ಫೋಟೋಗ್ರಫಿ, ವಿಡಿಯೋಗ್ರಫಿ, ಆಲ್ಬಮ್, ಡಿಜಿಟಲ್ ಇಮೇಜಿಂಗ್ ಕುರಿತ ವಸ್ತು ಪ್ರದರ್ಶನಕ್ಕೆ ಚಾಲನೆ

ಮೈಸೂರು:  ಫೋಟೋ ಗ್ರಫಿ ಹಾಗೂ ವಿಡಿಯೋಗ್ರಫಿಯ ಅತ್ಯಾ ಧುನಿಕ ತಂತ್ರಜ್ಞಾನದ ಸಮಗ್ರ ನೋಟದ ಮೇಲೆ ಬೆಳಕು ಚೆಲ್ಲುವ ಅಂತಾರಾಷ್ಟ್ರೀಯ ಫೋಟೋಗ್ರಫಿ, ವಿಡಿಯೋಗ್ರಫಿ, ಆಲ್ಬಮ್ ಮತ್ತು ಡಿಜಿಟಲ್ ಇಮೇಜಿಂಗ್ ಕುರಿತ ಎರಡು ದಿನಗಳ ವಸ್ತು ಪ್ರದರ್ಶನಕ್ಕೆ ಶನಿವಾರ ಚಾಲನೆ ದೊರೆಯಿತು.

ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಅಂಡ್ ವಿಡಿಯೋಗ್ರಾಫರ್ಸ್ ಅಸೋಸಿ ಯೇಷನ್, ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಸಿಯೇಷನ್ (ಕೆವಿ ಪಿಎ), ಬೈ-ಸೇಲ್ ಇಂಟ್ರಾಕ್ಷನ್ ಕಂಪನಿ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಿಂಗ್ ರಸ್ತೆಯಲ್ಲಿನ ಶುಭೋದಿನಿ ಕನ್ವೆನ್ಷನ್ ಹಾಲ್‍ನಲ್ಲಿ ಹಮ್ಮಿಕೊಂಡಿರುವ ವಸ್ತು ಪ್ರದರ್ಶನಕ್ಕೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಚಾಲನೆ ನೀಡಿದರು.

ಫೋಟೋಗ್ರಫಿ ಮತ್ತು ವಿಡಿಯೋ ಗ್ರಫಿಗೆ ಸಂಬಂಧಿಸಿದಂತೆ ಸ್ಟುಡಿಯೋ ಉಪ ಕರಣಗಳು, ಕ್ಯಾಮರಾಗಳು, ಆಲ್ಬಮ್ ಗಳು, ಸಂಕಲನದ ತಂತ್ರಜ್ಞಾನಗಳು, ಬೆಳ ಕಿನ ಉಪಕರಣಗಳು, ಮುದ್ರಣ ಯಂತ್ರ ಗಳು, ಸಿಡಿ-ಡಿವಿಡಿಗಳು, ಬೃಹತ್ ಎಲ್‍ಇಡಿ ಸ್ಕ್ರೀನ್‍ಗಳು, ಲ್ಯಾಮಿನೇಷನ್ ಯಂತ್ರಗಳು, ಡ್ರೋನ್ ಕ್ಯಾಮರಾಗಳು, ಲೆನ್ಸ್‍ಗಳು, ಸಂಕಲನದ ಸಾಫ್ಟ್‍ವೇರ್ ಗಳು ಸೇರಿದಂತೆ ನಾನಾ ಸಾಧನ-ಸಲ ಕರಣೆಗಳ 90ಕ್ಕೂ ಹೆಚ್ಚು ಮಳಿಗೆಗಳನ್ನು ಇಲ್ಲಿ ತೆರೆಯಲಾಗಿದೆ. ಅತೀ ವೇಗ ಮತ್ತು ಸುಲಭ ವಿಧಾನದಲ್ಲಿ ಆಲ್ಬಮ್ ತಯಾರು ಮಾಡುವ ತಮ್ಮ ಸಾಫ್ಟ್‍ವೇರ್‍ಗಳನ್ನು ಹಲವು ಸಂಸ್ಥೆಗಳು ಪ್ರದರ್ಶಿಸಿವೆ.

ಜೊತೆಗೆ ಇ-ಆಲ್ಬಮ್ ಅನ್ನು ಆ್ಯಪ್ ಮೂಲಕ ನೋಡುವ ವಿಧಾನದ ಬಗ್ಗೆಯೂ ಈ ಮಳಿಗೆಗಳು ಬೆಳಕು ಚೆಲ್ಲಿದವು. ಸ್ಟುಡಿಯೋ ಹಾಗೂ ಸಭಾಂಗಣಗಳಲ್ಲಿ ಅಳವಡಿಸಿಕೊಳ್ಳುವ ಅತ್ಯಾಧುನಿಕ ಸಾಧನ -ಸಲಕರಣೆಗಳ ಮಳಿಗೆಗಳು ಇಲ್ಲಿವೆ. ನೇರ ಪ್ರಸಾರ ಮಾಡುವ ಕ್ಯಾಮರಾ ಸೇರಿ ದಂತೆ ಇನ್ನಿತರ ಉಪಕರಣಗಳು ಹಾಗೂ ತಂತ್ರಜ್ಞಾನಗಳು ಇಲ್ಲಿದ್ದು, ಕ್ಯಾಮರಾ ಬ್ಯಾಗುಗಳು, ಕವರ್‍ಗಳು ಇಲ್ಲಿ ಉತ್ತಮ ವಾಗಿ ಪ್ರದರ್ಶನಗೊಂಡಿವೆ.

ಅತಿಥಿಯಾಗಿ ಶಾಸಕ ಎಲ್.ನಾಗೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂ ಡಿದ್ದರು. ನಗರಪಾಲಿಕೆ ಸದಸ್ಯೆ ಪ್ರಮೀಳಾ ಎಂ.ಭರತ್, ಮೈಸೂರು ಡಿಸ್ಟ್ರಿಕ್ಟ್ ಫೋಟೋ ಗ್ರಾಫರ್ಸ್ ಅಂಡ್ ವಿಡಿಯೋ ಗ್ರಾಫರ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಎಂ.ಎಸ್. ಮಂಜುನಾಥ್, ಉಪಾಧ್ಯಕ್ಷ ಎಸ್.ಮಂಜು ನಾಥ್, ಕಾರ್ಯದರ್ಶಿ ರಮೇಶ್ ಕುಮಾರ್ ಮತ್ತಿತರರು ಈ ವೇಳೆ ಹಾಜರಿದ್ದರು.