ಬಂಡೀಪುರದಲ್ಲಿ ಹೆಣ್ಣು ಚಿರತೆ ಸಾವು

ಗುಂಡ್ಲುಪೇಟೆ,ಡಿ.27- ಬಂಡೀಪುರ ಅಭಯಾರಣ್ಯದಲ್ಲಿ ಹೆಣ್ಣು ಚಿರತೆ ಸಾವನ್ನ ಪ್ಪಿರುವ ಘಟನೆ ನಡೆದಿದೆ. ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಗುಂಡ್ರೆ ವಲಯಕ್ಕೊಳಪಡುವ ಹೆಚ್.ಡಿ.ಕೋಟೆ ತಾಲೂಕಿನ ಬೀರಂಬಳ್ಳಿ ಗ್ರಾಮದ ಸಮೀಪ 3 ವರ್ಷ ಪ್ರಾಯದ ಹೆಣ್ಣು ಚಿರತೆಯ ಮೃತದೇಹ ಪತ್ತೆಯಾಗಿದೆ. ಚಿರತೆಯ ಸಾವಿಗೆ ನಿಖರ ತಿಳಿದುಬಂದಿಲ್ಲ.

ಸ್ಥಳಕ್ಕೆ ಹೆಡಿಯಾಲ ಸಹಾಯ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್, ಆರ್‍ಎಫ್‍ಓ ಶಶಿಧರ್ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಪಶು ವೈದ್ಯ ನಾಗರಾಜು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ.