ದೇವಣಗೇರಿ ಪ್ಲಾಂಟರ್ಸ್ ಕ್ಲಬ್ ವತಿಯಿಂದ  ಕೊಡಗಿನ ಮೂಲ ಜನಾಂಗದ ಕುಟುಂಬಗಳಿಗೆ ಕಾಲ್ಚೆಂಡು ಪಂದ್ಯಾವಳಿ

ವೀರಾಜಪೇಟೆ: ದೇವಣಗೇರಿ ಪ್ಲಾಂಟರ್ಸ್ ಕ್ಲಬ್ ವತಿಯಂದ ಕೊಡಗಿನ ಜಮ್ಮಾ ಮನೆ ಹೆಸರು ಹೊಂದಿರುವ ಎ¯್ಲ ಮೂಲ ಜನಾಂಗದವರ ಕುಟುಂಬಗಳ ನಡುವೆ 5 ಆಟಗಾರರ ಕಾಲ್ಚೆಂಡು ಪಂದ್ಯಾವಳಿಯನ್ನು ದೇವಣಗೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೇ 7 ರಿಂದ 14 ರವರೆಗೆ ಆಯೋಜಿಸಲಾಗಿದೆ ಎಂದು ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಮೂಕೊಂಡ ಶಶಿಸುಬ್ರಮಣಿ ತಿಳಿಸಿದರು.

ವಿರಾಜಪೇಟೆ ಬಳಿಯ ದೇವಣಗೇರಿ ಪ್ಲಾಂಟರ್ಸ್ ಕ್ಲಬ್ ವತಿಯಿಂದ ಕರೆದಿದ್ದ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಶಿ ಸುಬ್ರಮಮಣಿ ಅವರು ಕೊಡಗಿನ ಜಮ್ಮಾ ಎಲ್ಲ ಮೂಲ ಜನಾಂಗದವರ ಒಗ್ಗಟ್ಟು, ವಿಶ್ವಾಸ ಹಾಗೂ ಪರಸ್ಪರ ಸೌಹಾರ್ದತೆಯನ್ನು ಕಾಪಾಡಿಕೊಂಡು ಪ್ರಗತಿಯತ್ತ ಸಾಗುವ ಸಂಕೇತವಾಗಿ ಈ ವರ್ಷ ಪ್ರಥಮ ಬಾರಿಗೆ ಪಂದ್ಯಾ ಟವನ್ನು ಆಯೋಜಿಸುತ್ತಿರುವುದರಿಂದ ಕೇವಲ 48 ಕುಟುಂಬಗಳಿಗೆ ಸೀಮಿತವಾಗಿರು ತ್ತದೆ. ಒಂದು ಕುಟುಂಬದಿಂದ ಒಂದು ತಂಡಕ್ಕೆ ಮಾತ್ರ ಅವಕಾಶ ನೀಡಲಾಗುವುದು. ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತರಬೇ ಕಾಗಿದ್ದು. ವಿಜೇತರಿಗೆ ಪ್ರಥಮ ರೂ, 30,000,ದ್ವಿತೀಯ ರೂ, 20,000, ತೃತೀಯ ಮತ್ತು ನಾಲ್ಕನೇ ಸ್ಥಾನಗಳಿಗೆ ತಲಾ ರೂ, 10,000 ಜೊತೆಗೆ ಆಕರ್ಷಕ ಟ್ರೋಫಿ ನೀಡಲಾಗುವುದು.

ಪ್ರವೇಶಕ್ಕೆ ಅವಕಾಶ ಮೇ 1 ಅಂತಿಮವಾಗಿದೆ. ಪ್ರವೇಶ ಬಯಸುವ ತಂಡದವರು ಮೊಬೈಲ್ 9663205632 ಹಾಗೂ 9535232738ನ್ನು ಸಂಪರ್ಕಿಸುವಂತೆ ಹೇಳಿದರು. ಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ಮೇದುರ ಭರತ್, ಪುಗ್ಗೇರ ವಿಜು, ಮೂಕೊಂಡ ಉಮೇಶ್, ಅಜೀತ್ ಕಾವೇರಪ್ಪ, ಪುಗ್ಗೇರ ಮಾದಯ್ಯ, ವಿಜು ನಂಜುಂಡ, ಐಚಂಡ ರವಿ, ಮೊಣ್ಣಯ್ಯ, ಈರಪ್ಪ, ಸೊಮೇಯಂಡ ಭರತ್ ಉಪಸ್ಥಿತರಿದ್ದರು.