ಮೈಸೂರು: ಮೈಸೂರಿನ ಅವಧೂತ ದತ್ತಪೀಠದ ಸಂಸ್ಥಾ ಪಕರಾದ ಗಣಪತಿ ಸಚ್ಚಿದಾನಂದ ಶ್ರೀಗಳ `ಸಚ್ಚಿದಾನಂದ ಶ್ರೀ’ ಗುರುವಂದನ ಗ್ರಂಥ ಭಾನುವಾರ ಲೋಕಾರ್ಪಣೆಗೊಂಡಿತು.
ಮೈಸೂರು-ನಂಜನಗೂಡು ಮುಖ್ಯ ರಸ್ತೆಯಲ್ಲಿರುವ ಅವಧೂತ ದತ್ತಪೀಠದ ನಾದಮಂಟಪದಲ್ಲಿ ಶ್ರೀ ಗಣಪತಿ ಸಚ್ಚಿದಾ ನಂದ ಸ್ವಾಮೀಜಿ ಹಾಗೂ ಕಿರಿಯಶ್ರೀ ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ.ಹಂ.ಪ.ನಾಗರಾಜಯ್ಯ ಅವರು ಗುರುವಂದನ ಗ್ರಂಥವನ್ನು ಬಿಡುಗಡೆ ಮಾಡಿದರು.
ಇದಕ್ಕೂ ಮುನ್ನ ಸಮಾರಂಭ ಉದ್ಘಾ ಟಿಸಿ, ಮಾತನಾಡಿದ ನಿವೃತ್ತ ಲೋಕಾ ಯುಕ್ತ ಡಾ.ಸಂತೋಷ್ ಹೆಗ್ಡೆ, ಗಣಪತಿ ಸಚ್ಚಿದಾನಂದ ಶ್ರೀಗಳು ಬಹುಮುಖ ಪ್ರತಿಭೆಯುಳ್ಳ ಸನ್ಯಾಸಿ. ಇವರ ಆಶ್ರಮ ಯಾವುದೇ ಒಂದು ಧರ್ಮ, ಜಾತಿಗೆ ಸೇರಿದ್ದಲ್ಲ. ಶ್ರೀಗಳು ಧರ್ಮದ ಬಗ್ಗೆ ಮಾತ್ರವಲ್ಲ ಸಂಗೀತ, ಸಾಹಿತ್ಯ ಸೇರಿದಂತೆ ಸಮಾಜದ ಹಲವು ಕ್ಷೇತ್ರಗಳಲ್ಲೂ ಅವರ ಕಾರ್ಯ ಅದ್ಭುತವಾದದ್ದು. ಶ್ರೀಗಳ 75ನೇ ವರ್ಷದ ಜನ್ಮೋತ್ಸವದ ಸಂದರ್ಭದಲ್ಲಿ ನಾನು ಭಾಗಿಯಾಗಿರುವುದು ಸಂತಸ ತಂದಿದೆ. ಶ್ರೀಗಳ ಸೇವೆ ಇನ್ನೂ ಹಲವು ವರ್ಷಗಳ ಕಾಲ ಸಮಾಜಕ್ಕೆ ದಕ್ಕಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಪ್ರಸ್ತುತ ಸಮಾಜದಲ್ಲಿ ಪೋಷಕರ ಕರ್ತವ್ಯ ನ್ಯೂನತೆ ಬಗ್ಗೆ ಶ್ರೀಗಳು ಮಾತ ನಾಡಿರುವುದನ್ನು ಕೇಳಿದ್ದೇನೆ. ಇದು ನನ್ನ ಮನಸ್ಸಿಗೆ ಸಮಾಧಾನ ತಂದಿದೆ. ಸಾಮಾಜಿಕ ಮೌಲ್ಯಗಳು ಕ್ಷೀಣಿಸಿರುವು ದನ್ನು ಲೋಕಾಯುಕ್ತನಾಗಿದ್ದ 5 ವರ್ಷ ಗಳಲ್ಲಿ ಹತ್ತಿರದಿಂದ ಕಂಡಿದ್ದೇನೆ. ನಮ್ಮ ಹಿರಿಯರು ಮಕ್ಕಳಿಗೆ ಪುರಾಣ ಕತೆಗಳನ್ನು ಹೇಳುತ್ತಿದ್ದರು. ಏನು ಮಾಡಬೇಕು, ಏನು ಮಾಡಬಾರದೆಂಬುದನ್ನು ಮನಸ್ಸಿಗೆ ತಟ್ಟುವಂತೆ ತಿಳಿಸಿಕೊಡುತ್ತಿದ್ದರು. ಇದರ ಪರಿಣಾಮದಿಂದಲೇ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಆದರೆ ಇಂದು ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ವಾಪಸ್ಸಾಗುವಾಗ ತಮ್ಮದೇ ಆದ ಸಮಸ್ಯೆಗಳನ್ನೂ ಮನೆಗೆ ತರುತ್ತಾರೆ. ಮಕ್ಕಳ ಜೊತೆ ಮೌಲ್ಯ, ಧರ್ಮದ ಬಗ್ಗೆ ಮಾತನಾಡುವ ಆಸಕ್ತಿ ಇರುವುದಿಲ್ಲ. ಹಾಗಾಗಿ ಸಮಾಜದಲ್ಲಿ ಗೊಂದಲಗಳನ್ನು ಕಾಣುವಂತಾಗಿದೆ ಎಂದು ಅಭಿಪ್ರಾಯಿಸಿದರು.
