ಸಾವಯವ ಗೊಬ್ಬರದಿಂದ ಉತ್ತಮ ಬೆಳೆ

ಯಳಂದೂರು: ರೈತರು ತಾವೇ ಗೊಬ್ಬರ ತಯಾರಿಸಿಕೊಂಡು ಬೆಳೆಗಳನ್ನು ಬೆಳೆಯು ವುರಿಂದ ಉತ್ತಮ ಆದಾಯವನ್ನು ಪಡೆ ಯಬಹುದು ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕ ಜಿ.ಎಚ್.ಯೋಗೇಶ್ ಸಲಹೆ ನೀಡಿದರು.

ಅವರು ಬುಧವಾರ ಪಟ್ಟಣದ ಕೃಷಿ ಇಲಾಖೆಯ ಕಚೇರಿಯ ಆವರಣದಲ್ಲಿ ಹಮ್ಮಿ ಕೊಂಡಿದ್ದ ಕೃಷಿ ಅಭಿಯಾನ ಕಾರ್ಯಕ್ರಮ ದಲ್ಲಿ ಮಾತನಾಡಿದರು. ನಮ್ಮ ಭೂಮಿ ಕೇವಲ ನಮ್ಮ ಹಿರಿಯರು ಕೊಟ್ಟ ಸ್ವತ್ತಲ್ಲ. ಇದು ನಾವು ನಮ್ಮ ಮುಂದಿನ ಪೀಳಿಗೆಗೆ ನೀಡುವ ಉಡುಗೊರೆಯಾಗಬೇಕು. ಚಾಮರಾಜನಗರ ಜಿಲ್ಲೆ ಸುಧಾರಿತ ಕೃಷಿ ಪದ್ಧತಿಯ ಅಳ ವಡಿಕೆಯಲ್ಲಿ ಮುಂಚೂಣಿಯಲ್ಲಿದೆ. ಮಣ್ಣಿನ ಫಲವತ್ತತೆ ಹೆಚ್ಚಿಸುವಲ್ಲಿ ಬೋರಾಕ್ಸ್, ಫರಾಸ್, ಮ್ಯಾಂಗನೀಸ್ ಸಲ್ಫೇಟ್‍ನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ವಿಮೆ ಹಣ ಬಂದಿದೆ: ಕೃಷಿ ವಿಮೆ ಯೋಜ ನೆಯಡಿಯಲ್ಲಿ ಕಳೆದ ಬಾರಿ ಜಿಲ್ಲೆಯ 49139 ರೈತರಿಗೆ ರೂ. 39 ಕೋಟಿ ಹಣ ಬಂದಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಹಣ ಇನ್ನೂ ವಿತರಣೆಯಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದು, ಆದಷ್ಟು ಬೇಗ ಈ ಹಣ ವಿತರಣೆಯಾಗಲಿದೆ ಎಂದರು.

ಗಮನ ಸೆಳೆದ ವಸ್ತು ಪ್ರದರ್ಶನ: ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾ ಖೆಯ ವತಿಯಿಂದ ರೈತರಿಗೆ ಹಮ್ಮಿ ಕೊಂಡಿದ್ದ ಕೃಷಿ ವಸ್ತು ಪ್ರದರ್ಶನ ಗಮನ ಸೆಳೆಯಿತು. ಮೀನುಗಾರಿಕೆ ಇಲಾಖೆಯ ವತಿಯಿಂದ ಫೈಬರ್ ತೆಪ್ಪದಲ್ಲಿ ನೀರು ತುಂಬಿಸಿ ಜೀವಂತ ಮೀನುಗಳನ್ನು ಬಿಟ್ಟಿ ದ್ದನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು. ಪಶು ಸಂಗೋಪನೆ ಇಲಾಖೆಯ ವತಿಯಿಂದ ಇಡಲಾಗಿದ್ದ ಔಷಧಿಗಳಲ್ಲಿ ಅವಧಿ ಮೀರಿದ ಔಷಧಿಗಳಿದ್ದರಿಂದ ಜನಪ್ರತಿನಿಧಿಗಳು ಹಾಗೂ ಸಾರ್ವಜನಿ ಕರು ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಜಿಲ್ಲಾ ಪಂಚಾಯಿತಿ ಸದಸ್ಯೆ ಉಮಾ ವತಿ ಸಿದ್ದರಾಜು ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದರು. ತಾಪಂ ಅಧ್ಯಕ್ಷ ನಿರಂಜನ್, ಉಪಾಧ್ಯಕ್ಷೆ ಮಲ್ಲಾಜಮ್ಮ ನಂಜಯ್ಯ, ಸದಸ್ಯರಾದ ವೆಂಕಟೇಶ್, ಸಿದ್ದರಾಜು, ನಾಗರಾಜು, ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಕೃಷಿಕ ಸಮಾಜದ ಅಧ್ಯಕ್ಷ ಮಾದೇಶ್, ಟಿಎಪಿಸಿಎಂಸಿ ನಿರ್ದೇಶಕ ಚಿಕ್ಕಮಾದ್ಯ, ವಿಜ್ಞಾನಿ ಯೋಗೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೊಡ್ಡೇಗೌಡ, ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ, ತೋಟಗಾರಿಕೆ ಇಲಾಖೆಯ ಕೇಶವ, ರೇಷ್ಮೆ ಇಲಾಖೆಯ ಸೋಮಣ್ಣ, ಸಿಡಿಪಿಒ ಸೋಮಶೇಖರ್, ಶಂಕರೇಗೌಡ, ಕೃಷ್ಣ ಇತರರು ಇದ್ದರು.