ಬಗರ್ ಹುಕುಂ ಸೌಲಭ್ಯ ರೈತರಿಗೆ ನೀಡದೇ ವಂಚನೆ: ಆಕ್ರೋಶ

ತಾಲೂಕು ಆಡಳಿತ ವಿರುದ್ಧ ಚ.ಪಟ್ಟಣದಲ್ಲಿ ರೈತ ಸಂಘ, ಹಸಿರು ಸೇನೆ ಧರಣಿ
ಚನ್ನರಾಯಪಟ್ಟಣ, ಜು.7- ಕೃಷಿಕರಿಗೆ ಅನುಕೂಲ ಆಗಲೆಂದು ರಾಜ್ಯ ಸರ್ಕಾರ ಬಗರ್ ಹುಕುಂ ಯೋಜನೆ ಜಾರಿಗೆ ತಂದಿ ದ್ದರೆ, ಕಂದಾಯ ಇಲಾಖೆ ಅಧಿಕಾರಿಗಳು ಹಣದ ಆಸೆಯಿಂದ ಭೂಮಾಫಿಯಾದ ವರಿಗೆ ಖಾತೆ ಮಾಡಿಕೊಡುತ್ತಿದ್ದಾರೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ಆಕ್ರೋಶ ವ್ಯಕ್ತಪಡಿಸಿವೆ.

ಪಟ್ಟಣದಲ್ಲಿ ನಡೆದ ತಾಲೂಕು ಆಡಳಿ ತದ ವಿರುದ್ಧದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘ ಮತ್ತು ಹಸಿರು ಸೇವೆ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರಿನಿವಾಸ್, ತಾಲೂಕಿನಲ್ಲಿ ಕಂದಾಯ ಇಲಾಖೆ ಅಧಿ ಕಾರಿಗಳು ಹಣದ ಆಸೆಗೆ ಬಲಿಯಾಗಿ ಕೃಷಿ ಭೂಮಿಯನ್ನು ಭೂಗಳ್ಳರಿಗೆ ಖಾತೆ ಮಾಡಿಕೊಡುತ್ತಿದ್ದಾರೆ ಎಂದು ಕಿಡಿಕಾರಿ ದರು. ಇನ್ನೊಂದೆಡೆ ಸರ್ವೆ ಇಲಾಖೆ ಅಧಿ ಕಾರಿಗಳು ರೈತರ ಕೆಲಸ ಮಾಡಿಕೊಡಲು ರೈತರನ್ನು ಕಚೇರಿಗೆ ಅಲೆಸುತ್ತಾರೆ. ಹಣ ನೀಡಿದವರ ಪರವಾಗಿಯಷ್ಟೇ ಕೆಲಸ ಮಾಡು ತ್ತಾರೆ ಎಂದೂ ಆರೋಪಿಸಿದರು.

