ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಆತ್ಮಜ್ಞಾನಂದಜೀ ಅವರಿಗೆ ಆತ್ಮೀಯ ಬೀಳ್ಕೊಡುಗೆ

ಮೈಸೂರು: ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಇಂದು ಚಂಡೀಗಢದ ರಾಮಕೃಷ್ಣ ಮಿಷನ್‍ಗೆ ಕಾರ್ಯದರ್ಶಿಯಾಗಿ ನೇಮಕವಾಗಿರುವ ಸ್ವಾಮಿ ಆತ್ಮಜ್ಞಾನಂದಜೀ ಮಹಾರಾಜ್ ಅವರನ್ನು ಭಾನುವಾರ ಬೀಳ್ಕೊಡಲಾಯಿತು.

ಯಾದವಗಿರಿಯ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಶಾಂಭವಾನಂದಜಿ ಸಭಾಂಗಣದಲ್ಲಿ ಭಾನುವಾರ ಆಯೋಜಿ ಸಿದ್ದ `ನೂತನ ಅಧ್ಯಕ್ಷರಿಗೆ ಸ್ವಾಗತ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಬೀಳ್ಕೊ ಡುಗೆ ಸ್ವೀಕರಿಸಿ ಮಾತನಾಡಿದ ಆತ್ಮಜ್ಞಾನಂದಜೀ, ಶ್ರೀ ರಾಮಕೃಷ್ಣ ಸಂಘ ರಾಮಕೃಷ್ಣರ ಶರೀರ ವಾಗಿದ್ದು, ಸಂಘದ ಮೂಲಕ ಅವರು ಇಂದಿಗೂ ಜೀವಂತವಾಗಿದ್ದಾರೆ. ಈ ಸಂಘಕ್ಕೆ ಬ್ರ್ರಹ್ಮಚರ್ಯರು, ಸನ್ಯಾಸಿಗಳು, ಸ್ವಯಂಸೇವಕರು ನೀಡಿದ ಸೇವೆಯನ್ನು ರಾಮಕೃಷ್ಣರಿಗೆ ಸಲ್ಲಿಸಿದ ಪೂಜೆ ಎಂದೇ ಭಾವಿಸಬಹುದು ಎಂದು ಹೇಳಿದರು.

ಒಬ್ಬ ವ್ಯಕ್ತಿಯನ್ನು ಆಧರಿಸಿ ರಾಮಕೃಷ್ಣ ಆಶ್ರಮ ನಿರ್ಮಿತವಾಗಿಲ್ಲ. ಶ್ರೀ ರಾಮ ಕೃಷ್ಣರು ಇದೆಲ್ಲದರ ಕೇಂದ್ರ ಬಿಂದು ವಾಗಿದ್ದು, ಅವರ ಆದರ್ಶಗಳನ್ನು ಮೈಗೂ ಡಿಸಿಕೊಂಡು ಆಧ್ಯಾತ್ಮಿಕ ಸಾಧನೆಯಲ್ಲಿ ಮುಂದುವರೆಯಬೇಕು. ನಮ್ಮ ಎಲ್ಲಾ ಸೇವೆಯಲ್ಲೂ ರಾಮಕೃಷ್ಣರೇ ಮೂಲವಸ್ತು, ಆರಾಧ್ಯ ದೈವವಾಗಬೇಕು ಎಂದು ಸಲಹೆ ನೀಡಿದರು. ಸ್ವಾಮಿ ವಿವೇಕಾನಂದರೇ ಸಾಧನೆಗಳನ್ನು ರಾಮಕೃಷ್ಣರಿಗೆ ಅರ್ಪಿಸಿ ದರು. ಹಾಗಾಗಿ ಎಲ್ಲಾ ಸೇವೆಗಳನ್ನು ಶ್ರೀರಾಮಕೃಷ್ಣರಿಗೆ ಅರ್ಪಿಸುವ ಪರಂಪರೆ ಶ್ರೀರಾಮಕೃಷ್ಣ ಆಶ್ರಮದಲ್ಲಿದೆ. ಜತೆಗೆ ರಾಮಕೃಷ್ಣ ಸಂಘದ ವಿವಿಧ ಕೇಂದ್ರಗಳ ಜವಾಬ್ದಾರಿ ಓರ್ವ ವ್ಯಕ್ತಿಯದಲ್ಲ. ಅಧ್ಯಕ್ಷ ರಾಗಿ ಒಬ್ಬರನ್ನು ನೇಮಿಸಿರುತ್ತಾರೆ ಅಷ್ಟೆ. ಅಲ್ಲಿನ ಸಹೋದರ ಸನ್ಯಾಸಿಗಳು, ಬ್ರಹ್ಮ ಚಾರಿಗಳದ್ದು ಆಗಿರುತ್ತದೆ. ಇದು ನಮ್ಮ ಮನಸ್ಸಿನಲ್ಲಿರಬೇಕು ಎಂದು ಹೇಳಿದರು.
ಶ್ರೀ ರಾಮಕೃಷ್ಣರಿಗೆ ಆಧ್ಯಾತ್ಮಿಕವಾಗಿ ಅಪಾರ ಶಕ್ತಿಯಿತ್ತು. ಅವರು ತಮ್ಮ ಶಿಷ್ಯರ ಜ್ಞಾನ ಎಷ್ಟರ ಮಟ್ಟಿಗೆಯಿದೆ. ಯಾವುದರಲ್ಲಿ ಆಸಕ್ತಿಯಿದೆ ಎಂಬುದನ್ನು ನೋಡಿದ ಕೂಡಲೇ ಹೇಳುತ್ತಿದ್ದರು. ಅಂಥ ಶಕ್ತಿ ಅವರಲ್ಲಿತ್ತು ಎಂದು ಸ್ಮರಿಸಿದರು.

