ರಾಮಾಪುರ ಬಳಿ ಗಾಂಜಾ ವಶ; ಮೂವರ ಬಂಧನ

ಹನೂರು: ಜಿಲ್ಲಾ ಅಪರಾಧ ವಿಭಾಗದ ಪೊಲೀಸರು ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಕಡೆ ದಾಳಿ ಮಾಡಿ ಗಾಂಜಾ ವಶ ಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ಸರಹದ್ದಿನ ಸುಳ್ವಾಡಿ ಗ್ರಾಮದ ಆರ್ಚಕ ದೊಡ್ಡಯ್ಯತಮ್ಮಡಿ, ಮಾಧವರಾಜ್ ಹಾಗೂ ಶೆಟ್ಟಳ್ಳಿ ಗ್ರಾಮದ ನಾರಾಯಣ್ ಅವರನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಒಣಗಿಸಿ ಪ್ಯಾಕೇಟ್ ರೂಪದಲ್ಲಿ ಸಿದ್ಧಪಡಿಸಿ ಸುಳ್ವಾಡಿ ಗ್ರಾಮದ ಸುತ್ತಮುತ್ತ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಡಿಸಿಬಿ ಇನ್ಸ್‍ಪೆಕ್ಟರ್ ಮಹದೇವಶೆಟ್ಟಿ, ಪೊಲೀಸ್ ಸಿಬ್ಬಂದಿಗಳು ಗಾಂಜಾ ಖರೀದಿ ಮಾಡು ವವರ ಹಾಗೇ ಮಾರುವೇಷದಲ್ಲಿ ಸಂಪರ್ಕಿಸಿ ಪ್ರಕರಣ ಭೇದಿಸಲಾಯಿತು.

ಸುಳ್ವಾಡಿ ಗ್ರಾಮದ ದೊಡ್ಡಯ್ಯ ನಾಗಕನ್ನೆ ದೇವಸ್ಥಾನದ ಆರ್ಚನಾಗಿದ್ದು, ಜೊತೆಯಲ್ಲಿ ಮಾಧವರಾಜ್ ಎಂಬ ವ್ಯಕ್ತಿಯನ್ನು ಸಹ ವಶಕ್ಕೆ ಪಡೆದು 2.25 ಕೆ.ಜಿ ತೂಕದ 40000 ಬೆಲೆ ಬಾಳುವ ಗಾಂಜಾವನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಶೆಟ್ಟಳ್ಳಿ ಗ್ರಾಮದ ನಾರಾಯಣ್ ಎಂಬ ವ್ಯಕ್ತಿ ಗಾಂಜಾ ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ ರೆನ್ನಲಾಗಿದೆ. ನಂತರ ಶೆಟ್ಟಳ್ಳಿ ಗ್ರಾಮದಲ್ಲಿ ತನ್ನ ಜಮೀನಿನ ಬಾಳೆ ತೋಟದಲ್ಲಿ ಒಣಗಿಸಿ ಶೇಖರಣೆ ಮಾಡಿದ್ದ 500 ಗ್ರಾಂ ಗಾಂಜಾವನ್ನು ಸಹ ವಶಕ್ಕೆ ಪಡೆದು ನಾರಾಯಣ್ ನನ್ನು ಸಹ ಬಂಧಿಸಿದ್ದಾರೆ. ದಾಳಿಯಲ್ಲಿ ಸಿಬ್ಬಂದಿಗಳಾದ ಲೋಕೇಶ್, ಕುಮಾರ, ಸಿದ್ದಲಿಂಗ ಸ್ವಾಮಿ ಶ್ರೀನಿವಾಸ್‍ಮೂರ್ತಿ, ಮಲ್ಲಿಕಾ, ಮಹಾದೇವಸ್ವಾಮಿ ಪಾಲ್ಗೊಂಡಿದ್ದರು.