ನೋಡುಗರನ್ನು ಕೈ ಬೀಸಿ ಕರೆಯುತ್ತಿದೆ ‘ಫಲಪುಷ್ಪ ಪ್ರದರ್ಶನ’

ಹಾಸನ: ನೂರಾರು ಬಗೆಯ ಹೂವುಗಳು ನೋಡುಗರ ಆಕರ್ಷಿಸು ತ್ತಿವೆ… ಹೂಗಳಿಂದ ನಿರ್ಮಿತವಾದ ಹೇಮಾ ವತಿ ಅಣೆಕಟ್ಟು, ವಾಗ್ ಬಾರ್ಡರ್, ವಿವಿಧ ಹೂಗಳಿಂದ ಕಂಗೊಳಿಸುತ್ತಿವೆ… ಅಲ್ಲದೆ ಆಧುನಿಕ ಮಾದರಿಯ ಫ್ಲೈ ಓವರ್, ರೈತರ ಪರಿವಾರದ ದೃಶ್ಯಾವಳಿ ಸೇರಿದಂತೆ ಹುಲ್ಲಿ ನಿಂದ ತಯಾರಿಸಿರುವ ಯುದ್ಧ ನೌಕೆಗಳು ಜನರ ಗಮನ ಸೆಳೆಯುತ್ತಿವೆ.

ಇದು ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿ ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನ ದಲ್ಲಿ ಕಂಡುಬಂದ ದೃಶ್ಯ. ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ, ಜಿಲ್ಲಾ ಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪೋಲಿಸ್ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್ ಗೌಡ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಗಳ ಸಹಯೋಗದಲ್ಲಿ ವಸ್ತು ಪ್ರದರ್ಶನ ಗಳು ಆಯೋಜನೆಗೊಂಡಿದ್ದು, ತೋಟ ಗಾರಿಕೆ ಇಲಾಖೆಯಿಂದ 3 ದಿನಗಳ ಕಾಲ ಏರ್ಪಡಿಸಲಾಗಿರುವ ವಿವಿಧ ಹಣ್ಣುಗಳು ನೋಡುಗರನ್ನು ಆಕರ್ಷಿಸುತ್ತಿದ್ದು, ರೈತರಿಗೆ ತಿಳುವಳಿಕೆ ನೀಡುವಂತಹ ಯಂತ್ರೋ ಪಕರಣಗಳು, ರಸಗೊಬ್ಬರಗಳು, ಔಷಧಿ ಗಳು ಹಾಗೂ ರೇಷ್ಮೆಯಿಂದ ಮೂಡಿ ಬಂದಿ ರುವಂತಹ ಕಲಾಕುಂಚಗಳು ಸುಂದರತೆ ಯನ್ನು ಪ್ರತಿಬಿಂಬಿಸುತ್ತಿವೆ. 3ದಿನಗಳ ಕಾಲ ನಡೆಯುವ ಈ ಪ್ರದರ್ಶನ ಕಾರ್ಯ ಕ್ರಮವು ಸಾರ್ವಜನಿಕರಿಗೆ ಮನರಂಜನೆ ಯನ್ನು ನೀಡುವುದರಲ್ಲಿ ಸಂದೇಹವಿಲ್ಲ.

ಕೃಷಿ ಕ್ಷೇತ್ರಕ್ಕೆ ಶಕ್ತಿ ತುಂಬುವುದು ಅಗತ್ಯ: ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿ, ರಾಜ್ಯದಲ್ಲಿ ಕೃಷಿ ಕ್ಷೇತ್ರಕ್ಕೆ ಶಕ್ತಿ ತುಂಬದ ಹೊರತು ಸುಸ್ಥಿರ ಅಭಿವೃದ್ಧಿ ಅಸಾಧ್ಯ ಈ ನಿಟ್ಟಿನಲ್ಲಿ ಕೃಷಿ, ತೋಟ ಗಾರಿಕೆ ಹಾಗೂ ರೇಷ್ಮೆ ಇಲಾಖೆಗಳಿಗೆ ಕಾಯಕಲ್ಪ ಮಾಡುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.

ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರದಲ್ಲಿ ರಚನಾತ್ಮಕ ಸುಧಾರಣೆ ಅನಿವಾರ್ಯ ವಾಗಿದೆ ಈ ಬಗ್ಗೆ ಮುಖ್ಯಮಂತ್ರಿ ಮತ್ತು ಕೃಷಿ ಹಾಗೂ ತೋಟಗಾರಿಕಾ ಸಚಿವರ ಗಮನಕ್ಕೆ ತರಲಾಗಿದೆ. ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಅಭಿವೃದ್ಧಿ ಮತ್ತು ರೈತರಿಗೆ ಅನುಕೂಲ ಕಲ್ಪಿಸಬೇಕಾದರೆ ಹೋಬಳಿ ಮಟ್ಟದಲ್ಲಿ ಇಲಾಖೆಗಳನ್ನು ಬಲ ವಾಗಿಸಬೇಕು. ಕ್ಷೇತ್ರ ಸಹಾಯಕರು ಹಾಗೂ ಅಧಿಕಾರಿಗಳ ನೆರವನ್ನು ಒದಗಿಸ ಬೇಕು ಎಂದು ಸಚಿವರು ಹೇಳಿದರು.