ಮನುಷ್ಯರಾದ ನಾವು ಕನಿಷ್ಠ 2 ಮೌಲ್ಯ ಗಳನ್ನಾದರೂ ಹೊಂದಿರಬೇಕು. ಅವುಗ ಳೆಂದರೆ ತೃಪ್ತಿ ಹಾಗೂ ಮಾನವೀಯತೆ. ಜೀವನದಲ್ಲಿ ತೃಪ್ತಿ ಇಲ್ಲದಿದ್ದರೆ ಭ್ರಷ್ಟಾಚಾರ ಬೆಳೆಯುತ್ತದೆ. ಸಮಾಜಕ್ಕೆ ರೋಗ ಅಂಟು ತ್ತದೆ. ಇನ್ನು ಮಾನವರಾಗಿ ಹುಟ್ಟದಿದ್ದರೂ ಸಾಯುವಾಗ ಮಾನವರಾಗಿ ಸಾಯಬೇಕು. ಯುವ ಸಮುದಾಯಕ್ಕೆ ಈ ಮೌಲ್ಯಗಳ ಅನಿವಾರ್ಯತೆ ಹಾಗೂ ಮಹತ್ವ ತಿಳಿಸುವ ಉದ್ದೇಶದಿಂದ ಈವರೆಗೆ 1076 ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ಲೋಕಾಯುಕ್ತನಾಗಿದ್ದ 5 ವರ್ಷದ ಅನು ಭವವನ್ನು ವಿದ್ಯಾರ್ಥಿಗಳ ಮುಂದಿಟ್ಟಿದ್ದೇನೆ. ಕೇಳಿದವರೆಲ್ಲಾ ಯಾವ ರೀತಿ ಸ್ವೀಕರಿಸಿ ದ್ದಾರೋ ಗೊತ್ತಿಲ್ಲ. ಆದರೆ ನನ್ನ ಪ್ರಯತ್ನ ಮುಂದುವರೆಯುತ್ತದೆ ಎಂದು ಡಾ. ಸಂತೋಷ್ ಹೆಗ್ಡೆ ತಿಳಿಸಿದರು.
ಮಠಗಳು ಭಯೋತ್ಪಾದಕರ ಸೃಷ್ಟಿಸಬಾರದು: `ಸಚ್ಚಿದಾನಂದ ಶ್ರೀ’ ಗುರುವಂದನ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಡಾ.ಹಂ.ಪ.ನಾಗರಾಜಯ್ಯ, ಮಠಗಳು ಭಯೋತ್ಪಾದಕರು, ಉಗ್ರರು, ಆಯುಧದಾರಿಗಳ ಸೃಷ್ಟಿಸುವ ಜಾಗವಾಗ ಬಾರದು.
