ಕ್ರಿಕೆಟ್ ಜನಕರಿಗೆ ಚೊಚ್ಚಲ ವಿಶ್ವಕಪ್ ಕಿರೀಟ

ಲಂಡನ್, ಜು.14(ಸಂತೋಷ್/ಪ್ರತಾಪ್) – ಕ್ರಿಕೆಟ್ ಕಾಶಿ ಲಾಡ್ರ್ಸ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿ ಲೆಂಡ್ ಮಣಿಸಿದ ಇಂಗ್ಲೆಂಡ್ ಚೊಚ್ಚಲ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿ ಕೊಂಡಿತು. ಇದರೊಂದಿಗೆ ಇಂಗ್ಲೆಂಡ್ 28 ಕೋಟಿ ರೂ. ಹಾಗೂ ಟ್ರೋಫಿ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ 14 ಕೋಟಿ ರೂ.ಗಳನ್ನು ತನ್ನದಾಗಿಸಿಕೊಂಡಿತು.

1975ರಲ್ಲಿ ವಿಶ್ವಕಪ್ ಪಂದ್ಯಾವಳಿ ಆರಂಭವಾದಾಗಿನಿಂದಲೂ ಪ್ರಶಸ್ತಿ ಗೆಲ್ಲು ವಲ್ಲಿ ವಿಫಲವಾಗಿದ್ದ ಇಂಗ್ಲೆಂಡ್ ಭಾನು ವಾರ ನಡೆದ ಫೈನಲ್ ಪಂದ್ಯ ಟೈ ಆದ ಹಿನ್ನೆಲೆಯಲ್ಲಿ ನಂತರ ನಡೆದ ಸೂಪರ್ ಓವರ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿ ಲೆಂಡ್ ತಂಡದ ಮೊತ್ತ 29 ರನ್ ಆಗು ವಷ್ಟರಲ್ಲಿ ಮಾರ್ಟಿನ್ ಗಪ್ಟಿಲ್ (19) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲು ಕಿತ್ತು. ಆದರೆ ನಂತರ ಹೆನ್ರಿ ನಿಕೋಲ್ಸ್‍ಗೆ ಜೊತೆಯಾದ ನಾಯಕ ಕೇನ್ ವಿಲಿಯ ಮ್ಸ್‍ನ್ 74 ರನ್‍ಗಳ ಜೊತೆಯಾಟ ವಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಆದರೆ 30 ರನ್ ಗಳಿಸಿದ್ದ ಕೇನ್ ವಿಲಿ ಯಮ್ಸ್‍ನ್ ವಿಕೆಟ್ ಒಪ್ಪಿಸಿದರು. ಹಿಂದೆಯೇ 55 ರನ್ ಗಳಿಸಿದ ಹೆನ್ರಿ ನಿಕೋಲ್ಸ್ ಪ್ಲಂಕೆಟ್‍ಗೆ ಬಲಿಯಾದರು. ರಾಸ್ ಟೇಲರ್ 15 ರನ್ ಗಳಿಸಿ ಪೆವಿಲಿಯನ್ ಸೇರಿ ಕೊಂಡರು. ಬಳಿಕ ಬಂದ ಟಾಮ್ ಲಾಥಮ್ 47, ಜೇಮ್ಸ್ ನಿಶಾಮ್ 19, ಕಾಲಿನ್ ಡಿ ಗ್ರಾಂಡ್ ಹೋಮ್ 16 ರನ್ ಗಳಿಸಿದರು. ಅಂತಿಮ ವಾಗಿ ನ್ಯೂಜಿಲೆಂಡ್ 50 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿತು. ಇಂಗ್ಲೆಂಡ್ ಪರ ಕ್ರೀಸ್ ವೋಕ್ಸ್ ಹಾಗೂ ಲಿಯಾಮ್ ಪ್ಲಂಕೆಟ್ ತಲಾ 3, ಜೋಫ್ರಾ ಅರ್ಚರ್ ಹಾಗೂ ಮಾರ್ಕ್ ಹುಡ್ ತಲಾ ಒಂದೊಂದು ವಿಕೆಟ್ ಪಡೆದರು.