ರೈತರಿಗೆ ಸೌಲಭ್ಯ, ಸಬ್ಸಿಡಿಗಳ ಜೊತೆಗೆ ತಂತ್ರಜ್ಞಾನ ಹಾಗೂ ಮಾನವ ಸಂಪತ್ತು ಸೇವೆಗಳ ನೆರವೂ ಪ್ರತಿ ಹಳ್ಳಿಗೆ ತಲುಪು ವಂತಾಗಬೇಕು ಈ ನಿಟ್ಟಿನಲ್ಲಿ ಕೃಷಿ, ತೋಟ ಗಾರಿಕೆ ಮತ್ತು ರೇಷ್ಮೆ ಇಲಾಖೆಗಳಲ್ಲಿನ ಸುಧಾರಣೆ ಶೀಘ್ರದಲ್ಲಿ ಆಗಲಿದೆ ಎಂದುಚ ತಿಳಿಸಿದರು.
ಕೃಷಿ ಕ್ಷೇತ್ರದಲ್ಲಿ ನಮ್ಮ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಹಳ್ಳಿ ಮಕ್ಕಳಿಗೆ ಇಂಗ್ಲೀಷ್ ಕಲಿಕೆ ಸೌಲಭ್ಯ ದೊರೆಯಬೇಕು. ಎಲ್ಲಾ ಜಿಲ್ಲೆಗಳಲ್ಲೂ ಉನ್ನತ ಶಿಕ್ಷಣ ಕಾಲೇಜು ಗಳು ಸ್ಥಾಪನೆಯಾಗಬೇಕು. ಇದು ಸರ್ಕಾರದ ಆಶಯ ಎಂದು ತಿಳಿಸಿದರು.
ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಪ್ರಾರಂಭಿಕ ಬದ್ದ ಎಂದು ಪುನರುಚ್ಚರಿಸಿದ ಸಚಿವರು ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಹೇಳಿದರು. ಪ್ರತಿ ತಾಲೂ ಕಿಗೆ ನಾಲ್ಕು ಹೊಸ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ ಅಭಿವೃದ್ಧಿ ತೃಪ್ತಿಕರವಾಗಿಲ್ಲ ಅಗತ್ಯವಿರುವ ಅನುದಾನ ಒದಗಿಸಲು ಇನ್ನೊಂದು ತಿಂಗಳಲ್ಲಿ ಅಧಿಕಾರಿಗಳು ಅಭಿವೃದ್ಧಿ ಮಾಡಿ ತೋರಿಸಬೇಕು ಎಂದು ಸೂಚಿಸಿದರು.

ಚನ್ನಪಟ್ಟಣಕೆರೆ ಕಲ್ಯಾಣಕ್ಕೆ 156 ಕೋಟಿ ರೂ ಯೋಜನೆ ರೂಪಿಸಲಾಗಿದೆ. ಬೆಂಗ ಳೂರಲ್ಲಿ ಕಬ್ಬನ್ ಪಾರ್ಕ್‍ಮಾದರಿಯಲ್ಲಿ ಇದನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಕಲೇಶಪುರ, ಆಲೂರು ತಾಲೂಕು ಗಳ ಆನೆಹಾವಳಿ ಪ್ರದೇಶಗಳಲ್ಲಿ ಮಕ್ಕಳ ಅನುಕೂಲಕ್ಕಾಗಿ ಹೊಸ ವಸತಿ ಶಾಲೆ ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಯಾರೇ ಅಧಿಕಾರಿಗಳಿರಲಿ ನಮಗೆ ಕೆಲಸ ವಾಗಬೇಕು. ರಾಜ್ಯ ಸರ್ಕಾರ ಸುಭದ್ರ ವಾಗಿದೆ. 5 ವರ್ಷದ ಅಧಿಕಾರವನ್ನು ಪೂರ್ಣ ಗೊಳಿಸಲಿದೆ. ಎಲ್ಲಾ ವರ್ಗದ ಜನ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಎ.ಎನ್. ಪ್ರಕಾಶ್ ಗೌಡ, ಮುಖ್ಯ ಕಾರ್ಯನಿರ್ವಾಹಕಾ ಧಿಕಾರಿ ಹೆಚ್.ಸಿ ಪುಟ್ಟಸ್ವಾಮಿ ಸೇರಿದಂತೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.