ಪಾಂಡವಪುರದಲ್ಲಿ ಗುಡ್ ಫ್ರೈಡೇ ಆಚರಣೆ

ಪಾಂಡವಪುರ: ಪಟ್ಟಣದ ಸ್ವರ್ಗಾರೋಹಣ ಮಾತೆಯ ದೇವಾ ಲಯದಲ್ಲಿ (ಚರ್ಚ್‍ನಲ್ಲಿ )ಕೈಸ್ತ ಭಾಂಧವರು ಶ್ರದ್ದೆ, ಭಕ್ತಿಯಿಂದ ಪ್ರಭು ಕ್ರಿಸ್ತ ಏಸುವಿನ ಶಿಲುಬೆಯನ್ನು ಹೊತ್ತು ಪಾಡು ಮರಣ ಯಾತನೆಯನ್ನು ಧ್ಯಾನಿಸಿ ಪ್ರಾರ್ಥಿಸಿ ಪೂಜಿಸಿದರು. ಮಕ್ಕಳಿಂದ ಬೈಬಲ್ ರೂಪಕ ಪ್ರದರ್ಶನ ಗಮನ ಸೆಳೆಯಿತು.

ಶುಭ ಶುಕ್ರವಾರದ ಪ್ರಯುಕ್ತ ಏರ್ಪಡಿ ಸಿದ ವಿಶೇಷ, ಆರಾಧನೆಯಲ್ಲಿ ಚರ್ಚಿನ ಧರ್ಮಗುರು ಫಾದರ್ ಟಿ.ವಿನ್ಸೆಂಟ್‍ರವರ ನೇತೃತ್ವದಲ್ಲಿ ಪೂಜಾ ವಿಧಿಗಳನ್ನು ನೇರವೇರಿಸಿದರು. ಪ್ರಭು ಯೇಸು ಕ್ರಿಸ್ತರು ಮನುಕುಲದ ಪಾಪಗಳ ಪರಿಹಾರಕ್ಕಾಗಿ ಬಲಿದಾನವಾಗಿ ಶಿಲುಬೆಯಲ್ಲಿ ಪ್ರಾಣಾ ರ್ಪಣೆ ಮಾಡಿದ ಪವಿತ್ರ ಶುಕ್ರವಾರವನ್ನು ಕ್ರೈಸ್ತರು ವಿಶ್ವದೆಲ್ಲೆಡೆ ಆಚರಿಸುತ್ತಾರೆ. ಯೇಸುವಿನ ಶಿಲುಬೆ ಪ್ರೀತಿಯ ಸಂಕೇತ ಹಾಗೂ ತ್ಯಾಗದ ಪ್ರತೀಕವಾಗಿದ್ದು, ಶಿಲುಬೆ ಕ್ರಿಸ್ತರ ಮಾರ್ಗವಾಗಿದೆ. ಆ ಶಿಲುಬೆಯನ್ನು ಹೊತ್ತು ಹಿಂಬಾಲಿಸಿ ಪ್ರೀತಿ, ಸೇವೆ, ಕ್ಷಮೆ, ಕರುಣೆಯನ್ನು ಎಲ್ಲಾ ಜನರು ಅನುಸರಿಸ ಬೇಕೆಂದು ಕರೆ ನೀಡಿ ರಾಷ್ಟ್ರಕ್ಕಾಗಿ, ರೋಗಿ ಗಳಿಗಾಗಿ ಹಾಗೂ ಸಕಾಲದಲ್ಲಿ ಒಳ್ಳೆಯ ಮಳೆಗಾಗಿ ಪ್ರಾರ್ಥಿಸಿದರು.

ಮೈಸೂರು ಧರ್ಮಪ್ರಾಂತ್ಯದ ಹಿಂದಿನ ಧರ್ಮಾಧ್ಯಕ್ಷರಾದ ಡಾ. ಥಾಮಸ್, ಅಂತೋನಿವಾಜಪಿಳೈರವರು ಹನ್ನೆರಡು ಮಂದಿ ಕ್ರೈಸ್ತ ಭಕ್ತಾಧಿಗಳ ಪಾದಗಳನ್ನು ತೊಳೆದು ಕಾಲಿಗೆ ಮುತ್ತಿಟ್ಟರು.ಪ್ರಭುಕ್ರಿಸ್ತರು ತೋರಿಸಿದ ಹಾಗೂ ಅವರು ಮಾಡಿ ದಂತೆ ಸೇವೆ ಮಾಡುತ್ತಾ ಒಬ್ಬರನೊಬ್ಬರು ಪ್ರೀತಿಸಿರಿ, ಸೇವಕರಾಗಿ ಸೇವೆ ಮಾಡಿರಿ ಪ್ರತಿವ್ಯಕ್ತಿಯನ್ನೂ ಭಾತೃಪ್ರೇಮದಿಂದ ಕಾಣಬೇಕು, ಆ ಮೂಲಕ ದೇವರನ್ನು ಕಾಣಲು ಸಾಧ್ಯವೆಂದು ಅವರು ನುಡಿದರು.

ಮೈಸೂರು ಧರ್ಮ ಕ್ಷೇತ್ರದ ಶ್ರೇಷ್ಠ ಗುರು ಪಾಧರ್ ಸಿ.ರಾಯಪ್ಪರವರು ವಿಶೇಷ ಸಾಂಗ್ಯಗಳನ್ನು ಭಕ್ತಿಪೂರಕವಾಗಿ ನೆರ ವೇರಿಸಿ ಪ್ರಬೋಧನೆ ನೀಡಿದರು. ಬೂದಿ ಬುಧವಾರದಿಂದ ಶುಭ ಶುಕ್ರವಾರದವರೆಗೆ ನಲವತ್ತು ದಿನಗಳ ಕಾಲ ಕ್ರೈಸ್ತಬಾಂಧವರು ಮಾಂಸ ನಿಷೇಧಿಸಿ, ದಾನ, ಧರ್ಮ, ತಪ್ಪಸ್ಸು ಹಾಗೂ ಪ್ರಾರ್ಥನೆಯಲ್ಲಿ ತೊಡಗಿರುತ್ತಾರೆ. ಪವಿತ್ರ ಶನಿವಾರ ರಾತ್ರಿ ಜಾಗರಣೆ ಪ್ರಾರ್ಥಣೆ ಪೂಜೆ ಸಲ್ಲಿಸುತ್ತಾರೆ.

ಅಂದು ಈಸ್ಟರ್ ರಾತ್ರಿಯಂದು ಪ್ರಭು ಕ್ರಿಸ್ತರು ಸಮಾಧಿಯಿಂದ ಜೀವಂತವಾಗಿ ಎದ್ದು ಬಂದ ದಿನ ಭಾನುವಾರದಂದು ಕ್ರೈಸ್ತರು ಹಬ್ಬ ಆಚರಿಸುತ್ತಾರೆ.