ನ್ಯೂಜಿಲೆಂಡ್ ನೀಡಿದ 242 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ಆರಂಭ ಉತ್ತಮ ವಾಗಿರಲಿಲ್ಲ. ತಂಡದ ಮೊತ್ತ 28 ರನ್ ಆಗುವಷ್ಟರಲ್ಲಿ 17 ರನ್ ಗಳಿಸಿದ್ದ ಜೇಸನ್ ರಾಯ್ ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿತು. ಆದರೆ ತಂಡಕ್ಕೆ ಆಸರೆ ಯಾಗಬೇಕಿದ್ದ ಜೋ ರೂಟ್ 7, ಇಯಾನ್ ಮಾರ್ಗನ್ 9 ಹಾಗೂ ಜಾನಿ ಬೇರ್‍ಸ್ಟೋ 36 ರನ್ ಗಳಿಸಿ ಬಹುಬೇಗನೆ ವಿಕೆಟ್ ಒಪ್ಪಿಸಿದರು. ಈ ವೇಳೆ ಜೊತೆ ಯಾದ ಬೆನ್ ಸ್ಟೋಕ್ಸ್ ಹಾಗೂ ಜೋಸ್ ಬಟ್ಲರ್ 110 ರನ್ ಜೊತೆಯಾಟವಾಡಿ ದರು. ಆದರೆ 59 ರನ್ ಗಳಿಸಿದ್ದ ಜೋಸ್ ಬಟ್ಲರ್ ಒಪ್ಪಿಸಿದರು. ಕೊನೆವರೆಗೂ ಕ್ರೀಸಿ ನಲ್ಲಿದ್ದು ಗೆಲುವಿಗಾಗಿ ಹೋರಾಡಿದ ಬೆನ್ ಸ್ಟೋಕ್ಸ್ 89 ರನ್ ಗಳಿಸಿದರು. ಅಂತಿಮ ವಾಗಿ ಇಂಗ್ಲೆಂಡ್ 50 ಓವರ್‍ಗಳಲ್ಲಿ 241 ರನ್ ಗಳಿಸುವ ಮೂಲಕ ಪಂದ್ಯ ಟೈ ಆಯಿತು. ನ್ಯೂಜಿಲೆಂಡ್ ಪರ ಬೌಲಿಂಗ್ ನಲ್ಲಿ ಲ್ಯೂಕಿ ಫರ್ಗೂಸನ್ ಹಾಗೂ ಜೇಮ್ಸ್ ನಿಶಾಮ್ ತಲಾ 3, ಮ್ಯಾಟ್ ಹೆನ್ರಿ ಹಾಗೂ ಕಾಲಿನ್ ಡಿ ಗ್ರಾಂಡ್ ಹೋಮ್ ತಲಾ ಒಂದೊಂದು ವಿಕೆಟ್ ಪಡೆದರು.

ಪಂದ್ಯ ಟೈ ಆದ ಹಿನ್ನೆಲೆಯಲ್ಲಿ ನಂತರ ನಡೆದ ಸೂಪರ್ ಓವರ್‍ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 15 ರನ್ ಗಳಿಸಿತ್ತು. ನಂತರ ಪಂದ್ಯ ಗೆಲ್ಲಲು 16 ರನ್ ಗಳಿಸ ಬೇಕಿದ್ದ ನ್ಯೂಜಿಲೆಂಡ್ 1 ವಿಕೆಟ್‍ಗೆ 15 ರನ್ ಗಳಿಸಿ ಸೋಲು ಅನು ಭವಿಸಿತು. ಈ ಮೂಲಕ ಚೊಚ್ಚಲ ವಿಶ್ವಕಪ್ ಅನ್ನು ಇಂಗ್ಲೆಂಡ್ ತನ್ನ ದಾಗಿಸಿಕೊಂಡಿತು.