ಎಲ್ಲರನ್ನೂ ನಮ್ಮವರೇ ಎಂದು ಸ್ವಾಗತಿಸಿ, ಪ್ರೀತಿಸುವ ಮಾನವೀಯ ಧರ್ಮದ ಕೇಂದ್ರವಾಗಬೇಕು. ನಾನು ಮತ್ತು ಮಲ್ಲಾರಾಧ್ಯ 1970ರಲ್ಲಿ ರಾಜ್ಯದ ಎಲ್ಲಾ ಮಠಮಾನ್ಯಗಳು, ಆಶ್ರಮಗಳ ಪೀಠಾಧಿಪತಿಗಳನ್ನು ಒಂದೇ ವೇದಿಕೆ ಯಲ್ಲಿ ಸಮನ್ಯಯ ಧರ್ಮಸಭೆ ಆಯೋ ಜಿಸುವ ಜವಾಬ್ದಾರಿ ವಹಿಸಿಕೊಂಡಿದ್ದೆವು. ಎಲ್ಲಾ ಮಠಾಧೀಶರಿಗೂ ವೇದಿಕೆಯಲ್ಲಿ ಸಮಾನ ರೀತಿಯ ಆಸನ ವ್ಯವಸ್ಥೆ ಮಾಡುವ ನಿರ್ಣಯವನ್ನು ಎಲ್ಲರೂ ಒಪ್ಪಿದ್ದರು. ಆದರೆ 2 ದಿನ ಕಳೆದ ನಂತರ ಅನೇಕ ಮಠಾಧೀಶರ ಶಿಷ್ಯರು ಕರೆ ಮಾಡಿ, ಆಸನ ಒಂದೇ ರೀತಿಯಲ್ಲಿರಲಿ ಪರವಾಗಿಲ್ಲ. ಆದರೆ ನಮ್ಮ ಮಠ ತುಂಬಾ ಪ್ರಾಚೀನ ವಾದದ್ದು, ಹಾಗಾಗಿ ನಮ್ಮ ಗುರುಗಳ ಆಸನ ಒಂದೆರಡು ಇಂಚು ಎತ್ತರವಿರಲಿ ಎಂದು ಕೇಳಿಕೊಂಡಿದ್ದರು. ಆಗ ಮಠಾ ಧೀಶರುಗಳಲ್ಲಿ ಮೊದಲು ಸಮನ್ವಯತೆಯ ಅರಿವು ಮೂಡಬೇಕೆಂದು ತಿಳಿಯಿತು. ಆದರೆ ಅವಧೂತ ದತ್ತಪೀಠಕ್ಕೆ ಇದೇ ಮೊದಲ ಬಾರಿ ಬಂದಿದ್ದೇನೆ. ಇಲ್ಲಿನ ವಾತಾ ವರಣ ಹಾಗೂ ಶ್ರೀಗಳನ್ನು ಕಂಡಾಗ ಮನಸ್ಸಿಗೆ ಆಹ್ಲಾದವೆನಿಸಿತೆಂದು ಹೇಳಿದರು.
`ಸಚ್ಚಿದಾನಂದ ಶ್ರೀ’ ಗುರುವಂದನ ಗ್ರಂಥದ ತೂಕ, ಗಾತ್ರ, ಮಹತ್ವ ಎಲ್ಲವೂ ಅದ್ವಿತೀಯ. ನನಗೆ 15 ದಿನಗಳ ಹಿಂದೆಯೇ ಈ ಗ್ರಂಥ ನೀಡಿದ್ದರು. ಪುಟ್ಟ ವಿಶ್ವಕೋಶ ವಾಗಿರುವ ಇದನ್ನು ಓದಿ ನನ್ನ ಜ್ವಾನವೂ ವೃದ್ಧಿಸಿತು. ಕನ್ನಡ ಸಾಹಿತ್ಯ ಲೋಕಕ್ಕೆ ಇತ್ತೀಚೆಗೆ ಸಂದಿರುವ ಅಪರೂಪದ ಕೃತಿಗಳ ಸಾಲಿನಲ್ಲಿ `ಸಚ್ಚಿದಾನಂದ ಶ್ರೀ’ ಗುರುವಂದನ ಗ್ರಂಥ ಅಗ್ರ ಪಂಕ್ತಿ ಅಲಂಕರಿಸುವಂತಿದೆ. ಇದೊಂದು ಸಾರ್ವಕಾಲಿಕ, ಸಾತ್ವಿಕ, ಮೌಲ್ವಿಕ, ಅಪ ರೂಪದ ಕೃತಿಯನ್ನು ಸಂಪಾದಿಸಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ದರ್ಶನ ಸಾಕ್ಷಾತ್ಕಾರ: ರಾಷ್ಟ್ರ ಪ್ರಶಸ್ತಿ ಪುರಸ್ಕøತ ಸಂಸ್ಕøತ ವಿದ್ವಾಂಸ ಡಾ.ಎಚ್.ವಿ.