ಅರಸೀಕೆರೆಯಲ್ಲಿ ಸಂಚಾರ ಪೊಲೀಸರ ನೇಮಕಕ್ಕೆ ಮಾಜಿ ಶಾಸಕ ಎ.ಎಸ್.ಬಸವರಾಜು ಆಗ್ರಹ

ಅರಸೀಕೆರೆ: ನಗರದಲ್ಲಿ ವಾಹನ ಗಳ ದಟ್ಟಣೆ ಹೆಚ್ಚಾಗಿದ್ದು, ಆಯ್ದ ಭಾಗಗ ಳಲ್ಲಿ ಟ್ರಾಫಿಕ್ ಪೊಲೀಸ್ ನೇಮಕ ಮಾಡು ವುದರ ಮೂಲಕ ಪ್ರಾಣ ಹಾನಿಗಳನ್ನು ತಪ್ಪಿಸ ಬೇಕೆಂದು ಮಾಜಿ ಶಾಸಕ ಎ.ಎಸ್. ಬಸವ ರಾಜು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ನಗರದಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪಟ್ಟಣವು ನಗರಸಭೆಯಾಗುವುದರ ಮೂಲಕ ಮೇಲ್ದ ರ್ಜೆಗೆ ಏರಿದೆ. ಹಾಲಿ ಅರವತ್ತು ಸಾವಿ ರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿ ರುವ ನಗರಕ್ಕೆ ತಕ್ಕನಾಗಿ ವಾಹನಗಳ ದಟ್ಟಣೆಯೂ ಹೆಚ್ಚಾಗಿದೆ. ಹಳೆಯ ಬಡಾವಣೆ ಗಳಲ್ಲಿ ರಸ್ತೆಗಳು ಕಿರಿದಾಗಿದ್ದು, ಸಾರ್ವ ಜನಿಕರು ರಸ್ತೆಯನ್ನು ದಾಟಲು ಭಯಪಡ ಬೇಕಾದ ದುಸ್ಥಿತಿ ಎದುರಾಗಿದೆ. ರಸ್ತೆ ಬದಿಯ ಪಾದಚಾರಿ ಮಾರ್ಗಗಳನ್ನು ಗೂಡಂಗಡಿ ಗಳು ಆಕ್ರಮಿಸಿಕೊಂಡಿದ್ದು, ಇದರ ಬಗ್ಗೆ ನಗರಸಭೆಯಾಗಲಿ ಅಥವಾ ಪೊಲೀಸ್ ಠಾಣೆ ಅಧಿಕಾರಿಗಳಾಗಲಿ ಯಾವುದೇ ಕ್ರಮ ವನ್ನು ತೆಗೆದುಕೊಂಡಿಲ್ಲ. ನಗರದ ಅಂಬೇ ಡ್ಕರ್ ವೃತ್ತ, ಅಶೋಕ ಹೋಟೆಲ್ ಸರ್ಕಲ್, ಪಾತ್ರೆ ಪುಟ್ಟಯ್ಯ ಸರ್ಕಲ್, ಕೆ.ವಿ ಪೆಟ್ರೋಲ್ ಬಂಕ್ ವೃತ್ತ ಮತ್ತು ಕೃಷಿ ಮಾರುಕಟ್ಟೆ ವೃತ್ತಗಳಲ್ಲಿ ಟ್ರಾಫಿಕ್ ಪೊಲೀಸ್ ನೇಮಿಸು ವುದರ ಮೂಲಕ ಸಿಗ್ನಲ್ ದೀಪಗಳನ್ನು ಆಳವಡಿಸಿಬೇಕು.

ಸಾಯಿನಾಥ ರಸ್ತೆ, ಶ್ಯಾನುಭೋಗರ ಬೀದಿ, ಪೇಟೆ ಬೀದಿ ಮತ್ತು ಹುಳಿಯಾರು ರಸ್ತೆಗಳನ್ನು ಏಕ ಮುಖ ಸಂಚಾರ ಮಾರ್ಗ ವನ್ನಾಗಿ ಮಾಡಬೇಕು. ಈ ಎಲ್ಲಾ ಕಟ್ಟು ನಿಟ್ಟಿನ ಕ್ರಮಗಳಿಗೆ ಹಾಸನ ಜಿಲ್ಲಾಧಿಕಾರಿ ಗಳ ಆದೇಶ ಅವಶ್ಯಕವಾಗಿರುತ್ತದೆ. ನಾನು ಸೇರಿದಂತೆ ನಮ್ಮ ಭಾಜಪ ಬಳಗದ ಪದಾ ಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಿ ದ್ದೇವೆ. ಕೂಡಲೇ ವಾಹನಗಳ ಸಂಚಾರ ಸುಗಮವಾಗಲು ಆಗಬೇಕಾದ ಮಾರ್ಪಾ ಡುಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ನಗರ ಬಿಜೆಪಿ ಮಂಡಲ ಅಧ್ಯಕ್ಷ ಮನೋಜ್ ಕುಮಾರ್ ಮಾತನಾಡಿ, ನಗರದಲ್ಲಿ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಕಾಮಗಾರಿಗಳಿಗೆ ಸ್ವಾಧೀನ ಪಡಿಸಿಕೊಳ್ಳಲಾದ ಭೂಮಿಗಳಿಗೆ ಸೂಕ್ತ ಪರಿಹಾರವನ್ನು ರಾಜ್ಯ ಸರ್ಕಾರ ನೀಡಿರುವು ದಿಲ್ಲ. ಆ ನಿಟ್ಟಿನಲ್ಲಿ ಸ್ಥಳೀಯ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಭೂಮಿ ಕಳೆದು ಕೊಂಡವರಿಗೆ ಸೂಕ್ತ ಪರಿಹಾರವನ್ನು ಸರ್ಕರದಿಂದ ಕೊಡಿಸಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮಲ್ಲಿ ನಗರಸಭೆ ಸದಸ್ಯ ಗಿರೀಶ್, ಶುಭ, ಮುಖಂಡರಾದ ಶಿವನ್‍ರಾಜ್, ನಾಗೇಶ್ ಉಪಸ್ಥಿತರಿದ್ದರು.