ರಾಮಕೃಷ್ಣ ಆಶ್ರಮದ ಎಲ್ಲಾ ಕಾರ್ಯವು ತಂಡದ ಮಾದರಿಯಲ್ಲಿ ಯಶಸ್ವಿಯಾಗಿದೆ. ವಿಭಿನ್ನ ಭಾಷೆ, ಸಂಸ್ಕøತಿ, ಸಂಸ್ಕಾರ, ಆಹಾರ ಪದ್ಧತಿ ಎಲ್ಲವೂ ಬೇರೆಯಾದರೂ ಒಟ್ಟಾಗಿ ಸೇರಿ ರಾಮಕೃಷ್ಣರನ್ನು ಆರಾಧಿ ಸುತ್ತಿರುವುದು ನಿಜಕ್ಕೂ ಸ್ಮರಣೀಯ. ಆಶ್ರಮದ ಕಾರ್ಯಕ್ರಮಗಳಲ್ಲಿ ಸ್ವತಃ ತಾವಾಗೆ ಆಗಮಿಸಿ ಮನೆಯ ಕಾರ್ಯ ಕ್ರಮಗಳಂತೆ ಎಲ್ಲಾ ರೀತಿಯ ಜವಾಬ್ದಾರಿ ಗಳನ್ನು ನಿರ್ವಹಿಸುತ್ತಿದ್ದ ಆಶ್ರಮದ ಭಕ್ತರ ಸೇವೆಗೆ ನಾನು ಚಿರಋಣಿ. ಇಂದು ರಾಮಕೃಷ್ಣ ಆಶ್ರಮದ ಜವಾಬ್ದಾರಿಯನ್ನು ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಅವರಿಗೆ ವಹಿಸಿದ್ದೇನೆ ಎಂದು ಹೇಳಿದರು.

ಸ್ವಚ್ಛ ಮೈಸೂರು ಅಭಿಯಾನ: `ಸ್ವಚ್ಛ ಮೈಸೂರು ಸ್ವಸ್ಥ ಜೀವನ’ ಧ್ಯೇಯ ವಾಕ್ಯದೊಂದಿಗೆ ಆರಂಭಿಸಿದ `ಸ್ವಚ್ಛ ಮೈಸೂರು ಅಭಿಯಾನ’ವು 40 ಭಾನುವಾರಗಳಂದು ನಡೆದಿದ್ದು, ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರಿಗೆ ಧನ್ಯವಾದ ತಿಳಿಸಿದರು.

ಮೈಸೂರು ಶ್ರೀರಾಮಕೃಷ್ಣ ಆಶ್ರಮದ ನೂತನ ಅಧ್ಯಕ್ಷ ಸ್ವಾಮಿ ಮುಕ್ತಿದಾ ನಂದಜೀ ಮಹಾರಾಜ್ ಮಾತನಾಡಿ, ಆತ್ಮಜ್ಞಾನಂದಜಿ ಮಹಾರಾಜ್ ಅವರು ಮೈಸೂರಲ್ಲಿ ಎರಡೂವರೆ ವರ್ಷಗಳ ಕಾಲ ಉತ್ತಮ ಸೇವೆ ನೀಡುವ ಮೂಲಕ ಆಶ್ರಮ ಅಭಿವೃದ್ಧಿ ಜತೆಗೆ ಭಕ್ತರ ಮನಸ್ಸು ಗೆದ್ದಿದ್ದಾರೆ. ಅವರದು ವಿಶೇಷ ವ್ಯಕ್ತಿತ್ವ ವಾಗಿದ್ದು, ಇದಕ್ಕೆ ಇಲ್ಲಿ ನೆರೆದಿರುವ ಭಕ್ತರೇ ಉದಾಹರಣೆ ಎಂದರು.

ಮುಂದಿನ ದಿನಗಳಲ್ಲಿ ಮೈಸೂರಿನ ಸೇವಾ ಕೈಂಕರ್ಯಕ್ಕೆ, ಆಶ್ರಮದ ಅಭಿ ವೃದ್ಧಿಗೆ ಎಲ್ಲರ ಸಹಕಾರ ನಿರಂತರವಾಗಿ ಹೀಗೆ ಮುಂದುವರಿಯಲಿ ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಭಕ್ತರು ಅನಿಸಿಕೆ ಹಂಚಿಕೊಂಡರು. ನಂತರ ವಿವಿಧ ಸಂಘ, ಸಂಸ್ಥೆಗಳಿಂದ ಆತ್ಮಜ್ಞಾನಂದಜಿ ಮಹಾರಾಜ್ ಅವರನ್ನು ಅಭಿನಂದಿಸಲಾಯಿತು.