ಮಾ.27ರಿಂದ ಏ.26ರವರೆಗೆ 80,48,232 ರೂ. ಮೌಲ್ಯದ 15,375 ಲೀಟರ್ ಮದ್ಯ ವಶ 286 ಪ್ರಕರಣ ದಾಖಲು, 260 ಮಂದಿ ಬಂಧನ, 34 ವಾಹನ ವಶ

ಮೈಸೂರು: ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ನಂತರ ಮಾರ್ಚ್ 27ರಿಂದ ಏಪ್ರಿಲ್ 26ರವರೆಗೆ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಬಕಾರಿ ಇಲಾಖೆ ಅಧಿಕಾರಿಗಳು 80,48,232 ರೂ. ಮೌಲ್ಯದ 15,375 ಲೀಟರ್ ವಿವಿಧ ಮಾದರಿಯ ಮದ್ಯ ವಶಪಡಿಸಿಕೊಂಡಿದ್ದಾರೆ.

ಮಿಲಿಟರಿ ಹೋಟೆಲ್ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುತ್ತಿದ್ದವರ ವಿರುದ್ಧ ಒಟ್ಟು 286 ಪ್ರಕರಣ ದಾಖಲಿಸಲಾಗಿದ್ದು, 260 ಮಂದಿಯನ್ನು ಬಂಧಿಸಲಾಗಿದೆ. 7,135.926 ಲೀಟರ್ ಹಾಟ್ ಡ್ರಿಂಕ್ಸ್, 6,083.740 ಲೀಟರ್ ಬೀರ್, 110.250 ಲೀಟರ್ ವೈನ್, 45 ಲೀಟರ್ ಸೇಂದಿ ಮತ್ತು 34 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.