ಮನಸ್ಸಿನ ಕೊಳೆಯನ್ನು ತೊಳೆಯುವ ವಚನ ಸಾಹಿತ್ಯ

ಮೈಸೂರು: ವಚನ ಸಾಹಿತ್ಯ ಓದುವುದರಿಂದ ನಮ್ಮ ಬುದ್ಧಿ ಮತ್ತೆ ಯಲ್ಲಿನ ಕಶ್ಮಲ ತೊಳೆದು ಮನಸ್ಸು ಶುದ್ಧ ಗೊಳಿಸುತ್ತದೆ. ಹೀಗಾಗಿ ವಚನ ಸಾಹಿತ್ಯ ಓದುವುದನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ಮೈಸೂರು ಜಿಪಂ ಸಿಇಓ ಕೆ.ಜ್ಯೋತಿ ಅಭಿಪ್ರಾಯಪಟ್ಟರು.

ಮೈಸೂರಿನ ಕಲಾಮಂದಿರ ಮನೆಯಂಗಳ ದಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಯೋಜಿಸಿದ್ದ ವಚನಕಾರ ದೇವರ ದಾಸಿಮಯ್ಯ ಜಯಂತಿ ಕಾರ್ಯ ಕ್ರಮದಲ್ಲಿ ದಾಸಿಮಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನಲಾಗುತ್ತದೆ. ಅದನ್ನು ವೇದ ಸುಳ್ಳಾ ದರೂ ವಚನ ಸುಳ್ಳಾಗದು ಎಂದು ಹೇಳ ಬಹುದಾಗಿದೆ. ವಚನಗಳು ನಮ್ಮ ಬದು ಕನ್ನು ಶ್ರೀಮಂತಗೊಳಿಸುತ್ತವೆ. ವಚನ ಓದಿ ದಾಗ ನಮ್ಮಲ್ಲಿ ಪವಿತ್ರ ಭಾವನೆ ಮೂಡು ತ್ತದೆ ಎಂದು ಹೇಳಿದರು.

ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಕ್ರಾಂತಿಕಾರಕ ಘಟ್ಟ ಎಂದ ಅವರು, ಸಾಹಿತ್ಯ ಜನಜೀವನವನ್ನು ತಿದ್ದಿ ತೀಡುವ ಕೆಲಸ ಮಾಡಿದರೆ, ವಚನಗಳು ಮನಸ್ಸಿನ ಕೊಳೆ ಯನ್ನು ತೊಳೆಯುತ್ತವೆ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾ ಯಕ ನಿರ್ದೇಶಕ ಹೆಚ್.ಚನ್ನಪ್ಪ ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.