ಮೈಸೂರು: ಮಳೆ ಕೊರತೆ ಯಿಂದ ಮೈಸೂರಿನ ಪ್ರಮುಖ ಕೆರೆ ಗಳಾದ ಕಾರಂಜಿ ಹಾಗೂ ಲಿಂಗಾಂಬುಧಿ ಕೆರೆ ಸಂಪೂರ್ಣವಾಗಿ ಬತ್ತಿಹೋಗಿದ್ದು, ಪಕ್ಷಿಗಳು ವಲಸೆ ಬಂದಿರುವ ಕುಕ್ಕರಹಳ್ಳಿ ಕೆರೆಯಲ್ಲಿ ನೀರಿನ ಪ್ರಮಾಣ ಕುಸಿದಿದ್ದರೂ ಮೀನುಗಾರಿಕೆ ನಡೆಸುತ್ತಿರುವುದಕ್ಕೆ ಪಕ್ಷಿ ಪ್ರಿಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಕುಕ್ಕರಹಳ್ಳಿ ಕೆರೆ ಸೇರುತ್ತದೆಯಾದರೂ ಕರ್ನಾಟಕ ಮೀನು ಮಹಾಮಂಡಳಕ್ಕೆ ಮೀನುಗಾರಿಕೆ ನಡೆಸಲು ಟೆಂಡರ್ ನೀಡಿದೆ. ಇದರಿಂದ ಕುಕ್ಕರಹಳ್ಳಿ ಕೆರೆ ಸೇರಿದಂತೆ ಬಹುತೇಕ ಎಲ್ಲಾ ಕೆರೆಗಳಿಗೂ ಮೀನು ಮಹಾಮಂಡಳದ ವತಿಯಿಂದಲೇ ಮೀನಿನ ಮರಿ ಬಿಡಲಾಗುತ್ತದೆ. ಟೆಂಡರ್ ನಿಯ ಮಾನುಸಾರ ವರ್ಷಕ್ಕೆ 2 ಬಾರಿ ಮೀನು ಹಿಡಿಯಲಾಗುತ್ತದೆ. ಆದರೆ ಇದೀಗ ಮೀನು ಮಹಾಮಂಡಳಿ ಕಳೆದ ಐದಾರು ದಿನಗಳಿಂದ ಕುಕ್ಕರಹಳ್ಳಿ ಕೆರೆಯಲ್ಲಿ ಮೀನು ಗಾರಿಕೆ ನಡೆಸುತ್ತಿರುವುದು ಪಕ್ಷಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.
ವಿರೋಧ ಯಾಕೆ: ಕಳೆದ ಸಾಲಿನಲ್ಲಿ ನಿರೀಕ್ಷಿಸಿದ ಪ್ರಮಾಣದಲ್ಲಿ ಮಳೆ ಬಾರದ ಕಾರಣ ಎಲ್ಲಾ ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿರಲಿಲ್ಲ. ಇದ ರಿಂದಾಗಿ ಕಾರಂಜಿಕೆರೆ, ಲಿಂಗಾಂಬುಧಿಕೆರೆ ಫೆಬ್ರವರಿ ತಿಂಗಳಲ್ಲೇ ಬತ್ತಿ ಹೋಗಿವೆ. ಈ ಕೆರೆಗಳನ್ನು ಅವಲಂಬಿಸಿದ್ದ ಪಕ್ಷಿಗಳು ಕುಕ್ಕರ ಹಳ್ಳಿಕೆರೆಗೆ ವಲಸೆ ಹೋಗಿವೆ. ಅಲ್ಲದೆ ಇದೀಗ ಹೆಜ್ಜಾರ್ಲೆ(ಇಂಡಿಯನ್ ಪೆಲಿ ಕಾನ್) ಹಾಗೂ ಬಣ್ಣದ ಕೊಕ್ಕರೆ ಸಂತಾ ನೋತ್ಪತ್ತಿ ಸಮಯವಾಗಿದ್ದು, ಕೆರೆಯಲ್ಲಿನ ದ್ವೀಪಗಳಲ್ಲಿ ಈಗಾಗಲೇ ವಿವಿಧ ಪ್ರಬೇ ಧದ ಪಕ್ಷಿಗಳ ಮರಿಗಳಿದ್ದು, ಮೀನುಗಾರಿಕೆ ನಡೆಸುವುದರಿಂದ ಪಕ್ಷಿಗಳಿಗೆ ತೊಂದರೆ ಯಾಗುತ್ತಿದೆ. ಇದರಿಂದ ಕೆಲ ದಿನಗಳವ ರೆಗೆ ಮೀನುಗಾರಿಕೆ ಸ್ಥಗಿತಗೊಳಿಸುವಂತೆ ಪಕ್ಷಿ ಪ್ರಿಯರು ಒತ್ತಾಯಿಸಿದ್ದಾರೆ.
