ತಾಲೂಕು ಪಂಚಾಯಿತಿಗೆ ಗ್ರಾಪಂ ನೌಕರರ ಮುತ್ತಿಗೆ

ಮದ್ದೂರು:  ಎಲ್ಲಾ ಗ್ರಾಪಂ ನೌಕರರಿಗೆ ಸರ್ಕಾರದ ಆದೇಶದಂತೆ ವೇತನ ನೀಡುವಂತೆ ಒತ್ತಾಯಿಸಿ ಕರ್ನಾ ಟಕ ರಾಜ್ಯ ಗ್ರಾಪಂ ನೌಕರರ ಸಂಘದ ತಾಲೂಕು ಸಮಿತಿ ವತಿಯಿಂದ ಪಟ್ಟಣದ ತಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು.
ಈ ಕೂಡಲೇ ವೇತನ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಆದೇಶದಂತೆ 55,114 ನೌಕರರಿಗೆ ಸರ್ಕಾರದಿಂದ ಇಎಫ್‍ಎಂಎಸ್ ಮೂಲಕ ವೇತನ ಸಿಗುವಂತೆ ಕ್ರಮವಹಿಸಬೇಕು. ಜೂ.5 ರಂದು ವಿಸಿಯಲ್ಲಿಯ ನಿರ್ದೇಶನದಿಂದ ಗೊಂದಲವುಂಟಾಗಿದ್ದು ಸ್ವಚ್ಛತಾಗಾರರಿಗೆ, 2ನೇ ಬಿಲ್ ಕಲೆಕ್ಟರ್ ಗಳಿಗೆ ಕ್ಲರ್ಕ್ ಡಾಟಾ ಎಂಟ್ರಿ ಆಪರೇಟರ್‍ಗಳಿಗೆ ಆಗಿರುವ ತೊಂದರೆ ನಿವಾರಿಸ ಬೇಕೆಂದು ಒತ್ತಾಯಿಸಿದರು.

ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆಯುಳ್ಳ 10 ವರ್ಷ ಸೇವೆ ಸಲ್ಲಿಸಿದ ಬಿಲ್ ಕಲೆಕ್ಟರ್ ಗಳಿಗೆ ಸಿಗುತ್ತಿದ್ದ ಗ್ರೇಡ್-2 ಕಾರ್ಯದರ್ಶಿ ಬಡ್ತಿ ಪುನಃ ಸಿಗುವಂತೆ ಮತ್ತು ಗ್ರಾಪಂ ನೌಕರರಿಗೆ ಪೆನ್ಷನ್, ವೈದ್ಯಕೀಯ ವೆಚ್ಚ, ಗ್ರಾಚ್ಯೂಟಿಗಳು ಸಿಗುವಂತೆ ಸೂಕ್ತ ಆದೇಶ ಹೊರಡಿಸಬೇಕು. ಅಪರ ಕಾರ್ಯದರ್ಶಿ ಗಳಾಗಿದ್ದ ಎಂ.ಎಸ್.ಸ್ವಾಮಿ ವರದಿ ಶಿಫಾರಸಿನಂತೆ ಜನಸಂಖ್ಯೆಗನುಗುಣವಾಗಿ ಗ್ರಾಪಂನಲ್ಲಿ ವಿವಿಧ ಹುದ್ದೆಗಳನ್ನು ಸೃಷ್ಠಿಸ ಬೇಕೆಂದು ಸರ್ಕಾರಕ್ಕೆ ಗ್ರಾಪಂ ನೌಕರರ ಸಂಘದ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಗೆಜ್ಜಲಗೆರೆ ರಾಮು ಒತ್ತಾಯಿಸಿದರು.

ಬಳಿಕ ತಾಪಂ ವ್ಯವಸ್ಥಾಪಕಿ ಜಯ ಲಕ್ಷಮ್ಮ ಅವರಿಗೆ ಮನವಿ ಪತ್ರ ಸಲ್ಲಿಸ ಲಾಯಿತು. ಸಿಐಟಿಯು ಮುಖಂಡರಾದ ಮಂಜುಳಾರಾಜ್, ನೌಕರರ ಸಂಘದ ತಾಲೂಕು ಗೌರವಾಧ್ಯಕ್ಷ ಎಸ್.ಶಿವ ರಾಮು, ಅಧ್ಯಕ್ಷ ಕೆ.ಟಿ.ಮಂಜು, ಖಜಾಂಚಿ ರಮೇಶ್, ಉಪಾಧ್ಯಕ್ಷ ಯೋಗೇಶ್, ಅನಿಲ್ ಕುಮಾರ್, ಮಂಚೇಗೌಡ, ಜಗದೀಶ್ ಇನ್ನಿತರರಿದ್ದರು.