ಹಿರಿಯರ ಕರಾಟೆ ಪಂದ್ಯಾವಳಿಯಲ್ಲಿ ಮೈಸೂರಿನ ದಿಯಾ ಅರಸ್‍ಗೆ ಚಿನ್ನದ ಪದಕ

ಮೈಸೂರು:ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದಲ್ಲಿ ನಡೆದ ರಾಜ್ಯ ಮಟ್ಟದ ಹಿರಿಯರ ಕರಾಟೆ ಪಂದ್ಯಾವಳಿಯಲ್ಲಿ ಮೈಸೂರಿನ ಕರಾಟೆ ಪಟು ದಿಯಾ ಅರಸ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಅಖಿಲ ಕರ್ನಾಟಕ ಕರಾಟೆ ಅಸೋಸಿಯೇಷನ್ ವತಿಯಿಂದ 2019ರ ಜೂ.2ರಂದು ಆಯೋ ಜಿಸಿದ್ದ ಕರಾಟೆ ಪಂದ್ಯಾವಳಿಯಲ್ಲಿ ದಿಯಾ ಅರಸ್ ಅವರು ವೈಯಕ್ತಿಕ ಕಟಾ ವಿಭಾಗದಲ್ಲಿ 24.8 ಅಂಕ ಗಳಿಸಿ ಚಿನ್ನದ ಪದಕ ಪಡೆದುಕೊಂಡರೆ, ದಾವಣ ಗೆರೆಯ ಜಮುನಾ ಶುಕ್ಲಾ 22.6 ಅಂಕ ಗಳಿಸಿ ಬೆಳ್ಳಿ ಹಾಗೂ ದಕ್ಷಿಣ ಕನ್ನಡದ ಸವಿತಾ 20.7 ಅಂಕ ಪಡೆದು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಇದರೊಂದಿಗೆ ದಿಯಾ ಅರಸ್, ಚೆನ್ನೈನ ಕಿಲ್ಪಾಕನ ಜೆ.ಜೆ ಒಳ ಕ್ರೀಡಾಂಗಣದಲ್ಲಿ ಜೂನ್ 10-11ರಂದು ನಡೆಯುವ ಕರಾಟೆ ಅಸ್ಸೋಸಿಯೇಷನ್ ಆಫ್ ಇಂಡಿಯಾ ರಾಷ್ಟ್ರ ಹಿರಿಯರ ಕರಾಟೆ ಪಂದ್ಯಾವಳಿಯಲ್ಲಿ ಕಟಾ ವಿಭಾಗದಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಇವರೊಂದಿಗೆ ಬೆಂಗಳೂರಿನ ಪವನ್ ಕುಮಾರ್ (ಪುರುಷರ ಕಟಾ), ಕುಮಿತೆ ಮಹಿಳಾ ವಿಭಾಗಗಳಲ್ಲಿ ಶಾಲಿನಿ (-50 ಕೆಜಿ), ಲಿಲಿ ಯನ್ ಕ್ರಿಸ್ಟೀನಾ (-55 ಕೆಜಿ), ರಚನಾ ಸಿದ್ದೇಶ್ (-61 ಕೆಜಿ), ಜಮುನಾ ಶುಕ್ಲ (+68 ಕೆಜಿ) ಹಾಗೂ ಪುರುಷರ ಕುಮಿತೆಯಲ್ಲಿ ವೆಂಕಟೇಶ್ (-55 ಕೆಜಿ), ಅಶೋಕ್ ಕುಮಾರ್ (-60 ಕೆಜಿ), ಆನಂದ್ (-67 ಕೆಜಿ), ರಕ್ಷಿತ್ ರೆಡ್ಡಿ (-84 ಕೆಜಿ) ಮತ್ತು ಅಮಲ್ ಸೂರಜ್ (+84 ಕೆಜಿ) ಪ್ರತಿನಿಧಿಸಲಿದ್ದಾರೆ.