ಕೇಂದ್ರದಿಂದ ದೇಶದೆಲ್ಲೆಡೆ ಭಯದ ವಾತಾವರಣ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಆರೋಪ

ಭಾರತೀನಗರ, ಡಿ.25(ಅ.ಸತೀಶ್)- ಕೇಂದ್ರ ಸರ್ಕಾರ ದೇಶದೆಲ್ಲೆಡೆ ಭಯದ ವಾತಾವರಣ ಸೃಷ್ಟಿ ಮಾಡಿದೆ ಎಂದು ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಆರೋಪಿಸಿದರು.

ಇಲ್ಲಿನ ಕೇಂಬ್ರಿಡ್ಜ್ ಶಾಲಾ ಆವರಣದಲ್ಲಿ ಬುಧವಾರ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಅಂಬೇಡ್ಕರ್ ಪರಿನಿಬ್ಬಾಣ ದಿನದ ಅಂಗವಾಗಿ ಆಯೋಜಿಸಿದ್ದ ‘ಸಂವಿಧಾನದ ಆಶಯಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಹಿಟ್ಲರ್, ಮುಸಲೋನಿಯಂತೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಸರ್ವಾ ಧಿಕಾರಿ ಧೋರಣೆಯ ಪರಿಣಾಮ ದೇಶದಲ್ಲಿ ಸಂವಿಧಾನದ ಆಶಯಗಳಿಗೆ ಬೆಲೆ ಇಲ್ಲದಂ ತಾಗಿದೆ. ಇಷ್ಟ ಬಂದಂತೆ ಕಾಯ್ದೆಗಳನ್ನು ರೂಪಿಸಿ, ದೇಶದಲ್ಲಿ ಹಿಂದುತ್ವವಾದವನ್ನು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ ಎಂದು ದೂರಿದರು.

ಮೈಸೂರು ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಅಂಬೇಡ್ಕರ್ ಬರೆದ ಸಂವಿಧಾನದ ಬದಲು ಮನುವಾದಿಗಳ ಸಂವಿಧಾನ ಆಳುತ್ತಿದೆ. ಇದರಿಂದ ದಲಿತರಾರು ಪ್ರಧಾನಿಯಾಗಲು ಸಾಧ್ಯವಾಗುತ್ತಿಲ್ಲ. ಪೌರತ್ವ ಕಾಯ್ದೆಯ ಪರಿ ಣಾಮ ದೇಶದಲ್ಲಿ ಅರಾಜಕತೆ, ಅಶಾಂತಿ ಸೃಷ್ಟಿಯಾಗಿದೆ ಎಂದರು.

ಶಾಸಕ ಡಿ.ಸಿ.ತಮ್ಮಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುವಾದಿಗಳು ತಮ್ಮ ಸ್ವ ಹಿತಾಶಕ್ತಿಗಾಗಿ ಮನುಷ್ಯ ಮನುಷ್ಯನ ನಡುವೆ ಜಾತಿ ಬೇಧಗಳನ್ನು ತಂದು ಇಬ್ಬಾಗ ಮಾಡಿ ದ್ದಾರೆ ಎಂದು ಆರೋಪಿಸಿದರು.

ಈ ವೇಳೆ ಜಿಪಂ ಸದಸ್ಯರಾದ ಬೋರಯ್ಯ, ಎ.ಎಸ್.ರಾಜೀವ್, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ, ಆದರ್ಶ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಡಾ.ಮೂರ್ತಿ, ಮುಖಂಡರಾದ ಸುರೇಶ್ ಕಂಠಿ, ಹೆಚ್. ಹೊಂಬಯ್ಯ, ಅಂದಾನಿ, ವಿಜಯಲಕ್ಷ್ಮಿ, ಪ್ರೊ.ಬಿ.ಎಸ್.ಚಂದ್ರಶೇಖರನ್, ಕಬ್ಬಾಳಯ್ಯ, ಮೂರ್ತಿ, ಯೋಗೇಶ, ಬಸವರಾಜು ಸೇರಿದಂತೆ ಇತರರಿದ್ದರು.