ದಂಡಿಗನಹಳ್ಳಿ ಹೋಬಳಿ ದೂತ ನೂರು ಕಾವಲು, ಶ್ರವಣಬೆಳಗೊಳ ಹಾಗೂ ಕಸಬಾ ಹೋಬಳಿ ಕೆಲ ಭಾಗ ದಲ್ಲಿ ರೈತರ ಸಾಗುವಳಿ ಕೃಷಿ ಭೂಮಿಯನ್ನು ಯಾರದ್ದೋ ಹೆಸರಿಗೆ ಖಾತೆ ಮಾಡಿ ದ್ದಾರೆ. ಈ ವಿಚಾರ ವನ್ನು ಎಸಿ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನೊಂದೆಡೆ, ಸರ್ಕಾರಿ ಇಲಾಖೆಗಳಲ್ಲಿ ದಲ್ಲಾಳಿಗಳದ್ದೇ ರಾಜ್ಯಭಾರವಾಗಿದೆ. ಭೂಮಿ ಯನ್ನು ನಕಲಿ ದಾಖಲೆ ಸೃಷ್ಟಿಸಿ, ತಹಸೀ ಲ್ದಾರ್ ಅವರ ಸೀಲು, ಸಹಿಯನ್ನೂ ನಕಲಿ ಮಾಡಿ ಮುಗ್ಧ ರೈತರನ್ನು ವಂಚಿಸುತ್ತಿ ದ್ದಾರೆ. ಈ ದಲ್ಲಾಳಿಗಳಿಗೆ ಸರ್ಕಾರಿ ಕಚೇರಿಯ ಸಿಬ್ಬಂದಿಯೇ ಸಹಕರಿಸುತ್ತಿ ದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ತೋಟಗಳಲ್ಲಿ ಲಕ್ಷಾಂತರ ತೆಂಗಿನ ಮರಗಳು ನೀರಿಲ್ಲದೆ ಒಣಗಿ ಹೋಗಿವೆ. ತೆಂಗು ಪುನಶ್ಚೇತನ ಯೋಜನೆ ಮೂಲಕ 1 ತೆಂಗಿನ ಮರಕ್ಕೆ 400 ರೂ. ನೀಡಿ ರಾಜ್ಯ ಸರ್ಕಾರ ರೈತರಿಗೆ ಅವಮಾನ ಮಾಡಿದೆ ಎಂದು ಕಿಡಿಕಾರಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ, 15 ಸಾವಿರ ರೂ.ಗಳನ್ನಾದರೂ ಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರದಿಂದ ಮನವಿ ಸ್ವೀಕರಿ ಸಿದ ತಹಸೀಲ್ದಾರ್ ಮಾರುತಿ ಅವರು, ನಕಲಿ ದಾಖಲೆ ಸೃಷ್ಟಿಸಿರುವ 10 ನೌಕರರ ವಿರುದ್ಧ ಇಲಾಖೆ ತನಿಖೆ ನಡೆದಿದೆ. ಉಳಿದ ದಾಖಲೆಗಳನ್ನೂ ಮರು ಪರಿಶೀಲಿಸಿ ತಪ್ಪಿತ ಸ್ಥರನ್ನು ಪತ್ತೆ ಹಚ್ಚಲಾಗುವುದು ಎಂದು ಭರವಸೆ ನೀಡಿದರು. ರೈತ ಸಂಘ-ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷ ಸಿ.ಎಲ್. ಹರೀಶ್, ಕಾರ್ಯದರ್ಶಿ ನಂಜೆಗೌಡ, ಖಜಾಂಚಿ ಬಾಲು, ವಕ್ತಾರ ಶ್ರೀಕಂಠ, ತಾಲೂಕು ಅಧ್ಯಕ್ಷ ಸುರೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬೇರೆಯವರ ಜಮೀನು ದಾಖಲೆ ನೀಡಿ
ಬ್ಯಾಂಕ್ ಸಾಲ ಪಡೆದು ವಂಚನೆ: ದೂರು
ಹೊಳೆನರಸೀಪುರ, ಜು.7- ತಮ್ಮ ತಂದೆ ಹೆಸರಿನಲ್ಲಿದ್ದ ಜಮೀನಿನ ದಾಖಲೆಗಳನ್ನು ಬ್ಯಾಂಕ್‍ಗೆ ನೀಡಿ ಟ್ರ್ಯಾಕ್ಟರ್ ಸಾಲ ಪಡೆದುಕೊಂಡು ವಂಚಿಸಲಾಗಿದೆ ಎಂದು ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿಯ ಮಂಜೇಗೌಡ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ನಮ್ಮ ತಾತ ಕಾಳೇಗೌಡ ಅವರಿಗೆ ಗಂಡು ಮಕ್ಕಳಿರದ ಕಾರಣ ಅವರು ತಮ್ಮನ ಮಗ ಗವಿಗೌಡರನ್ನು ಮನೆಯಲ್ಲಿಟ್ಟುಕೊಂಡು ಸಾಕಿದ್ದರು. ಹಾಗಾಗಿ ಕಾಳೇಗೌಡರ ಹೆಸರಿನಲ್ಲಿದ್ದ ಜಮೀನು ಗವಿಗೌಡ ಅವರ ಹೆಸರಿಗೆ ಬಂದಿದೆ. ಗವಿಗೌಡರಿಗೆ ನಾನು ಜೇಷ್ಠ ಪುತ್ರ. 2ನೇ ಪುತ್ರ ಜಯಣ್ಣ ಮೃತರಾಗಿದ್ದಾರೆ. ತಂಗಿ ಸುಮಿತ್ರಾಗೆ ಮದುವೆ ಯಾಗಿದೆ. ತಂದೆಯ ಹೆಸರಿನಲ್ಲಿದ್ದ ಜಮೀನು ದಾಖಲೆಗಳನ್ನು ನನ್ನ ಹೆಸರಿಗೆ ಇತ್ತೀಚೆಗೆ ವರ್ಗಾಯಿಸಿಕೊಂಡಾಗ ಪಹಣಿಯಲ್ಲಿ ಎಸ್‍ಬಿಎಂ ಬ್ಯಾಂಕಿನ ಸಾಲ ಬಾಕಿ ನಮೂದಾಗಿದ್ದು, ಆಘಾತ ಉಂಟು ಮಾಡಿದೆ. ಏಕೆಂದರೆ, ನಾನಾಗಲೀ, ತಂದೆಯಾ ಗಲೀ ಜಮೀನಿನ ಮೇಲೆ ಯಾವುದೇ ಸಾಲ ಪಡೆದಿಲ್ಲ. ದಾಖಲೆಗಳನ್ನು ಪರಿಶೀಲಿಸಿ ದಾಗ ಚಾಕೆನಹಳ್ಳಿಯ ಗವೀಗೌಡ ಎಂಬವರ ಮಗ ಮೋಹನ ಎಂಬಾತ ನಮ್ಮ ತಂದೆ ಗವಿಗೌಡರ ಹೆಸರಿನಲ್ಲಿದ್ದ ಸರ್ವೆ ನಂ 62/02ರ 37 ಗುಂಟೆ, 62/04ರಲ್ಲಿನ 29 ಗುಂಟೆ, 53/02ರಲ್ಲಿನ 14 ಗುಟೆ, 77/07ರಲ್ಲಿನ 36 ಗುಂಟೆ, 53/1ರಲ್ಲಿನ 20 ಗುಂಟೆಯ ಭೂದಾಖಲೆಗಳನ್ನು ಬ್ಯಾಂಕಿಗೆ ನೀಡಿ ಟ್ರ್ಯಾಕ್ಟರ್ ಸಾಲ ಪಡೆದಿದ್ದಾರೆಂಬುದು ತಿಳಿದುಬಂದಿದೆ. ವಂಚನೆ ಎಸಗಿರುವ ಮೋಹನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂಜೇಗೌಡ ಅವರು ಪೊಲೀಸರಿಗೆ ಜು.6ರಂದು ದೂರು ನೀಡಿದ್ದಾರೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.