ಬೀಜ ಮಸೂದೆ ವಿಚಾರ ಸಂಕಿರಣದಲ್ಲಿ ವಿಶ್ರಾಂತ ಕುಲಪತಿ ಎಂ. ಮಹಾದೇವಪ್ಪ ವಿಷಾದ
ಮೈಸೂರು, ಫೆ.2(ಎಂಟಿವೈ)-ಕೃಷಿ ಕ್ಷೇತ್ರ ದಲ್ಲಿ ಪೂರ್ಣ ಪ್ರಮಾಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾನಿಲ ಯದ ವಿಶ್ರಾಂತ ಕುಲಪತಿ ಡಾ.ಎಂ. ಮಹಾದೇವಪ್ಪ ವಿಷಾದಿಸಿದ್ದಾರೆ.
ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಆವ ರಣದಲ್ಲಿರುವ ರಾಜೇಂದ್ರ ಸಭಾಂಗಣ ದಲ್ಲಿ ರೈತಮಿತ್ರ ಫಾರ್ಮರ್ಸ್ ಪೆÇ್ರಡ್ಯೂಸರ್ ಕಂ.ಲಿ., ಬೀಜವೇದಿಕೆ, ರಾಷ್ಟ್ರೀಯ ಬೀಜ ಯೋಜನೆ, ಬೆಂಗಳೂರು ಕೃಷಿ ವಿವಿ, ಮೈಸೂರು ತೋಟಗಾರಿಕೆ ಮಹಾವಿದ್ಯಾಲಯದ ಸಹ ಯೋಗದಲ್ಲಿ ಆಯೋಜಿಸಿದ್ದ `ಬೀಜ ಮಸೂದೆ 2019ರ ಸಾಧÀಕ-ಬಾಧÀಕಗಳ ವಿಚಾರ ಸಂಕಿ ರಣ’ದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಕೃಷಿ ಕ್ಷೇತ್ರದಲ್ಲಿ ಶೇ.20ರಷ್ಟು ಮಾತ್ರವೇ ವಿಜ್ಞಾನ-ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿಯೇ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯ ವಾಗ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಳೆಯದಾದ ಕೃಷಿ ಬೀಜ ಕಾಯಿದೆ ಪ್ರಸ್ತುತ ಕೃಷಿ ಚಟುವಟಿಕೆಗೆ ಪೂರಕವಾಗಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ಕಾಯಿದೆ ರೂಪಿಸುವುದು ಅಗತ್ಯ. ಕೆಲವು ರೈತರು ಹೈಬ್ರಿಡ್ ಬಿತ್ತನೆ ಬೀಜ ವಿರೋಧಿಸುತ್ತಾರೆ, ಹಾಗಾಗಿ ಖಾಸಗಿ ಸಂಸ್ಥೆಗಳಿಗೆ ಹೈಬ್ರಿಡ್ ಬೀಜ ತಯಾರಿಕೆಗೆ ಅವಕಾಶ ನೀಡದೆ ರೈತರಿಗೇ ಹೈಬ್ರಿಡ್ ಬೀಜ ತಯಾರಿಕೆಗೆ ಅವಕಾಶ ಕಲ್ಪಿಸಿ, ಪೆÇ್ರೀತ್ಸಾಹಿಸುವ ಅಗತ್ಯವಿದೆ ಎಂದರು.