ಪರಿಶೀಲಿಸುತ್ತೇನೆ: ಈ ಕುರಿತು ಡಿಸಿಎಫ್ ಪ್ರಶಾಂತ್‍ಕುಮಾರ್ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ಕುಕ್ಕರಹಳ್ಳಿಕೆರೆ ಮೈಸೂರು ವಿವಿ ವ್ಯಾಪ್ತಿಗೆ ಸೇರಿದೆ. ಮೀನು ಗಾರಿಕೆ ನಡೆಸಲು ಟೆಂಡರ್ ನೀಡಲಾಗಿದೆ ಎಂಬ ಮಾಹಿತಿ ಇದೆ. ಸ್ಥಳಕ್ಕೆ ಹೋಗಿ ಪರಿಶೀಲಿಸುತ್ತೇನೆ. ಅದರಿಂದ ಪಕ್ಷಿಗಳಿಗೆ ತೊಂದರೆಯಾಗುತ್ತಿದೆ ಎಂದು ತಿಳಿದರೆ ಮೀನು ಹಿಡಿಯುವುದನ್ನು ನಿಲ್ಲಿಸುವಂತೆ ಮನವಿ ಮಾಡುತ್ತೇನೆ. ಕಳೆದ ಎರಡು ತಿಂಗಳ ಹಿಂದೆಯೂ ಮೀನುಗಾರಿಕೆ ಮಾಡಲು ಮುಂದಾಗಿದ್ದಾಗ ಪಕ್ಷಿಗಳ ಸಂತಾನೋ ತ್ಪತ್ತಿಗೆ ತೊಂದರೆಯಾಗುತ್ತದೆ ಎಂದು ಮೀನು ಹಿಡಿಯುವುದನ್ನು ನಿಲ್ಲಿಸುವಂತೆ ಕೋರ ಲಾಗಿತ್ತು. ಅದಕ್ಕೆ ಸ್ಪಂದಿಸಿದ್ದರು. ಇದೀಗ ಮತ್ತೆ ಮೀನುಗಾರಿಕೆ ನಡೆಸಲಾಗುತ್ತಿರು ವುದು ಗಮನಕ್ಕೆ ಬಂದಿದೆ. ಮೇಲ್ನೋಟಕ್ಕೆ ಪಕ್ಷಿಗಳಿಗೆ ಯಾವುದೇ ತೊಂದರೆ ಇಲ್ಲದಿ ರುವುದು ಕಂಡು ಬಂದರೆ ಚಿಕ್ಕ ಚಿಕ್ಕ ಮೀನನ್ನು ಪಕ್ಷಿಗಳೂ ತಿನ್ನುವುದರಿಂದ ಹುಟ್ಟು ಹಾಕುವ ತೆಪ್ಪ ಬಳಸಿ ಅವುಗಳನ್ನು ಹಿಡಿಯದಂತೆ ಹಾಗೂ ದಪ್ಪದಾಗಿರುವ ಮೀನನ್ನೇ ಹಿಡಿ ಯುವಂತೆ ಸೂಚಿಸುತ್ತೇನೆ ಎಂದರು.
ನಿಯಮಾವಳಿ ಪರಿಶೀಲಿಸುತ್ತೇನೆ: ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಲಿಂಗರಾಜಗಾಂಧಿ ಮಾತನಾಡಿ, ಮೀನು ಮಹಾಮಂಡಳಕ್ಕೆ 5 ವರ್ಷದ ಗುತ್ತಿಗೆ ನೀಡಲಾಗಿದೆ. ಗುತ್ತಿಗೆಯಲ್ಲಿ ಯಾವ ನಿಯಾಮಾವಳಿ ಅನುಸರಿಸಿದ್ದಾರೆ. ಹಾಕಿ ರುವ ಷರತ್ತನ್ನು ಪರಿಶೀಲಿಸುತ್ತೇನೆ. ನಿಯಮಾ ವಳಿ ಉಲ್ಲಂಘಿಸಿ ಮೀನುಗಾರಿಕೆ ನಡೆಸುತ್ತಿ ದ್ದರೆ ತಕ್ಷಣವೇ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ನಾವು ಮೀನುಗಾರಿಕೆ ವಿರೋಧಿಯಲ್ಲ: ಪಕ್ಷಿ ವೀಕ್ಷಕರಾದ ಡಿ.ಹೆಚ್.ತನುಜಾ ಮಾತ ನಾಡಿ, ಕುಕ್ಕರಹಳ್ಳಿ ಕೆರೆಯಲ್ಲಿ ಮೀನುಹಿಡಿ ಯಲು ತೆಪ್ಪದಲ್ಲಿ ಮೀನುಗಾರರು ಕೆರೆ ದ್ವೀಪ ಗಳತ್ತ ಓಡಾಡುತ್ತಿದ್ದಾರೆ. ಪ್ರಸ್ತುತ ಹೆಜ್ಜಾರ್ಲೆ, ಬಣ್ಣದ ಕೊಕ್ಕರೆ ಸಂತಾನೋತ್ಪತಿ ಸಮಯ ವಾಗಿದೆ. ಮತ್ತಷ್ಟು ಪಕ್ಷಿಗಳ ಸಣ್ಣ ಸಣ್ಣ ಮರಿಗಳು ದ್ವೀಪದಲ್ಲಿವೆ. ತೆಪ್ಪದಲ್ಲಿ ಬರುವ ಮೀನುಗಾರರನ್ನು ಕಂಡು ಪಕ್ಷಿಗಳು ಬೆದರು ತ್ತಿವೆ. ನಾವು ಮೀನುಗಾರರ ಮೇಲೆ ಆರೋಪ ಮಾಡುವುದಿಲ್ಲ. ಮೀನುಗಾರಿಕೆ ಮಾಡಲೇ ಬಾರದು ಎನ್ನುವುದೂ ಇಲ್ಲ. ಇದು ಸೂಕ್ತ ಸಮಯವಲ್ಲ. ಅಧಿಕಾರಿಗಳು ಪರಿಶೀಲನೆ ನಡೆಸಿ ಪಕ್ಷಿಗಳ ಸಂಕುಲಕ್ಕೆ ಆಗುತ್ತಿರುವ ತೊಂದರೆ ತಪ್ಪಿಸಲು ಮೀನು ಹಿಡಿಯುವು ದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು.
ಎಂ.ಟಿ.ಯೋಗೇಶ್ ಕುಮಾರ್