ನಾಗರಾಜರಾವ್ ಗುರು ವಂದನ ಗ್ರಂಥ ಕುರಿತು ಮಾತನಾಡಿ, ಇದೊಂದು ಪುಸ್ತಕ ಮಾತ್ರವಲ್ಲ, ಇದೊಂದು ಗ್ರಂಥಾಲಯ. 22 ಅಧ್ಯಾಯಗಳಲ್ಲೂ ದರ್ಶನ ಸಾಕ್ಷಾತ್ಕಾರವಾಗುತ್ತದೆ. ಕಿರಿಯ ಶ್ರೀಗಳು ಅದ್ಭುತ ಸಂಸ್ಕøತ ಶ್ಲೋಕಗಳನ್ನು ಬರೆದಿದ್ದಾರೆ. ಆಶ್ರಮದ ಆಸ್ಥಾನ ಕವಿಯಾಗಿರುವ ಸಿಪಿಕೆ ಸೇರಿದಂತೆ ಸುಮಾರು 150 ಲೇಖಕರ ಒಟ್ಟು 164 ಲೇಖನಗಳಿವೆ. ಕವಿ ದೊಡ್ಡರಂಗೇಗೌಡರು ಶ್ರೀಗಳ ಕುರಿತು ಬರೆದಿರುವ ಕವಿತೆಯಿದೆ. 48 ಮಂದಿ ಮಹಿಳಾ ಲೇಖಕರಿಗೆ ಅವ ಕಾಶ ನೀಡಿದ್ದಾರೆ. 900 ಪುಟಗಳ ಬೃಹತ್ ಗ್ರಂಥದಲ್ಲಿರುವ ಒಂದೊಂದು ಲೇಖನ ವನ್ನೂ ಸ್ವತಂತ್ರ ಪುಸ್ತಕ ಮಾಡಬಹುದು. ವಿವಿಧ ಕ್ಷೇತ್ರಗಳ ತಜ್ಞರು, ಅನುಭವಿಗಳು ವಿಶಿಷ್ಟವಾಗಿ ಬರೆದಿದ್ದಾರೆ ಎಂದು ತಿಳಿಸಿದರು.
ನಮ್ಮ ಧರ್ಮ ಮಾತ್ರವೇ ಶ್ರೇಷ್ಠ ಎಂದು ತಿಳಿದಿರುವ ಮಂದಿ ಹೆಚ್ಚಿದ್ದಾರೆ. ಆದರೆ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಯಹೂದಿ ಎಲ್ಲಾ ಧರ್ಮಗಳ ಸಂತರು ಮಾನವೀಯತೆಯೇ ಶ್ರೇಷ್ಠ ಎಂದು ನುಡಿ ದಿದ್ದಾರೆ. ಈ ಸತ್ಯವನ್ನು `ಸಚ್ಚಿದಾನಂದ ಶ್ರೀ’ ಗ್ರಂಥ ಒಳಗೊಂಡಿದೆ. ತತ್ವಶಾಸ್ತ್ರ ವಿದ್ಯಾರ್ಥಿಗಳಿಗೆ ಉತ್ತಮವಾದ ಪಠ್ಯ ವಾಗುವಂತಿದೆ. ಒಂದೊಂದು ಅಧ್ಯಾ ಯವೂ ಹೊಸದಾದ ಪಾಠ ಕಲಿಸುತ್ತವೆ. ಗಣಪತಿ ಸಚ್ಚಿದಾನಂದ ಶ್ರೀಗಳ ಬಾಲ್ಯದಿಂದ ಈವರೆಗೂ ಎಲ್ಲಾ ಸಂಗತಿಗಳನ್ನು ತಿಳಿಸುತ್ತದೆ. ನವರತ್ನಗಳಿರುವ ಈ ಗ್ರಂಥ ಮನೆಯಲ್ಲಿದ್ದರೆ ವಿಶ್ವಕೋಶ ಜೊತೆಗಿದ್ದಂತೆ ಎಂದು ಅವರು ಅಭಿಪ್ರಾಯಿಸಿದರು.
ಗುರುವಂದನ ಗ್ರಂಥದ ಗೌರವ ಸಂಪಾದಕ, ಅವಧೂತ ದತ್ತ ಪೀಠದ ಆಸ್ಥಾನ ವಿದ್ವಾನ್, ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಸಮಾ ರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಂಪಾದಕರೂ ಆದ ಸಂಸ್ಕøತ ವಿಶ್ವವಿದ್ಯಾ ನಿಲಯದ ಕುಲಪತಿ ಡಾ.ಪದ್ಮಾ ಶೇಖರ್, ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್, ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಪತ್ರಕರ್ತ ಈಶ್ವರ್ ದೈತೋಟ, ಹಿರಿಯ ನಟ ಶ್ರೀನಾಥ್, ಸಾಹಿತಿ ಡಾ.ಕೆ.ಲೀಲಾ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.