ರಾಜ್ಯದ ಹಲವು ಬಿತ್ತನೆ ಬೀಜ ಕೇಂದ್ರ ಗಳಲ್ಲಿ ಸಾವಿರಾರು ತಳಿಗಳ ಬೀಜಗಳನ್ನು ಸಂಗ್ರಹಿಸಿ, ಸಂರಕ್ಷಿಸಿಡಲಾಗಿದೆ. ಆದರೆ, ವಿವಿಗಳು, ಕೃಷಿ ಕೇಂದ್ರ, ಸರ್ಕಾರ ಮತ್ತು ರೈತರು ಅವುಗಳ ಪ್ರಯೋಜನ ಪಡೆದು ಕೊಳ್ಳುತ್ತಿಲ್ಲ, ಉಳಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿಲ್ಲ. ವಿಜ್ಞಾನಿಗಳು ಎಷ್ಟೇ ಆವಿ ಷ್ಕಾರ ಮಾಡಿದರೂ ಅನುಷ್ಠಾನಗೊಳಿಸು ವುದು ಸಮಿತಿಯೇ ಆಗಿರುತ್ತದೆ. ದುರದೃಷ್ಟ ವಶಾತ್ ಸಮಿತಿಯಲ್ಲಿ ವಿಜ್ಞಾನಿಗಳಲ್ಲದ ವರೇ ಸದಸ್ಯರಾಗಿರುತ್ತಾರೆ. ಇದರಿಂದ ಓರ್ವ ವಿಜ್ಞಾನಿ ಸಂಶೋಧಿಸಿದ ತಂತ್ರಜ್ಞಾನ ಅನು ಷ್ಠಾನ ಸಮಯದಲ್ಲಿ ತಡೆಹಿಡಿಯಲ್ಪಡು ತ್ತಿದೆ ಎಂದು ವಿಷಾದಿಸಿದರು.
ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧÀ್ಯಕ್ಷ ಅನಂತ ಹೆಗಡೆ ಆಶೀಸರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೀಜ ಮಸೂದೆ ಯಲ್ಲಿರುವ ಉತ್ತಮ ಅಂಶಗಳನ್ನು ರೈತರಿಗೆ ತಿಳಿಸುವ ಕೆಲಸವನ್ನು ಈ ವಿಚಾರ ಸಂಕಿ ರಣ ಮಾಡುತ್ತಿದೆ. 1966ರ ಮಸೂದೆಯನ್ನೇ ಜಾರಿಗೊಳಿಸಿರುವುದು ಸ್ವಾಗತಾರ್ಹ. ಆದರೆ ಪ್ರಸ್ತುತ ಸಂದರ್ಭಕ್ಕನುಗುಣವಾಗಿ ನ್ಯೂನತೆ ಗಳನ್ನು ಸರಿಪಡಿಸುವುದು ಅಗತ್ಯ. ಈ ಬೀಜ ಕಾಯಿದೆಯಲ್ಲಿ ರೈತರ ಹಕ್ಕಿನ ಕುರಿತಾಗಿ ಇರುವ ಕಾನೂನು ಅಂಶಗಳನ್ನು ಪುರಸ್ಕರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಾರಂಪರಿಕ ಅಥವಾ ರೈತರು ಅಭಿವೃದ್ಧಿ ಪಡಿಸಿದ ತಳಿಗಳನ್ನು ಸಂರಕ್ಷಿಸಲು ಕೃಷಿ ವಿವಿ ಗಳು ರೈತರಿಗೆ ಮಾರ್ಗದರ್ಶನ ನೀಡುವುದ ರೊಂದಿಗೆ ರೈತರ ಹಿತ ಕಾಯುವ ಸಾಂಸ್ಥಿಕ ವ್ಯವಸ್ಥೆಯನ್ನೂ ರೂಪಿಸಬೇಕು. ಖಾಸಗಿ ಉದ್ಯಮಗಳು ಉತ್ಪಾದಿಸುವ ಬೀಜದ ದರ, ಗುಣ ಸೇರಿದಂತೆ ಕೃಷಿ ಚಟುವಟಿಕೆಗೆ ಪೂರಕ ವಾದ ಮಾಹಿತಿಗಳನ್ನು ನಿಧರ್Àರಿಸುವಾಗ ರೈತರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸ ಬೇಕು. ಆ ಸಮಿತಿಯಲ್ಲಿ ರೈತರು ಹಾಗೂ ರೈತರ ಸಹಕಾರಿ ಸಂಸ್ಥೆಗಳ ಸಹಭಾಗಿತ್ವ ಅಗತ್ಯ ಎಂದರು.
