ಯೋಗ ಜಾಗೃತಿಗೆ ನಡೆದ ಜಾಥಾ

ಚಾಮರಾಜನಗರ:  ಜಿಲ್ಲಾ ಡಳಿತ, ಜಿಪಂ ವತಿಯಿಂದ ಹಮ್ಮಿಕೊಂಡಿ ರುವ ಅಂತರಾಷ್ಟ್ರೀಯ ಯೋಗ ದಿನಾ ಚರಣೆ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸುವ ದಿಸೆಯಲ್ಲಿ ಇಂದು ಜಾಥಾ ಹಾಗೂ ಉಪನ್ಯಾಸ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಶಾ ಲಾಕ್ಷಿ ಅವರು ಯೋಗ ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಬಳಿಕ ನ್ಯಾಯಾಲಯ ಆವರಣ ದಿಂದ ಜಾಥಾ ಹೊರಟು ಜಿಲ್ಲಾಡಳಿತ ಭವ ನದ ಆವರಣದಲ್ಲಿ ಸಮಾವೇಶಗೊಂಡಿತು.

ತದನಂತರ ಜಿಲ್ಲಾಡಳಿತ ಭವನದಲ್ಲಿ ರುವ ಕೆಡಿಪಿ ಸಭಾಂಗಣದಲ್ಲಿ ಯೋಗ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮ ದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಪ್ರಕೃತಿ ಚಿಕಿತ್ಸೆ ವಿದ್ಯಾಲಯದ ಡಾ. ಸುಶ್ಮಿತ ಯೋಗದ ಮಹತ್ವ ಕುರಿತು ತಿಳಿಸಿಕೊಟ್ಟರು.
ಮನಸ್ಸನ್ನು ಹತೋಟಿಯಲ್ಲಿ ಇಟ್ಟು ಕೊಳ್ಳು ವುದೇ ಯೋಗ. ಜೀವನ ಶೈಲಿಯನ್ನು ಬದಲಿಸಿ ಕೊಂಡು ದೀರ್ಘ ಕಾಲ ಆರೋಗ್ಯದಿಂದ ಇರಲು ಯೋಗ ಅಭ್ಯಾಸ ಮಾಡುವುದು ಒಳಿತು ಎಂದು ಸುಶ್ಮಿತ ಸಲಹೆ ಮಾಡಿದರು.

ಅಹಾರ ಸೇವನೆ ಉಸಿರಾಟ ಪ್ರಕ್ರಿಯೆ ಬಗ್ಗೆಯೂ ಕಾಳಜಿ ವಹಿಸಬೇಕು. ದಿನನಿತ್ಯದ ಊಟ ಉಪಾಹಾರವನ್ನು ಚೆನ್ನಾಗಿ ಅಗಿದು ಸೇವಿಸಬೇಕು. ಇದರಿಂದ ಜೀರ್ಣಕ್ರಿಯೆ ಉತ್ತಮವಾಗಲಿದೆ. ಪ್ರತಿದಿನ ಕನಿಷ್ಟ 3 ಲೀ. ನೀರು ಸೇವಿಸಬೇಕು. ಪ್ರತಿವ್ಯಕ್ತಿ ದಿನವೊಂದಕ್ಕೆ 300 ಗ್ರಾಂಗಳಷ್ಟು ಹಣ್ಣನ್ನು ತಿನ್ನಬೇಕು. ಪೌಷ್ಠಿಕ ಆಹಾರ ಸೇವನೆ ನಿತ್ಯ ಯೋಗ ಉತ್ತಮ ಆರೊಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗ ಲಿದೆ ಎಂದರು. ಜಿಲ್ಲಾ ಅಯುಷ್ ಅಧಿಕಾರಿ ಡಾ.ಬಿ.ಪುನೀತ್‍ಬಾಬು, ಡಾ.ಶ್ರೀನಿವಾಸ್, ತೋಟದ್ ಮಲ್ಲಣ್ಣ, ಶಿಕ್ಷಣ ಇಲಾಖೆ ಅಧಿಕಾರಿ ತಮ್ಮಯ್ಯ, ದೈಹಿಕ ಶಿಕ್ಷಣ ಅಧಿಕಾರಿ ಫಿಲಿಪ್, ಧರ್ಮಸ್ಥಳ ಮಂಜುನಾಥ ಪ್ರಕೃತಿ ಚಿಕಿತ್ಸೆ ವಿದ್ಯಾಲಯದ ವೈದ್ಯರಾದ ಡಾ.ಎಲ್. ಮಾನಸ ಇತರರಿದ್ದರು.