ಸರಗೂರಲ್ಲಿ ರಾಗಿ ಮೆದೆಗೆ ಬೆಂಕಿ: ಒಂದು ಮೆದೆ ಭಸ್ಮ

ಸರಗೂರು: ಸರಗೂರು ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಗಿ ಮೆದೆಯೊಂದು ಬೆಂಕಿಯಲ್ಲಿ ಭಸ್ಮವಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು, ಅಂಬೇಡ್ಕರ್ ಯುವಕ ಸಂಘದವರು ಹಾಗೂ ಆಟೋ ಚಾಲಕರು ನೀರು ಸುರಿದು ಬೆಂಕಿ ಆರಿಸಲು ಯತ್ನಿಸಿದರು. ಬೆಂಕಿ ಮತ್ತಷ್ಟು ಹೆಚ್ಚಾದ ಕಾರಣ ಅಗ್ನಿಶಾಮಕದಳದವರಿಗೆ ಕರೆ ಮಾಡಿದರು.

ಆಗ್ನಿಶಾಮಕ ದಳದ ಸಿಬ್ಬಂದಿ ಬರುವ ವೇಳೆಗಾಗಲೇ ಎರಡು ರಾಗಿ ಮೆದೆಗಳಲ್ಲಿ ಒಂದು ಮೆದೆ ಪೂರ್ಣ ಸುಟ್ಟು ಹೋಗಿದೆ. ಘಟನೆ ಅಕಸ್ಮಿಕವೋ ಅಥವಾ ಕಿಡಿಗೇಡಿನ ಕೃತ್ಯವೋ ಎಂಬುದು ಇನ್ನಷ್ಟೇತಿಳಿಯಬೇಕಾಗಿದೆ.

ವಿವರ: ನೊಂದ ರೈತರು ಮಾತನಾಡಿ, ವರ್ಷವಿಡೀ ಜಮಿನಿನಲ್ಲಿ ಕಸ್ಟಪಟ್ಟು ರಾಗಿ ಬೆಳೆದು ಕಟಾವು ಮಾಡಿ ಕಾಡಾನೆ ಬಾಯಿಗೆ ತುತ್ತಾಗಬಾರದು ಎಂದು ಪಟ್ಟಣಕ್ಕೆ ತಂದು ಮೆದೆ ಹಾಕಿದ್ದೆವು. ಅದರೆ ಇಂದು ಬೆಂಕಿಗೆ ಆಹುವುತಿಯಾಗಿದೆ. ಸಂಕ್ರಾಂತಿ ಹಬ್ಬದ ಬಳಿಕ ಓಕ್ಕಣೆ ಮಾಡಬೇಕಿತ್ತು ಅಷ್ಟರಲ್ಲಿ ಬೆಂಕಿ ಬಿದ್ದಿದೆ ಎಂದು ಅಳನ್ನು ತೋಡಿಕೊಂಡರು. ರೈತರಾದ ದೇವಣ್ಣ, ಚಿಕ್ಕಯ್ಯ, ಭೈರಲಿಂಗಯ್ಯ, ಚಿಕ್ಕಯ್ಯ, ಚಿನ್ನಮ್ಮ ಲೇ.ಚಿಕ್ಕಣ್ಣ, ಕೆಂಪಮ್ಮ ಲೇ.ಸಿದ್ದಯ್ಯ, ದೊಡಯ್ಯ, ಹೊಂಗನ ಚಿಕ್ಕಣ್ಣ, ಜವರಯ್ಯ, ಚಿಕ್ಕಣ್ಣ, ಕೃಷ್ಣ, ಗೋಪಯ್ಯ, ಹನುಮಂತ, ಗೋಪಾಲಯ್ಯ ರಾಗಿ ಬೆಳೆ ಕಳೆದುಕೊಂಡ ರೈತರು. ಬಡವರಾದ ಇವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ರೈತ ಮುಖಂಡರು ಮನವಿ ಮಾಡಿದ್ದಾರೆ.