ವಂಶವಾಹಿನಿ ಬದಲಿಸಿದ ತಳಿಗಳ ಕುರಿತು ನಿರ್ಣಯ ಕೈಗೊಳ್ಳಲು ಕೇಂದ್ರ ಸಂಸ್ಥೆ ಇರು ವುದರಿಂದ ಜಿ.ಎಮ್.ಬೆಳೆಗಳನ್ನು ಉz್ದÉೀ ಶಿತ ಬೀಜ ಮಸೂದೆ ವ್ಯಾಪ್ತಿಯಿಂದ ದೂರ ಇಡಬೇಕು. ದೇಶದ ಕೃಷಿ ವೈವಿಧ್ಯವನ್ನು ಸಂರಕ್ಷಿಸುತ್ತಾ, ಸಂವಧರ್Àನೆ ಮಾಡಲು ಪೂರಕ ವಾತಾವರಣ ನಿರ್ಮಿಸುವ ಮಸೂದೆ ರೂಪಿಸಬೇಕು. ಈ ದಿಸೆಯಲ್ಲಿ ರೈತರು ವಿಚಾರ ಸಂಕಿರಣದಲ್ಲಿ ಮಂಡಿಸುವ ಸಲಹೆ, ನಿಯಮ ಗಳನ್ನು ಮಸೂದೆಯಲ್ಲಿ ತಿದ್ದುಪಡಿ ಮಾಡಿ ಜಾರಿಗೊಳಿಸುವಂತೆ ಮನವಿ ಮಾಡಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ರಾಜೇಂದ್ರ ಪ್ರಸಾದ್ ಮಾತ ನಾಡಿ, ಮಳೆ ಆಧಾರಿತ ಕೃಷಿ ಮಾಡುವ ರಾಜ್ಯಗಳಲ್ಲಿ ಕರ್ನಾಟಕ ಇಡೀ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಜೊತೆಗೆ ಬಿತ್ತನೆ ಬೀಜ ಸಂಗ್ರಹ, ತರಕಾರಿ ಬೆಳೆಯಲ್ಲಿ ಮೊದಲ ಸ್ಥಾನದಲ್ಲಿರುವುದು ಗಮನಾರ್ಹ. ಭಾರತ ಕೃಷಿ ಕ್ಷೇತ್ರದಲ್ಲಿ ಸಾಧÀನೆ ಮಾಡಿ ದ್ದರೂ, ಹವಾಮಾನ ವೈಪರೀತ್ಯ, ಬೆಲೆ ಕುಸಿತ ಸಮಸ್ಯೆಗಳಿಂದ ರೈತರು ಇಂದಿಗೂ ಸಂಕಷ್ಟದಲ್ಲಿದ್ದಾರೆ. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆ ಮಾಡುವತ್ತ ಹೆಚ್ಚು ಆದ್ಯತೆ ನೀಡಬೇಕಿದೆ ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧÀ್ಯಕ್ಷ ಕುರುಬೂರು ಶಾಂತ ಕುಮಾರ್, ಧಾರವಾಡ ಕೃಷಿ ವಿವಿಯ ಬಸವೇ ಗೌಡ, ಬಾಗಲಕೋಟೆ ತೋಟಗಾರಿಕೆ ವಿವಿ ಕುಲಪತಿ ಡಾ.ಕೆ.ಎಂ.ಇಂದ್ರೇಶ್, ಎಲ್.ಎನ್.ಹೆಗ್ಡೆ, ಸಿ.ಎಲ್.ಗೌಡ, ಟಿ.ಆರ್. ಗೋಪಿನಾಥ್, ಆಂಧ್ರಪ್ರದೇಶದ ಬ್ರೆಸ್ಟ್ ವಿವಿಯ ಕುಲಪತಿ ಡಾ.ಅಶೋಕ ಅಲೂರ, ಬಾಗಲಕೋಟೆ ತೋ.ವಿ.ವಿ. ವಿಶ್ರಾಂತ ಕುಲಪತಿ ಡಾ.ಎಸ್.ಬಿ.ದಂಡಿನ, ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯ ದರ್ಶಿ ಅತ್ತಹಳ್ಳಿ ದೇವರಾಜು ಸೇರಿ ಹಲವರು ಪಾಲ್ಗೊಂಡಿದ್ದರು.