ಜಾನುವಾರು ಖದೀಮರ ಬಂಧನ: ನಾಲ್ಕು ಹಸು ರಕ್ಷಣೆ

ಮೈಸೂರು: ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮೂವರು ಜಾನುವಾರು ಕಳ್ಳರು ಸಿಕ್ಕಿಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಶಾಂತಿನಗರ ನಿವಾಸಿಗಳಾದ ಅಯೂಬ್‍ಪಾಷ (20), ಸೈಯದ್ ಸಲ್ಮಾನ್ (22) ಹಾಗೂ ಮಹಮ್ಮದ್ ಶೋಹೆಲ್(19) ಬಂಧಿತರಾಗಿದ್ದು, ಗೂಡ್ಸ್ ಟೆಂಪೋದಲ್ಲಿ ಸಾಗಿಸುತ್ತಿದ್ದ 4 ಹಸುಗಳನ್ನು ರಕ್ಷಿಸಿ, ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆಲನಹಳ್ಳಿ ಠಾಣೆ ಹಾಗೂ ಸಿದ್ದಾರ್ಥ ಸಂಚಾರ ಠಾಣೆ ಪೊಲೀಸರು ಜ.18ರಂದು ರಿಂಗ್ ರಸ್ತೆ ಹಾಗೂ ತಿ.ನರಸೀಪುರ ರಸ್ತೆ ಜಂಕ್ಷನ್‍ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಗೂಡ್ಸ್ ಟೆಂಪೋಗೆ ಕೈ ತೋರಿಸಿ, ನಿಲ್ಲಿಸುವಂತೆ ಸೂಚಿಸಿ ದ್ದಾರೆ. ಆದರೆ ಚಾಲಕ ವಾಹನವನ್ನು ನಿಲ್ಲಿಸದೆ ವೇಗವಾಗಿ ಚಾಲಿಸಿಕೊಂಡು ಹೋಗಿದ್ದಾನೆ. ಇದರಿಂದ ಅನುಮಾನ ಗೊಂಡ ಪೊಲೀಸರು, ವಾಹನವನ್ನು ಹಿಂಬಾಲಿಸಿದ್ದಾರೆ. ಇದನ್ನು ಗಮನಿಸಿದ ಖದೀಮರು, ವಾಹನವನ್ನು ನಿಲ್ಲಿಸಿ, ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಬೆನ್ನತ್ತಿ ಹಿಡಿದ ಪೊಲೀಸರು, ವಿಚಾರಣೆ ನಡೆಸಿದಾಗ ವಿದ್ಯಾರಣ್ಯ ಪುರಂ ಠಾಣಾ ವ್ಯಾಪ್ತಿಯಲ್ಲಿ ಹಸುಗಳನ್ನು ಕಳ್ಳತನ ಮಾಡಿ, ಸಾಗಿಸುತ್ತಿದ್ದೆವು ಎಂದು ಒಪ್ಪಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಆಲನಹಳ್ಳಿ ಪೆÇಲೀಸ್ ಠಾಣೆ ಇನ್ ಸ್ಪೆಕ್ಟರ್ ಕೆ.ಎಂ.ಮಂಜು, ಸಿದ್ದಾರ್ಥ ಸಂಚಾರ ಠಾಣೆ ಸಬ್‍ಇನ್ ಸ್ಪೆಕ್ಟರ್ ಸತೀಶ್‍ಕುಮಾರ್ ಅರಸ್, ಎಎಸ್‍ಐ ಸತ್ಯಕುಮಾರ್, ಸಿಬ್ಬಂದಿ ಶ್ರೀಧರ್ ಹಾಗೂ ನಾಗರಾಜು ಪಾಲ್ಗೊಂಡಿದ್ದರು. ಈ ಸಂಬಂಧ ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.