ಕೊಡಗಿನ ನೆರೆ ಸಂತ್ರಸ್ತರಿಗೆ ಭೇರ್ಯದಲ್ಲಿ ನಿಧಿ ಸಂಗ್ರಹ

ಭೇರ್ಯ:  ಕುಂಭದ್ರೋಣ ಮಹಾಮಳೆಗೆ ತತ್ತರಿಸಿರುವ ಕೊಡಗಿನ ಜನರು ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯದ ಜನರು ನೆರವು ನೀಡಬೇಕೆಂದು ಸಮೀಪದ ಅರಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಎಸ್.ಸ್ವಾಮಿ ಮನವಿ ಮಾಡಿದರು. ಅವರು ಭೇರ್ಯ ಗ್ರಾಮದ ಗಾಂಧಿವೃತ್ತದಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಕೊಡಗಿನ ಜನರ ಸಂಕಷ್ಟ ಪರಿಹಾರಕ್ಕೆ ಪರಿಹಾರ ನಿಧಿ ಸಂಗ್ರಹ ಮಾಡಿ ಮಾತನಾಡಿ ಸಂಕಷ್ಟ ದಲ್ಲಿರುವವರಿಗೆ ನೆರವು ನೀಡುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.

ವಸತಿ ಶಾಲೆಯ ಮೂವತ್ತಕ್ಕೂ ಹೆಚ್ಚು ವಿಧ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು ಮುಂಜನಹಳ್ಳಿ ಮತ್ತು ಭೇರ್ಯ ಗ್ರಾಮದ ಎಲ್ಲಾ ಅಂಗಡಿ ಮುಗ್ಗಟ್ಟು, ರಸ್ತೆ ಬದಿ ವ್ಯಾಪಾರಿಗಳು ಹಾಗೂ ಸಾರ್ವಜನಿಕ ರಿಂದ ಪರಿಹಾರ ನಿಧಿಯನ್ನು ಸಂಗ್ರಹ ಮಾಡಿದರು.
ಸಂಗ್ರಹವಾದ ಪರಿಹಾರ ನಿಧಿಯ ಹಣವನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಅವರಿಗೆ ಅತಿ ಶೀಘ್ರದಲ್ಲಿ ತಲುಪಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಶಾಲಾ ಶಿಕ್ಷಕ ಮೋಹನಪ್ರಕಾಶ್, ದೈಹಿಕ ಶಿಕ್ಷಕ ಬಿ.ಎಂ.ರವಿ, ಸಿಬ್ಬಂದಿಗಳಾದ ಚಲುವರಾಜ್, ದಿನೇಶ್, ಅರುಣ್ ಇದ್ದರು.