1473 ಮಂದಿಗೆ ಉಚಿತ ಆರೋಗ್ಯ ತಪಾಸಣೆ

ಮೈಸೂರು: `ಆರೋಗ್ಯ ಮೈಸೂರು’ ಯೋಜನೆಯಡಿ ಕ್ಯಾನ್ಸರ್ ಜಾಗೃತಿ -ಚಿಕಿತ್ಸಾ ಅಭಿಯಾನ ಹಮ್ಮಿಕೊಂಡಿರುವ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಮೈಸೂರಿನ ನಟರಾಜ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 3ನೇ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕ್ಷೇತ್ರ ವ್ಯಾಪ್ತಿಯ 49, 50 ಮತ್ತು 51ನೇ ವಾರ್ಡ್‍ನ 1473 ಮಂದಿ ಆರೋಗ್ಯ ಸಂಬಂಧಿತ ತಪಾಸಣೆಗೆ ಒಳಗಾದರು.

ಪ್ರತಿ ಭಾನುವಾರ ಒಂದೊಂದು ಕಡೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸ ಲಾಗುತ್ತಿದ್ದು, ಇಂದು ಬೆಳಿಗ್ಗೆ 7 ಗಂಟೆ ಯಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆದ ಶಿಬಿರದಲ್ಲಿ 20 ಆಸ್ಪತ್ರೆಗಳ ವಿವಿಧ ವಿಭಾಗ ಗಳ ತಜ್ಞ ವೈದ್ಯರು, ವೈದ್ಯಕೀಯ ಪಿಜಿ ವಿದ್ಯಾರ್ಥಿಗಳು, ಸಿಬ್ಬಂದಿ, 20ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಕಾರ್ಯಕರ್ತರು, ಮೈಸೂರು ಮಹಾರಾಣಿ ಕಾಲೇಜಿನ 30 ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಸೇವೆ ಸಲ್ಲಿಸಿದರು.

ಹೃದ್ರೋಗಕ್ಕೆ ಸಂಬಂಧಿಸಿ 320, ಚರ್ಮ ರೋಗಕ್ಕೆ ಸಂಬಂಧಿಸಿ 67, ಮಧುÀಮೇಹ- 458, ಇಎನ್‍ಟಿ- 78, ವಿವಿಧ ಶಸ್ತ್ರ ಚಿಕಿತ್ಸೆ- 38, ಜನರಲ್ ಮೆಡಿಷನ್- 259, ಇಸಿಜಿ- 165, ಎಕೋ ಪರೀಕ್ಷೆ- 108, ರಕ್ತ ಪರೀಕ್ಷೆ- 326, ಆಯುರ್ವೇದ- 89, ಮೂಳೆ ರೋಗ 136, ಕ್ಯಾನ್ಸರ್‍ಗೆ ಸಂಬಂಧಿಸಿ 54 ಮಂದಿ ತಪಾಸಣೆಗೊಳಗಾದರು.

ನರರೋಗ- 38, ದಂತ- 294, ಸ್ತ್ರೀ ರೋಗ ಮತ್ತು ಪ್ರಸೂತಿಗೆ ಸಂಬಂಧಿಸಿ ದಂತೆ 40, ಮಕ್ಕಳ ಆರೋಗ್ಯ ಸಮಸ್ಯೆ- 81, ಕ್ಷಯ ರೋಗ- 31, ನೇತ್ರ ಸಮಸ್ಯೆಯ 286 ಮಂದಿಯನ್ನು ತಪಾಸಣೆಗೆ ಒಳಪಡಿ ಸಲಾಯಿತು. ದೃಷ್ಟಿದೋಷವಿದ್ದ 70 ಜನರಿಗೆ ಕನ್ನಡಕಗಳನ್ನು ಶಾಸಕರು ವಿತರಿಸಿದರು. ತಪಾಸಣೆಗೆ ಒಳಪಟ್ಟ ಎಲ್ಲರಿಗೂ ಅಗತ್ಯ ಔಷಧಿಗಳನ್ನು ವಿತರಿಸಲಾಯಿತು.

ಬೆಂಗಳೂರಿನ ಬಸವನಗುಡಿಯ ಶಂಕರ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಎಲ್ಲಾ ಸೌಲಭ್ಯವುಳ್ಳ ಹಾಗೂ ತಜ್ಞ ವೈದ್ಯರನ್ನು ಒಳಗೊಂಡ ಸುಸಜ್ಜಿತ ಪ್ರಯೋಗಾಲಯ ಬಸ್ಸನ್ನು ಆರೋಗ್ಯ ಶಿಬಿ ರಕ್ಕೆ ಕಳಿಸಿತ್ತು. ಈ ವಿಶೇಷ ಬಸ್‍ನಲ್ಲಿಯೇ ಸಾರ್ವಜನಿಕರಿಗೆ ಕ್ಯಾನ್ಸರ್‍ಗೆ ಸಂಬಂಧಿಸಿ ದಂತೆ ತಪಾಸಣೆ ನಡೆಸಲಾಯಿತು. ಮೈಸೂ ರಿನ ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯಿಂದ ಅವಶ್ಯ ವಿರುವವರಿಗೆ ಕನ್ನಡಕಗಳನ್ನು ನೀಡಲಾ ಯಿತು. ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಡಾ.ಕಾರ್ತಿಕ್ ಪಂಡಿತ್, ಡಾ.ಗೀತಾ, ಡಾ.ಜಯದೇವ್ ಅವರನ್ನು ಶಿಬಿರದ ಕೊನೆಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ.ರಾಮ ದಾಸ್, ನಗರಪಾಲಿಕೆ ವಿಪಕ್ಷ ನಾಯಕ ಬಿ.ವಿ. ಮಂಜುನಾಥ್, 49ನೇ ವಾರ್ಡ್ ಸದಸ್ಯ ರಾದ ಸೌಮ್ಯ ಉಮೇಶ್, `ಸೇಫ್ ವೀಲ್ಸ್’ನ ಮಾಲೀಕ ಪ್ರಶಾಂತ್, ವೈದ್ಯರಾದ ಡಾ.ಲಕ್ಷ್ಮೀ ನಾರಾಯಣ ಶೆಣೈ, ಕೆ.ಆರ್.ಕ್ಷೇತ್ರದ ವಿವಿಧ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.