ಮೈಸೂರು ಚಾಮುಂಡೇಶ್ವರಿ, , ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಗಳ ವ್ಯಾಪ್ತಿಯಲ್ಲಿ ಗೋಶಾಲೆ ನಿರ್ಧಾರ

ಬೆಂಗಳೂರು, ಫೆ.27 (ಕೆಎಂಶಿ)- ಮುಜರಾಯಿ ಇಲಾಖೆಗೆ ಹೆಚ್ಚಿನ ಆದಾಯ ತರುತ್ತಿರುವ ಪ್ರಮುಖ ದೇವಸ್ಥಾನಗಳ ವ್ಯಾಪ್ತಿಯಲ್ಲಿ ಗೋಶಾಲೆಗಳ ಆರಂ ಭಕ್ಕೆ ಸರ್ಕಾರ ಮುಂದಾಗಿದೆ.ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಜ ರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮೈಸೂರಿನ ಚಾಮುಂಡಿ, ನಂಜನಗೂಡು ಶ್ರೀಕಂಠೇ ಶ್ವರ ಸ್ವಾಮಿ, ಕೊಲ್ಲೂರು ಮೂಕಾಂಬಿಕೆ, ಬೆಂಗಳೂ ರಿನ ಬನಶಂಕರಿ ದೇವಸ್ಥಾನ ಸೇರಿದಂತೆ 25 ದೇವಾಲಯಗಳ ವ್ಯಾಪ್ತಿಯಲ್ಲಿ ಗೋಶಾಲೆಗಳನ್ನು ಆರಂಭಿಸುವುದಾಗಿ ಹೇಳಿದರು.

ಹತ್ತರಿಂದ 15 ಎಕರೆ ವಿಸ್ತೀರ್ಣದಲ್ಲಿ ಹಸುಗಳನ್ನು ಸಾಕಲು, ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸಲು ತೀರ್ಮಾನಿಸಿದ್ದೇವೆ. ಕೆಲವು ದೇವಾಲಯಗಳ ವ್ಯಾಪ್ತಿ ಯಲ್ಲಿ ದೊಡ್ಡ ಪ್ರಮಾಣದಲ್ಲಿ ಜಾಗ ದೊರೆಯು ತ್ತದೆ, ಸ್ಥಳ ದೊರೆಯದ ಕಡೆ 10ರಿಂದ 15 ಎಕರೆ ಭೂಮಿಯನ್ನು ಗುರುತಿಸಿ ಇಲಾಖೆಗೆ ವರ್ಗಾಯಿಸು ವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.

ಪ್ರತಿ ಗೋಶಾಲೆಯಲ್ಲಿ 100ರಿಂದ 200 ಗೋವು ಗಳನ್ನು ಸಾಕಲಾಗುವುದು, ಗೋಸಂರಕ್ಷಣೆ ವಿಷಯ ದಲ್ಲಿ ರಾಮಚಂದ್ರಾಪುರ ಮಠ ಅತ್ಯುತ್ತಮ ಕೆಲಸ ಮಾಡುತ್ತಿದೆ, ಅಲ್ಲಿನ ಸ್ವಾಮೀಜಿ ಮಾರ್ಗದರ್ಶನ ಪಡೆಯಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದ ಎಲ್ಲ ದೇವಾಲಯಗಳ ಆಸ್ತಿ ಸಂರಕ್ಷಣೆ ಮತ್ತು ಆದಾಯ ಸೋರಿಕೆ ತಡೆಗಟ್ಟಲು ತೀರ್ಮಾ ನಿಸಿದ್ದು, ಈ ಕುರಿತು ಪರಿಶೀಲಿಸಿ ಮುಂದಿನ 3 ತಿಂಗ ಳಲ್ಲಿ ವರದಿ ನೀಡುವಂತೆ ಹಿರಿಯ ಐಎಎಸ್ ಅಧಿ ಕಾರಿ ರೋಹಿಣಿ ಸಿಂಧೂರಿ ಅವರಿಗೆ ಸೂಚಿಸಲಾಗಿದೆ.

ಮುಜರಾಯಿ ದೇವಾಲಯಗಳ ಒಟ್ಟು ಆಸ್ತಿ ಪ್ರಮಾಣ ಎಷ್ಟು ಎಂಬ ವಿವರ ಪಡೆಯಬೇಕಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ದೇವಾಲಯಗಳ ಆಸ್ತಿಗಳ ಒತ್ತುವರಿ ದೂರುಗಳು ಬಂದಿವೆ. ಈ ಕುರಿತು ಸಮಗ್ರ ವಿವರ ಪಡೆದು ದೇವಾಲಯಗಳ ಆಸ್ತಿ ಸಂರಕ್ಷಿಸಬೇಕಿದೆ. ರಾಜ್ಯದಲ್ಲಿ 33,000ಕ್ಕೂ ಹೆಚ್ಚು ಮುಜರಾಯಿ ದೇವಾಲಯಗಳಿದ್ದು, ಇದರ ವ್ಯಾಪ್ತಿಯ ಆಸ್ತಿ-ಪಾಸ್ತಿ ಕುರಿತು ಸ್ಪಷ್ಟ ವಿವರ ಪಡೆಯಬೇಕಿದೆ. ದೇವಾಲಯಗಳ ಆದಾಯ ಸೋರಿಕೆ ಕುರಿತು ಹಲವು ದೂರುಗಳು ಬಂದಿವೆ, ಕೆಲವು ದೇವಾಲಯಗಳಲ್ಲಿ ಹುಂಡಿ ಬಗ್ಗೆ ನಿಗಾ ಇಡಲು ಸಿಸಿಟಿವಿ ಇದೆ. ರಾಜ್ಯದ 100 ಪ್ರಮುಖ ದೇವಾಲಯಗಳಲ್ಲಿ ಸಪ್ತಪದಿ ಕಾರ್ಯಕ್ರಮದಡಿ ನಡೆಸಲು ಉದ್ದೇಶಿಸಿರುವ ಸರಳ ಸಾಮೂಹಿಕ ವಿವಾಹ ಯೋಜನೆಯನ್ನು 2 ಹಂತಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಮೊದಲ ಹಂತದ ಸಾಮೂಹಿಕ ವಿವಾಹ ಕಾರ್ಯಕ್ರಮ ಏ.26ರಂದು ನಡೆಯಲಿದೆ. ಈ ಹಂತದಲ್ಲಿ ವಿವಾಹವಾಗಲು ಇಚ್ಛಿಸು ವವರು ಅರ್ಜಿ ಸಲ್ಲಿಸಲು ಮಾರ್ಚ್ 27 ಕೊನೆಯ ದಿನವಾಗಿದೆ, ಈಗಾಗಲೇ 1218 ಜೋಡಿಗಳು ಅರ್ಜಿಗಳನ್ನು ಪಡೆದಿದ್ದು, ಇದರಲ್ಲಿ 200 ಜೋಡಿ ದಾಖಲೆ ಸಲ್ಲಿಸಿದ್ದಾರೆ ಎಂದರು. ಎರಡನೇ ಹಂತದ ಸಾಮೂಹಿಕ ವಿವಾಹ ಕಾರ್ಯಕ್ರಮ ಮೇ 24ರಂದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ವಿವಾಹ ವಾಗುವ ಪ್ರತಿ ಜೋಡಿಗೆ 25 ಸಾವಿರ ರೂ. ವೆಚ್ಚ ಮಾಡಲಾಗುವುದು ಎಂದರು.