವಾಯೂರು ತಂತ್ರಿ ಗಳಾದ ಡಾ. ಚೆನ್ನಾಸ್ ದಿನೇಶನ್ ಪಾಡ್ ಮತ್ತು ಅವರ ತಂಡದಿಂದ ನೆರವೇರಲಿದೆ.

ಜೂ.16ರಂದು ಶ್ರೀ ಗುರುವಾಯೂರಪ್ಪ ನಿಗೆ ಪ್ರಸಾದ ಶುದ್ಧಿ, ಅಸ್ತ್ರ ಕಳಸ ಪೂಜಾ, ವಾಸ್ತು ಹೋಮ, ವಾಸ್ತು ಕಳಶಪೂಜಾ, ವಾಸ್ತು ಕಳಶಾಭಿಷೇಕಂ, ವಾಸ್ತುಬಲಿ, ರಾಕ್ಷೋಘ್ನ ಹೋಮಂ, ಅತ್ತಾಳ ಪೂಜಾ ನಡೆಯಲಿದೆ. ಜೂ.17ರಂದು ಬೆಳಿಗ್ಗೆ 5.30 ರಿಂದ 11.30 ರವರೆಗೆ ಗಣಪತಿ ಹೋಮಂ, ಚತುಶುದ್ಧಿ, ಶ್ರೀ ಗುರುವಾಯೂರಪ್ಪನಿಗೆ ಬಿಂಬ ಶುದ್ಧಿ, ಧಾರ, ಪಂಚಗವ್ಯಂ, ಪಂಚಗಂ, ಅಸ್ತ್ರ ಕಳಶಪೂಜಾ, ಕಳಶಾಭಿಷೇಕಂ ಹಾಗೂ ಉಚ್ಛ ಪೂಜೆ, ಅನ್ನದಾನ, ಸಂಜೆ 5.30 ರಿಂದ 8ರವರೆಗೆ ದೀಪಾರಾಧನೆ, ವಾದ್ಯ ಗಳೊಂದಿಗೆ ವಿಶೇಷ ಪೂಜೆ, ಅತ್ತಾಳ ಪೂಜಾ, ಸಂಜೆ 5.30ರಿಂದ 6.30 ರವರೆಗೆ ಕೃಷ್ಣಸ್ವಾಮಿ ಮತ್ತು ತಂಡದವರಿಂದ ಭಕ್ತಿಗೀತೆಗಳ ಕಾರ್ಯಕ್ರಮವಿದೆ.

ಜೂ.18ರಂದು ಬೆಳಿಗ್ಗೆ 5.30 ರಿಂದ 11.30ರವರೆಗೆ ಗಣಪತಿ ಹೋಮಂ, ಶ್ರೀ ಗುರುವಾಯೂರಪ್ಪನಿಗೆ ಉದಯಾ ಸ್ಥಮಾನ ಪೂಜೆ, ನವಗಂ, ಪಂಚಗವ್ಯಂ ಹಾಗೂ ಉಚ್ಛ ಪೂಜೆ, ಅನ್ನದಾನ, ಸಂಜೆ 5.30 ರಿಂದ 8 ರವರೆಗೆ ದೀಪಾರಾಧನೆ, ವಾದ್ಯಗಳೊಂದಿಗೆ ವಿಶೇಷ ಪೂಜೆ, ಅತ್ತಾಳ ಪೂಜೆ ನೆರವೇರಲಿದೆ.

ಜೂ.19ರಂದು ಬೆಳಿಗ್ಗೆ 5.30ರಿಂದ 11.30ರವರೆಗೆ ಗಣಪತಿ ಹೋಮಂ, ಶ್ರೀ ಅಯ್ಯಪ್ಪಸ್ವಾಮಿಗೆ ಉದಯಾಸ್ಥಮಾನ ಪೂಜೆ, ನವಗಂ, ಪಂಚಗವ್ಯಂ ಹಾಗೂ ಉಚ್ಛ ಪೂಜೆ, ಅನ್ನದಾನ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ ದೂ. 0821-2484688 ಸಂಪರ್ಕಿಸಬಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.