ಕರಕುಶಲ ಕಲೆಗೆ ಪ್ರೋತ್ಸಾಹ ನೀಡಲು ನಗರಪಾಲಿಕೆಯಿಂದ ಪೂರ್ಣ ಸಹಕಾರ

ಮೈಸೂರು: ಕರಕು ಶಲಕರ್ಮಿಗಳಿಗೆ ಉತ್ತೇಜನ ನೀಡುವ ನಿಟ್ಟಿ ನಲ್ಲಿ ಮಹಾನಗರ ಪಾಲಿಕೆ ಸಾಧ್ಯವಿರುವ ಎಲ್ಲಾ ಸಹಕಾರ ನೀಡಲಿದೆ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ಹೇಳಿದರು.

ಮೈಸೂರಿನ ಇನ್ಸ್‍ಟಿಟ್ಯೂಟ್ ಆಫ್ ಇಂಜಿ ನಿಯರ್ಸ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕರಕುಶಲ ವಸ್ತುಗಳ ಉತ್ಪಾದಕರ ಸಂಘದ ವತಿಯಿಂದ ಭಾನುವಾರ ಹಮ್ಮಿ ಕೊಂಡಿದ್ದ ಐವರು ಸಾಧಕ ಕರಕುಶಲ ಕರ್ಮಿಗಳ ಸನ್ಮಾನ ಸಮಾರಂಭ ಉದ್ಘಾ ಟಿಸಿ ಅವರು ಮಾತನಾಡಿದರು.

ಮೈಸೂರಿನ ಪರಂಪರೆಯಲ್ಲಿ ಕರಕು ಶಲ ಕಲೆಯ ವೈಭವ ಕಾಣಬಹುದು. ಆದರೆ ಇಂದು ಆ ಹಿಂದಿನ ವೈಭವ ಇಲ್ಲ ವಾಗುತ್ತಿದ್ದು, ಹೀಗಾಗಿ ಕರಕುಶಲ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡುವ ಅಗತ್ಯವಿದೆ ಎಂದರು. ವಲ್ರ್ಡ್ ಕ್ರಾಫ್ಟ್ ಸಿಟಿ ಮಾನ್ಯತೆ ಮೈಸೂರಿಗೆ ದೊರೆಯುವ ವಿಶ್ವಾಸವಿದ್ದು, ಈಗಾಗಲೇ ಮಾನ್ಯತೆ ನೀಡುವ ಸಂಬಂಧ ವಲ್ರ್ಡ್ ಕ್ರಾಫ್ಟ್ ಕೌನ್ಸಿಲ್‍ನ ಪ್ರತಿನಿಧಿಗಳ ತಂಡ ಮೈಸೂರಿಗೆ ಭೇಟಿ ನೀಡಿತ್ತು. ಶೀಘ್ರದಲ್ಲಿ ಮತ್ತೊಮ್ಮೆ ಭೇಟಿ ನೀಡ ಬಹುದು ಎಂದು ಹೇಳಿದರು.

ಇದೇ ವೇಳೆ ಮೈಸೂರಿನ ಕರಕುಶಲ ಕರ್ಮಿಗಳಾದ ಇಂಟಾರ್ಸಿಯ ಇಂಡಿ ಯಾದ ಕ್ರಾಫ್ಟ್ ಉದ್ಯಮದ ಎರಿಕ್ ಸಾಕೆ ಲ್ಲಾರೋಪೋಲೋಸ್, ಹಿಲಿಯೋಸ್ ಡೆಕೋರ್ ಪ್ರೈ.ಲಿ.ನ ಭಾನುಪ್ರಕಾಶ್, ಆರ್‍ಕೆ ಫೈನ್ ಆಟ್ರ್ಸ್‍ನ ಖೀಜರ್ ಅಹ್ಮದ್, ರಹ ಮತ್, ಪ್ರೀತಂ ಹ್ಯಾಂಡಿಕ್ರಾಫ್ಟ್ ಹಾಗೂ ಕ್ರೀಡಾಪಟು ಯಶ್ವಂತ್‍ಕುಮಾರ್ ಅವ ರನ್ನು ಸನ್ಮಾನಿಸಲಾಯಿತು. ಶಾಸಕ ಎಲ್.ನಾಗೇಂದ್ರ, ನಗರಪಾಲಿಕೆ ಸದಸ್ಯರಾದ ಆರ್.ನಾಗರಾಜ್ (ಎಂಡಿ), ರಮೇಶ್ (ರಮಣಿ), ಸಂಘದ ಅಧ್ಯಕ್ಷ ಎಸ್.ರಾಮು, ಪ್ರಧಾನ ಕಾರ್ಯದರ್ಶಿ ಸೈಯದ್ ಇಸ್ಮಾಲ್, ಸಹಾಯಕ ಕಾರ್ಯ ದರ್ಶಿ ಎನ್.ಕುಮಾರ್, ಖಜಾಂಚಿ ಸೋಮ ಶೇಖರ್ ಮತ್ತಿತರರು ಹಾಜರಿದ್ದರು